ದಲಿತ ಸಿಎಂ ದಾಳ.. ದಿಢೀರ್ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ; ಏನಿದರ ರಹಸ್ಯ?

author-image
admin
Updated On
ಜಾರಕಿಹೊಳಿ ಖರ್ಗೆ ಭೇಟಿ ಬೆನ್ನಲ್ಲೇ ಡಿಕೆ ಬ್ರದರ್ಸ್ ಅಲರ್ಟ್​​; ಕಾಂಗ್ರೆಸ್​ನಲ್ಲಿ ಕುತೂಹಲ ಮೂಡಿಸಿದ ನಾಯಕರ ನಡೆ
Advertisment
  • ಸಿಎಂ ಸಿದ್ದರಾಮಯ್ಯ ಬದಲಾವಣೆ ಅನಿವಾರ್ಯವಾದ್ರೆ ಮುಂದೇನು?
  • ಒಂದು ಗಂಟೆಗೂ ಹೆಚ್ಚು ಕಾಲ ಖರ್ಗೆ ಜೊತೆ ರಹಸ್ಯ ಮಾತುಕತೆ
  • ಪರಮೇಶ್ವರ್, ಮಹದೇವಪ್ಪ ಅವರ ಜೊತೆ ಚರ್ಚೆ ಬಳಿಕ ಭೇಟಿ

ಸಿಎಂ ಸಿದ್ದರಾಮಯ್ಯ ಅವರ ಸುತ್ತಾ ಮುಡಾ ಹಗರಣದ ಆರೋಪ ಆವರಿಸಿಕೊಂಡಿದೆ. ವಿರೋಧ ಪಕ್ಷದ ನಾಯಕರು ಕುಂತಲ್ಲಿ, ನಿಂತಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಮುಡಾ ಕೇಸ್ ಕಾವು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರು ದಿಢೀರ್ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಖರ್ಗೆ ಅವರ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಚರ್ಚೆ ನಡೆಸಿರೋದು ತೀವ್ರ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ‘ಸಿದ್ದುಗೆ ಚಾಮುಂಡೇಶ್ವರಿ ಆಶೀರ್ವಾದವಿದೆ, ಹೆಚ್​ಡಿಕೆ ರಿಸೈನ್ ಮಾಡ್ತಾರಾ‘? ರಾಜ್ಯ ರಾಜಕಾರಣದಲ್ಲಿ ಜಿಟಿಡಿ ಹೊಸ ಬಾಂಬ್! 

ದಲಿತ ನಾಯಕರ ರಹಸ್ಯ ಸಭೆ
ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳುವ ಮುನ್ನ ರಾಜ್ಯದಲ್ಲಿ ಮಹತ್ವದ ಬೆಳವಣಿಗೆ ನಡೆದಿತ್ತು. ಕಳೆದ 2 ದಿನದ ಹಿಂದೆ ಹೆಚ್.ಸಿ ಮಹದೇವಪ್ಪ ನಿವಾಸದಲ್ಲಿ ಈ ಸಭೆ ನಡೆದಿತ್ತು. ಸಚಿವರಾದ ‌ಪರಮೇಶ್ವರ್ ಹಾಗೂ ಮಹದೇವಪ್ಪ ಅವರ ಜೊತೆ ಸತೀಶ್ ಜಾರಕಿಹೊಳಿ ಅವರು ಮಹತ್ವದ ಚರ್ಚೆ ನಡೆಸಿದ್ದರು.

ಡಾ.ಜಿ ಪರಮೇಶ್ವರ್, ಹೆಚ್.ಸಿ ಮಹದೇವಪ್ಪ ಅವರ ಜೊತೆ ಚರ್ಚೆ ಬಳಿಕ ದೆಹಲಿಗೆ ತೆರಳಿದ ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದಾರೆ. ಖರ್ಗೆ ಅವರ ಜೊತೆ ಮಹತ್ವದ ಚರ್ಚೆ ನಡೆಸಿರುವ ಸತೀಶ್ ಜಾರಕಿಹೊಳಿ ಅವರು ಪ್ರಮುಖವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

publive-image

ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಾವೆಲ್ಲರೂ ನಿಂತುಕೊಳ್ಳೋಣ. ಬದಲಾವಣೆ ಅನಿವಾರ್ಯವಾದ್ರೆ ದಲಿತ‌ ಸಮುದಾಯಕ್ಕೆ ಸಿಎಂ ಅವಕಾಶ ತಪ್ಪದಂತೆ ನೋಡಿಕೊಳ್ಬೇಕು. ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಎದುರಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸಿಎಂ ಸ್ಥಾನ ಸಿಗಬೇಕು. ಒಗ್ಗಟ್ಟಾಗಿ ನಿಂತು ಸಮುದಾಯಕ್ಕೆ ಸಿಎಂ ಸ್ಥಾನ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ಸಂದೇಶದೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು AICC ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡುವ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಮುಡಾ ಹಗರಣದಲ್ಲಿ ನಡೆಯುತ್ತಿರುವ ಮುಂದಿನ ಬೆಳವಣಿಗೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment