/newsfirstlive-kannada/media/post_attachments/wp-content/uploads/2025/03/SATISH-JARKIHLI.jpg)
ಬೆಂಗಳೂರು: ಎಲ್ಲರೂ RAC ಟಿಕೆಟ್ ಇಟ್ಕೊಂಡು ಸಿಎಂ ಹುದ್ದೆಗೆ ಕಾಯ್ತಿದ್ದಾರೆ. ಟ್ರಾಫಿಕ್ ಜಾಮ್ ಆದರೆ ನನಗೆ ಸಿಕ್ಕರೂ ಸಿಗಬಹುದು ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿ ಪ್ರವಾಸ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು.. ಡಿಸಿಎಂ ಸುರೇಶ್ ಕೂಡ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿತಾರೆ ಎಂದಿದ್ದಾರೆ. ಕ್ಲೈಂ ಮಾಡೋರೇ ಸಿಎಂ ಹುದ್ದೆಯ ಬಗ್ಗೆ ಹೇಳಿದ್ದಾರೆ. ಸಿಎಂ ವಿಚಾರದ ಬಗ್ಗೆ ಕ್ಲೖಮ್ ಮಾಡಲು ಎಲ್ಲರಿಗೂ ಅವಕಾಶ ಇದೆ. ಎಲ್ಲರೂ RAC ಟಿಕೆಟ್ ಇಟ್ಕೊಂಡು ಸಿಎಂ ಹುದ್ದೆಗೆ ಕಾಯ್ತಿದ್ದಾರೆ. 2028ರಲ್ಲೂ RAC ಆಗಬಹುದು, ನಮ್ಮಕಡೆನೂ RAC ಇದೆ.
RACಯಲ್ಲಿ ಟಿಕೆಟ್ ಸಿಗುತ್ತೆ ಅನ್ನೋದು ಕನ್ಫರ್ಮ್ ಇಲ್ಲ. ಟ್ರಾಫಿಕ್ ಜಾಮ್ನಲ್ಲಿ ಮೆಜೆಸ್ಟಿಕ್ನಲ್ಲಿ ಕೂತರೆ ಸ್ಟೇಷನ್ಗೆ ಬರೋದು ಲೇಟ್ ಆಗುತ್ತೆ. ಜಾಮ್ ಆದರೆ ನಮಗೆ ಚಾನ್ಸ್ ಸಿಕ್ಕರೂ ಸಿಗಬಹುದು, ಹೇಳೋಕೆ ಆಗಲ್ಲ. ಆದರೆ ನನಗೆ ಬೇಗ ಸಿಗಬಹುದು ಅಂತಾ ಮಾರ್ಮಿಕವಾಗಿ ಮಾತನಾಡಿದ್ದಾರೆ.
ವರಿಷ್ಠರ ಭೇಟಿಯ ಸಂದರ್ಭದಲ್ಲಿ ಕೆಪಿಸಿಸಿ ಆಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಿಲ್ಲ. ನಾನು ದೆಹಲಿಗೆ ಹೋದೆ ಎಂದು ಶಿವಕುಮಾರ್ ದೆಹಲಿಗೆ ಬಂದಿಲ್ಲ. ಸಚಿವ ಎಂ.ಬಿ. ಪಾಟೀಲ್ ನನ್ನನ್ನು ಭೇಟಿಯಾಗಿದ್ದು, ಅಭಿವೃದ್ಧಿ ಸಂಬಂಧ, ಬದಲಾವಣೆ ಬಗ್ಗೆ ನಮ್ಮ ನಮ್ಮ ಕಡೆ ಇಲ್ಲ, ವರಿಷ್ಠರನ್ನ ಕೇಳಬೇಕು ಎಂದರು. ಇದೇ ವೇಳೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಬೆಲೆ ಏರಿಕೆ ಎಲ್ಲಾ ಸರ್ಕಾರದಲ್ಲೂ ಇರುತ್ತೆ. 10-20 ವರ್ಷದ ದೂರದೃಷ್ಟಿ ಇಟ್ಟು ಸರ್ಕಾರ ನಿರ್ಧಾರ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಬ್ಯಾಕಾಂಕ್ನಲ್ಲಿ ಪ್ರಬಲ ಭೂಕಂಪ; ಬೃಹತ್ ಕಟ್ಟಡ ಧರೆಗುರುಳಿದ ಭಯಾನಕ ದೃಶ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ