newsfirstkannada.com

ವಿವಾದ ಆಗ್ತಿದ್ದಂತೆ ರಾಮ ಮಂದಿರ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂತೋಷ್ ಲಾಡ್..!

Share :

Published February 19, 2024 at 9:11am

    ರಾಮ ಮಂದಿರ ಜಾಗ ಸರಿ ಇಲ್ಲ ಅಂತ ನಾನು ಹೇಳಿಲ್ಲ

    ಕೊಟ್ಟಿರೋ ಜಾಗಕ್ಕಿಂತ ಹೆಚ್ಚಿಗೆ ಜಾಗದಲ್ಲಿ ಮಂದಿರ ಕಟ್ಟಿದ್ದಾರೆಂದು ಉಲ್ಟಾ

    ಸಂತೋಷ್ ಲಾಡ್ ಹೇಳಿಕೆಗೆ ಬಿಜೆಪಿ ಆಕ್ರೋಶ

ಹುಬ್ಬಳ್ಳಿ: ರಾಮ‌ ಮಂದಿರ ಜಾಗ ಸರಿ ಇಲ್ಲ ಅನ್ನೋ ಹೇಳಿಕೆ ದೊಡ್ಡ ವಿವಾದ ಸೃಷ್ಟಿಯಾಗ್ತಿದ್ದಂತೆಯೇ ಸಚಿವ ಸಂತೊಷ್ ಲಾಡ್ ಸ್ಪಷ್ಟನೆ ನೀಡಿದ್ದಾರೆ. ರಾಮ ಮಂದಿರ ಜಾಗ ಸರಿ ಇಲ್ಲ ಅಂತಾ ಹೇಳಿರೋದಲ್ಲ. ಸುಪ್ರೀಂ ಕೋರ್ಟ್ ಏನು ಜಾಗ ಕೊಟ್ಟಿತ್ತೋ, ಅದೇ ಜಾಗದಲ್ಲಿ ಎಕ್ಸ್​ಟ್ರಾ ಜಾಗದಲ್ಲಿ ಕಟ್ಟಿದಾರೆ ಎಂದು ಹೇಳಿದ್ದೀನಿ ಎಂದಿದ್ದಾರೆ.

ನಾನು ಜನರಲ್ ಆಗಿ ಕಾಮೆಂಟ್ ಮಾಡಿದ್ದೀನಿ. ಸುಪ್ರೀಂ ಕೋರ್ಟ್ ಕೊಟ್ಟಿರೋ ಜಾಗಕ್ಕಿಂತ ಹೆಚ್ಚಿಗೆ ಕಟ್ಟಿದ್ದಾರೆ. ಜಾಗದ ವಹಿವಾಟಿನಲ್ಲಿ ಅವ್ಯವಹಾರ ಆಗಿದೆ. ರಾಮನ ವಿಷಯ ಮಾತನಾಡಿದ್ರೆ ಇವರಿಗೇನು ತೊಂದರೆ? ರಾಮ ಮಂದಿರ ಕಟ್ಟಬಾರದು ಅಂತಾ ಅಲ್ಲ. 40 ಪರ್ಸೆಂಟ್ ಕಟ್ಟಿರೋ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ.

ಹೊರಗಡೆ ಏನು ಚರ್ಚೆ ಆಗ್ತಿದೆ ಅನ್ನೋದು ಗೊತ್ತಿಲ್ಲ. ರಾಮ ಮಂದಿರ ಕಟ್ಟಿರೋ ಕಾರಣಕ್ಕೆ ಬಡವರಿಗೆ ಅನಕೂಲ ಆಗುತ್ತೆ ಅಂತಾ ಏನೂ ಕಂಡಿಲ್ಲ. ಎಲ್ಲರೂ ದೇವರು ಭಕ್ತರು, ದೇವರ ಭಕ್ತರಿಗೆ ಬಡತನ ಇಲ್ವಾ? ಇವರು ಮಂದಿರ ಕಟ್ಟಿ ವೋಟ್ ಕೇಳುತ್ತಿದ್ದಾರೆ. ಪ್ರಪಂಚದಲ್ಲಿ ಬಡತನ ಇದೆ. ಸೂರ್ಯ ಚಂದ್ರ ಇರೋವರೆಗೂ ಬಡತನ ಇರುತ್ತೆ. ಇವರ ಹತ್ತು ವರ್ಷದಲ್ಲಿ ಬಡತನ ಹೇಗೆ ನಿರ್ಮೂಲನೆ ಆಯ್ತು ಅಂತಾ ಹೇಳತಿಲ್ಲ. ರಾಮ‌ಮಂದಿರ ಕಟ್ಟಿರೋ ಬಗ್ಗೆ ಮಾತಾಡ್ತಿದ್ದಾರೆ. ಆ ಉದ್ದೇಶಕ್ಕೆ ನಾನು ಹೇಳಿದೆ.

ರಾಮನ ಬಗ್ಗೆ ಮಾತಾಡಿದ್ರೆ ಸಮಸ್ಯೆ ಯಾಕೆ? ಹಿಂದೂ ಕೋಡಿಫಿಕೇಶನ್ ಬಿಲ್ ತಂದಿದ್ದು ಅಂಬೇಡ್ಕರ್. ಪ್ರತಿಯೊಬ್ಬ ಹಿಂದೂ ಅಂಬೇಡ್ಕರ್ ಫೋಟೋ‌ ಹಾಕಬೇಕು. ಹಿಂದುತ್ವದ ಬಗ್ಗೆ ಮಾತಾಡೋರು ಎಲ್ಲರೂ ಅಂಬೇಡ್ಕರ್ ಫೊಟೋ ಹಾಕಬೇಕು. ಜೊತೆಗೆ ನೆಹರೂ ಫೊಟೋ ಕೂಡ ಹಾಕಬೇಕು. ಹಿಂದೂ ಕೋಡ್ ಬಿಲ್ ಮೊದಲ ಬಾರಿಗೆ ಪಾರ್ಲಿಮೆಂಟ್​ನಲ್ಲಿ ಪಾಸ್ ಆಗುತ್ತದೆ. ಆಗ ಅಂಬೇಡ್ಕರ್ ರಾಜೀನಾಮೆ ಕೊಡ್ತಾರೆ.

ನೆಹರು ಅವರು ನಾಲ್ಕು ಹಂತದಲ್ಲಿ ಹಿಂದೂ ಕೋಡ್ ಬಿಲ್ ಪಾಸ್ ಮಾಡ್ತಾರೆ. ಇವರದೇನು ಕ್ರೇಡಿಟ್ ಇದೆ. ನೆಹರು ಪಾತ್ರ ಇದೆ ಅನ್ನೋದು ನಮ್ಮ ವಾದ. ಇಂದು ಭೂಮಿ ಸಿಗುತಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ. ಯಾವ ಹಿಂದೂ ಸಂಘಟನೆಗಳೂ ಅಲ್ಲ. ರಾಮನ ಹೆಸರು ಹೇಳಿ ಹಿಂದೂ ಅಂತಾ ಮಾತಾಡಿದ್ರೆ ಹಿಂದೂ ಆಗಲ್ಲ. ಕಾನೂನು ಯಾರ ತಂದರೂ ಅವರ ಪರವಾಗಿ ಮಾತಾಡಬೇಕು. ರಾಮಸೇತು ವಿಚಾರವಾಗಿ ಪಾರ್ಲಿಮೆಂಟ್​ನಲ್ಲಿ ಏನು ಉತ್ತರ ಕೊಟ್ಟಿದ್ದಾರೆ. ರಾಮ ಬಿಜೆಪಿ ಅವರಿಗೆ ಕಾಂಟ್ಯಾಕ್ಟ್ ಇದೆಯಾ? ನಮಗೂ ರಾಮನ ಬಗ್ಗೆ ಗೌರವ ಇದೆ. ರಾಮನಿಗೆ ಮುಸ್ಲಿಮರಿಗೂ ಬೇಕು, ಸಿಕ್​ರಿಗೂ ಬೇಕು, ಎಲ್ಲರಿಗೂ ಬೇಕು. ನಮಗೆ ದುರ್ಗಮ್ಮ ಬೇಕು, ಪಾಂಡುರಂಗ ಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾದ ಆಗ್ತಿದ್ದಂತೆ ರಾಮ ಮಂದಿರ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂತೋಷ್ ಲಾಡ್..!

https://newsfirstlive.com/wp-content/uploads/2024/02/SANTOSH-LAD-2.jpg

Load More