/newsfirstlive-kannada/media/post_attachments/wp-content/uploads/2025/06/SATISH_JARAKIHOLI.jpg)
ಚಿಕ್ಕಮಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಫೈಲ್ಯೂರ್ ಆಗಿರೋದು ನಿಜ. ಅದಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಹಿಂದಿನ ಸರ್ಕಾರದಲ್ಲೂ ಬಹಳಷ್ಟು ಘಟನೆಗಳು ನಡೆದಿವೆ. ಆವಾಗ ನಾವು ರಾಜೀನಾಮೆಗೆ ಒತ್ತಾಯ ಮಾಡಿಲ್ಲ. ಆದರೆ ಈ ಸಮಸ್ಯೆ ಪರಿಹಾರ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ದೇವರಿಗೆ ಪೂಜೆ ಮಾಡಲು ಹೋದಾಗ ಹುತ್ತದಿಂದ ಎದ್ದ ಬುಶ್.. ಬುಶ್ ನಾಗಪ್ಪ.. ಪೂಜಾರಿ ಫುಲ್ ಶಾಕ್!
ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಘಟನೆ ನಂತರ ಪಾಕಿಸ್ತಾನದ ಜೊತೆ ನಡೆದ ಘರ್ಷಣೆ ಸಮಯದಲ್ಲಿ ಎಲ್ಲರೂ ಕೂಡ ಬಿಜೆಪಿಗೆ ಬೆಂಬಲ ಸೂಚಿಸಿದ್ದೇವು. ಅಲ್ಲಿ ಕೂಡ ಕೇಂದ್ರ ಸರ್ಕಾರ ಫೇಲ್ಯೂರ್ ಆಗಿತ್ತು. ಆದರೆ ಯಾರು ಕೂಡ ಈ ಬಗ್ಗೆ ಮಾತನಾಡಿಲ್ಲ. ಪ್ರಧಾನಿ ಮೋದಿ ಅವರ ರಾಜೀನಾಮೆಯನ್ನ ನಾವು ಆಗ್ರಹ ಮಾಡುತ್ತಿದ್ದೇವು. ಅದು ಸರಿಯಾದ ಕ್ರಮ ಅಲ್ಲ ಅಂತ ಬಿಟ್ಟಿದ್ದು. ಸಮಸ್ಯೆ ಪರಿಹಾರ ಮಾಡೋದು ಮುಖ್ಯ. ರಾಜೀನಾಮೆ ಕೊಡುವುದು ಮುಖ್ಯವಲ್ಲ. ಯಾರು ಸರಿಯಾಗಿ ಕೆಲಸ ಮಾಡಿಲ್ಲ ಎನ್ನುವುದು ತನಿಖೆಯಿಂದ ಹೊರಬರಬೇಕು ಎಂದು ಹೇಳಿದರು.
ಪಹಲ್ಗಾಮ್ನಲ್ಲಿ 26 ಜನ ಮೃತಪಟ್ಟಿದ್ದು ಅವರ ಫೇಲ್ಯೂರ್. ಬಿಜೆಪಿಯ 11 ವರ್ಷದಲ್ಲಿ ಸಾಕಷ್ಟು ಘಟನೆಗಳು ಆಗಿವೆ. ಕೇಂದ್ರ ಸರ್ಕಾರದ ಜೊತೆ ನಾವೆಲ್ಲಾ ನಿಂತಿದ್ವಿ. ರಾಜೀನಾಮೆ ಏನು ಕೇಳಿಲ್ಲ. ಪರಿಹಾರ ಎನ್ನುವುದು ಮುಖ್ಯ. ಅನುಮತಿ ಕೊಟ್ಟಿರುವುದು ವಿಧಾನಸೌಧ ಒಳಗೆ. ಸಮಸ್ಯೆ ಆಗಿರುವುದು ಸ್ಟೇಡಿಯಂನಲ್ಲಿ. ಅಲ್ಲಿದು ತನಿಖೆ ಆಗಬೇಕು ಅಷ್ಟೇ. ಕಾಂಗ್ರೆಸ್ ಹೈಕಮಾಂಡ್ಗೆ ಜವಾಬ್ದಾರಿ ಇದೆ. ಮುಂದೆ ಇಂತಹದ್ದು ಆಗದಂಗೆ ನೋಡಿಕೊಳ್ಳಲು ಸಲಹೆ, ಸೂಚನೆ ಕೊಡಬಹುದು ಎಂದು ಹೇಳಿದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ