/newsfirstlive-kannada/media/post_attachments/wp-content/uploads/2024/10/JAISHANKAR.jpg)
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಅಮಾನತು ನಿರ್ಧಾರ ಮರುಪರಿಶೀಲನೆ ಮಾಡಬೇಕು ಅಂತಾ ಪಾಕಿಸ್ತಾನ, ಭಾರತಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ಇದೀಗ ಭಾರತ ಸರ್ಕಾರ ತನ್ನ ನಿರ್ಧಾರ ಏನು ಅನ್ನೋದನ್ನ ತಿಳಿಸಿದೆ.
ಈ ಬಗ್ಗೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್.. ಪಾಕಿಸ್ತಾನ, ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಇಂಡಸ್ ನದಿ ನೀರಿನ ಬಗ್ಗೆ ಮಾತುಕತೆ ಇಲ್ಲ. ಪಾಕಿಸ್ತಾನವು ಮೊದಲು ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದಿದ್ದಾರೆ. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಸರ್ಕಾರ, ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿದೆ. ಪಾಕಿಸ್ತಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಟೆರರಿಸ್ಟ್ ಗಳಿದ್ದಾರೆ. ಪಾಕಿಸ್ತಾನ ಟೆರರ್ ಟ್ರೈನಿಂಗ್ ಕ್ಯಾಂಪ್​ಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/SINDHU-RIVER-1.jpg)
ಇದೇ ವೇಳೆ ಜೈ ಶಂಕರ್​, ಚೀನಾದ ಮುಖವಾಡವನ್ನೂ ಕಳಚಿಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಬಿಕ್ಕಟ್ಟಿನ ವೇಳೆ, ಚೀನಾದ ಸ್ಯಾಟಲೈಟ್​ಗಳು ಪಾಕಿಸ್ತಾನಕ್ಕೆ ಸಹಾಯ ಮಾಡಿವೆ ಎಂದಿದ್ದಾರೆ. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿತ್ತು. 9 ಉಗ್ರರ ನೆಲೆಗಳ ಮೇಲೆ ಭಾರತ ಅಟ್ಯಾಕ್ ಮಾಡಿ ಧ್ವಂಸ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಶುರುಮಾಡಿತು.
ಇದರಿಂದ ಭಾರತ ಅನಿವಾರ್ಯವಾಗಿ ಸ್ವಯಂ ರಕ್ಷಣೆಗಾಗಿ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಯಿತು. ಇದರಿಂದ ಎರಡು ದೇಶಗಳ ಮಧ್ಯೆ ಯುದ್ಧದ ಆತಂಕ ಉಂಟಾಗಿತ್ತು. ಈ ವೇಳೆ ಚೀನಾದ ಸ್ಯಾಟಲೈಟ್​ಗಳು ಪಾಕಿಸ್ತಾನಕ್ಕೆ ಸಹಾಯ ಮಾಡಿವೆ.
ಇದನ್ನೂ ಓದಿ: ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us