newsfirstkannada.com

ರಾಮಮಂದಿರ ಉದ್ಘಾಟನೆ ದಿನ ರಜೆ ಹಾಕಿದ್ರೆ ₹1000 ದಂಡ? ಚಿಕ್ಕಮಗಳೂರು ಶಾಲೆಗೆ ಶೋಭಾ ಎಚ್ಚರಿಕೆ

Share :

Published January 20, 2024 at 8:38pm

Update January 20, 2024 at 8:39pm

    ಜನವರಿ 22ರಂದು ಶಾಲೆಗೆ ರಜೆ ಹಾಕಿದರೆ ಹುಷಾರ್ ಎಂದ ಆಡಳಿತ ಮಂಡಳಿ

    ಸೆಂಟ್ ಜೋಸೆಫ್ ಶಾಲೆಯ ತೀರ್ಮಾನ‌‌ ಖಂಡಿಸಿದ ಶೋಭಾ ಕರಂದ್ಲಾಜೆ

    ರಾಮ ಭಕ್ತರ ಭಾವನೆ ಜೊತೆಗೆ ಆಟವಾಡಬೇಡಿ ಎಂದ ಕೇಂದ್ರ ಸಚಿವೆ

ಚಿಕ್ಕಮಗಳೂರು: ಇದೇ ಜನವರಿ 22ರಂದು ಶಾಲೆಗೆ ರಜೆ ಹಾಕಿದರೆ ₹1000 ದಂಡ ವಿಧಿಸುವ ಕುರಿತು ಸೆಂಟ್ ಜೋಸೆಫ್ ಶಾಲೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಈ ಖಾಸಗಿ ಶಾಲೆ ವಿರುದ್ಧ ವಿ.ಹೆಚ್‌.ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಶಾಲೆಯ ಈ ರೀತಿಯ ತೀರ್ಮಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಶಾಲೆಯ ಆದೇಶದ ಕುರಿತು ಸೋಷಿಯಲ್ ಮೀಡಿಯಾ Xನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಾನು ಸೇಂಟ್ ಜೋಸೆಫ್ ಶಾಲೆಯ ಆಡಳಿತ ಮಂಡಳಿಗೆ ಎಚ್ಚರಿಕೆ ಸಂದೇಶ ನೀಡಲು ಬಯಸುತ್ತೇನೆ. ರಾಮಭಕ್ತರ ಆಚರಣೆಗೆ ನಿಮ್ಮ ದೂರದೃಷ್ಟಿಯ ನಿರ್ಧಾರ ಅಡ್ಡಿಯಾಗದಿರಲಿ. ಆದಷ್ಟು ಬೇಗ ನಿಮ್ಮ ನಿರ್ಧಾರವನ್ನು ಪರಿಷ್ಕರಿಸಿ ಮತ್ತು ರಾಮ ಭಕ್ತರ ಭಾವನೆಗಳೊಂದಿಗೆ ಆಟವಾಡುವ ಧೈರ್ಯ ಮಾಡಬೇಡಿ. ಭಾರತವು ಐತಿಹಾಸಿಕ ರಾಮಮಂದಿರದ ಪ್ರಾಣಪ್ರತಿಷ್ಠಾ ಸಮಾರಂಭವನ್ನು ಒಂದು ದೊಡ್ಡ ಕುಟುಂಬವಾಗಿ ಆಚರಿಸಲು ಸಜ್ಜಾಗಿದೆ. ಆದರೆ ಜನವರಿ 22ರಂದು ಗೈರುಹಾಜರಾದ ವಿದ್ಯಾರ್ಥಿಗಳಿಗೆ ₹1000 ದಂಡ ವಿಧಿಸುವ ಮೂಲಕ ನಮ್ಮ ಸಂತೋಷದ ಮೇಲೆ ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಶಾಲೆ ಬೆದರಿಕೆ ಹಾಕಿದೆ. ಯಾವ ಕಾರಣದಿಂದ ಎಂದು ಪ್ರಶ್ನೆ ಮಾಡಿದ್ದಾರೆ.

ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೊಳ್ಳುವ ಜನವರಿ 22ರಂದು ಹಲವು ರಾಜ್ಯಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ. ಆದರೆ ರಾಜ್ಯದಲ್ಲೂ ರಜೆ ಘೋಷಿಸುವಂತೆ ಆಗ್ರಹ ವ್ಯಕ್ತವಾಗಿದೆ. ಚಿಕ್ಕಮಗಳೂರು ನಗರದ ಚರ್ಚ್ ರೋಡಿನಲ್ಲಿರುವ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳು ರಜೆ ಹಾಕಿದ್ರೆ ಬರೋಬ್ಬರಿ ಒಂದು ಸಾವಿರ ರೂಪಾಯಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಇದಾದ ಬಳಿಕ ರಾಮಮಂದಿರ ಉದ್ಘಾಟನೆ ನೋಡಲು ಆಸೆ ಇರೋ ಮಕ್ಕಳು ಶಾಲೆಗೆ ರಜೆ ಹಾಕಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ದಂಡ ಹಾಕಿದ್ರೆ ಚೆನ್ನಾಗಿರಲ್ಲ ಎಂದು ವಿ.ಎಚ್.ಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಮಮಂದಿರ ಉದ್ಘಾಟನೆ ದಿನ ರಜೆ ಹಾಕಿದ್ರೆ ₹1000 ದಂಡ? ಚಿಕ್ಕಮಗಳೂರು ಶಾಲೆಗೆ ಶೋಭಾ ಎಚ್ಚರಿಕೆ

https://newsfirstlive.com/wp-content/uploads/2024/01/school-7.jpg

Load More