/newsfirstlive-kannada/media/post_attachments/wp-content/uploads/2024/11/SIDDARAMAIAH-2.jpg)
ನನ್ನ ಮುಟ್ಟಿದರೆ ಕರ್ನಾಟಕದ ಜನ ಸುಮ್ಮನೆ ಇರಲ್ಲ. ಹೀಗೆ ಗುಟುರು ಹಾಕಿದ್ದ ಸಿಎಂ ಸಿದ್ದರಾಮಯ್ಯ, ಬಿಜೆಪಿಯನ್ನ ಗುರಿಯಾಗಿಸಿ ದಾಳಿ ನಡೆಸಿದ್ದರು. ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಈ ಮಧ್ಯೆ ಶೆಟ್ಟರ್​​ ಹಾಕಿದ ಹೊಸ ಬಾಂಬ್​ ಮತ್ತಷ್ಟು ಸದ್ದು ಮಾಡುತ್ತಿದೆ.
ಮುಡಾ ಬಳಿಕ ಹೊಸ ಅಪ್​ಡೇಟ್​​ ವರ್ಷನ್​​ ಬಂದಿದೆ. ಅದು 50 ಕೋಟಿ ರೂಪಾಯಿ ಆಫರ್​ ಬಾಂಬ್​.. ಅಲ್ಲ, ಶಾಸಕರೇನಾದ್ರೂ ಮಾರ್ಕೆಟ್​​ನಲ್ಲಿ ಮಾರಾಟದ ವಸ್ತುವಾದ್ರಾ?. ಅದು ಸಿದ್ದರಾಮಯ್ಯರೇ ಹೇಳಬೇಕು. ಜೊತೆಗೆ ಮುಟ್ಟಿದರೆ ತಟ್ತಾರೆ ಅನ್ನೋ ಅರ್ಥದಲ್ಲಿ ನೀಡಿದ ದಂಗೆ ಮಾತು ರಾಜ್ಯ ರಾಜಕೀಯದಲ್ಲಿ ದಂಗಲ್​​ ಎಬ್ಬಿಸಿದೆ. ಎಲ್ಲಾ ಓಕೆ ಜನ ಸುಮ್ನಿರಲ್ಲ ಅನ್ನೋ ಮಾತೇಕೆ ಅನ್ನೋದು ಯಕ್ಷಪ್ರಶ್ನೆ.
/newsfirstlive-kannada/media/post_attachments/wp-content/uploads/2024/11/JAGADISH_SHETTER.jpg)
ಕೇಜ್ರಿವಾಲ್​ ನೆನಪಿಸಿದ್ದೇಕೆ ಜಗದೀಶ್​ ಶೆಟ್ಟರ್​?
ಸಿಎಂ ರಾಜೀನಾಮೆ ಯಾವಾಗ ಅನ್ನೊದಕ್ಕೆ ಸಂಸದ ಜಗದೀಶ್​​ ಶೆಟ್ಟರ್​ ಉತ್ತರ ಕೊಟ್ಟಿದ್ದಾರೆ. ಮುಡಾದಲ್ಲಿ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಈಗಾಗಲೇ ರಾಜೀನಾಮೆ ಕೊಡಬೇಕಿತ್ತು. ಮೋಸ್ಟ್​ಲೀ ಕೇಜ್ರಿವಾಲ್​​ರನ್ನ ಫಾಲೋ ಮಾಡ್ತಾರೋ ಏನೋ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಬಂಧನ ಆಗ್ತಾರಾ ಅನ್ನೋ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.
‘ಜೈಲಿಗೆ ಹೋಗುವ ತನಕ ರಿಸೈನ್​​​ ಮಾಡಲ್ವಾ’
ನಾವೇನು ಅವರನ್ನು ಅಧಿಕಾರದಿಂದ ಇಳಿಸಿ ಆಪರೇಷನ್ ಕಮಲ ಮಾಡಿ ಸಿಎಂ ಸ್ಥಾನದಿಂದ ಇಳಿಸಬೇಕೆಂದು ನಾವು ಹೊರಟಿಲ್ಲ. ಅವರನ್ನು ತೆಗೆಯಬೇಕು ಎಂದು ಪ್ರಯತ್ನ ಮಾಡುತ್ತಿರುವವರೇ ಅಲ್ಲಿರುವ ಕಾಂಗ್ರೆಸ್ ನಾಯಕರು. ಇವರು ಎಷ್ಟೇ ಮಾತನಾಡಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಮಯ ಬರುತ್ತದೆ. ಮುಡಾ ಹಗರಣದಲ್ಲಿ ಇವರ ಹೆಸರು ಹೆಚ್ಚು ಕೇಳುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಜೈಲಿಗೆ ಹೋಗುವವರೆಗೂ ನಾವು ವಿಚಾರ ಮಾಡಬೇಕು ಆಗುತ್ತದೆ. ಕೇಜ್ರಿವಾಲ್ ಜೈಲಿಗೆ ಹೋದ ಬಂದ ಮೇಲೆ ರಾಜೀನಾಮೆ ಕೊಡುವುದಿಲ್ಲ ಎನ್ನುವ ಬಂಡತನ ಬಂದು ಬಿಟ್ಟಿದೆ. ಇದಕ್ಕೆ ಮೋದಿ ಅವರು ಕಾರಣ ಆಗುವುದಿಲ್ಲ. ಆದರೆ ಅವರು ಮಾಡಿದ ಸ್ವಯಂಕೃತ ಅಪರಾಧ ಮಾಡಿದ್ದರಿಂದ ಸಿದ್ದರಾಮಯ್ಯ ಜೈಲಿಗೆ ಹೋಗಬಹುದು.
ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಇನ್ನು, ಕೊಪ್ಪಳದ ಶಿವರಾಜ್​​​ ತಂಗಡಗಿ, ಧಾರವಾಡದ ಲಾಡ್​​ ಸಹ 50 ಕೋಟಿ ಬಗ್ಗೆ ಮಾತಾನಾಡಿದ್ದು, ಬಿಜೆಪಿಯನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಸಿಎಂ ಹೇಳಿದ್ದಾರೆ ಅಂದ್ಮೇಲೆ ಮುಗಿತು. ಬಿಜೆಪಿ ಇಂಥ ಕೆಲಸಕ್ಕೆ ಕೈ ಹಾಕೇ ಹಾಕಿರುತ್ತೆ ಬಿಡಿ ಎಂದಿದ್ದಾರೆ.
‘ಸರ್ಕಾರ ತೆಗೆಯಲು ಬಿಜೆಪಿ ಯತ್ನ’
ಇದೆ ಎಂದು ನಮಗೂ ಅನಿಸುತ್ತಿದೆ. ಬಿಜೆಪಿಯವರು ಎಂದೂ ಕೂಡ ಸ್ವಂತ ಬುದ್ಧಿಯಿಂದ, ಸ್ವಂತ ಬಲದಿಂದ, ಸ್ವಂತ ಜನರ ಆಶೀರ್ವಾದಿಂದ ಇಲ್ಲಿವರೆಗೆ ಸರ್ಕಾರ ರಚನೆ ಮಾಡಿಲ್ಲ. ಇದರಂತೆ ಈಗ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ಎಲ್ಲಿಯೂ ಹೋಗುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ. ಸರ್ಕಾರ ಗಟ್ಟಿಯಾಗಿ ಇರುತ್ತೆ. ಬಿಜೆಪಿಯವರಿಗೆ ಒಳ್ಳೆಯ ಪಾಠ ಕಲಿಸುವಂತ ಕೆಲಸ ಮಾಡುತ್ತದೆ.
ಶಿವರಾಜ್ ತಂಗಡಗಿ, ಸಚಿವ
/newsfirstlive-kannada/media/post_attachments/wp-content/uploads/2024/11/SANTHOSH_SHIVARAJ.jpg)
‘ನಂಬರ್​ ಜಾಸ್ತಿ ಇದೆ, ಕಷ್ಟ ಬೀಳ್ತಿದ್ದಾರೆ’
ಸಿಎಂ ಹೇಳಿದಂತೆ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಎಲ್ಲಿವರೆಗೆ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿವರೆಗೆ ಇಂತಹ ಪ್ರಯತ್ನಗಳು ಇರುತ್ತವೆ. ಇದೇನು ಹೊಸದಲ್ಲ. ಕಳೆದ 16 ತಿಂಗಳಿನಿಂದ ಏನೂ ಆಗಿಲ್ಲ, ಮುಂದೆನೂ ಆಗಲ್ಲ. ಆದರೆ ಸರ್ಕಾರ ಬೀಳಿಸಬೇಕು ಎನ್ನುವ ಅವರ ಪ್ರಯತ್ನ ಮಾತ್ರ ಇದೆ. ನಮ್ಮಲ್ಲಿ ನಂಬರ್ ಜಾಸ್ತಿ ಇದೆ, ಅದಕ್ಕೆ ಕಷ್ಟ ಬೀಳುತ್ತಿದ್ದಾರೆ. ನಂಬರ್ಸ್ ಕಡಿಮೆ ಇದ್ದರೇ ಬಹಳ ಈಜಿಯಾಗಿ ಮಾಡುತ್ತಾರೆ.
ಸಂತೋಷ್ ಲಾಡ್, ಸಚಿವ
ಆರೋಪ ಮಾಡಿದ​ ನಂತರ ಬಿಜೆಪಿನೂ ತಿರುಗೇಟು ಕೊಡಲೇಬೇಕು ಅಲ್ವಾ, ಕೊಡುತ್ತಿದ್ದಾರೆ. ಮುಡಾ ಮತ್ತು ವಕ್ಫ್​ನ ಅಕ್ರಮ ಆರೋಪಗಳ ಬಗ್ಗೆ ಒಂದು ವಿಡಿಯೋ ಮಾತ್ರ ಸಖತ್​ ಸದ್ದು ಮಾಡುತ್ತಿದೆ. ಸರ್ಕಾರ ಈಗ ಬೀಳುತ್ತೆ? ನಾಳೆ ಬೀಳುತ್ತೆ. ಯಾವಾಗ ಬೇಕಾದ್ರೂ ಬಿದ್ದು ಹೋಗಬಹುದು. ಇದೇ ಚರ್ಚೆಗಳು ನಡೀತ್ತಿವೆ. ಇನ್ನು, ಉಪ-ಚುನಾವಣೆಯ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್‌ನ ಒಳಜಗಳ ಹೇಗಿರುತ್ತೋ ಏನೋ? ಆದ್ರೆ ಜಗಳ ಹೇಗಿರಲಿದೆ ಅನ್ನೋ ಕುತೂಹಲ ದೋಸ್ತಿಗಳಿಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us