/newsfirstlive-kannada/media/post_attachments/wp-content/uploads/2025/05/Zameer_Ahmed_Khan.jpg)
ದಾವಣಗೆರೆ: ಇತ್ತೀಚೆಗಷ್ಟೇ 3.5 ಲಕ್ಷ ಹಣ ಹಾಗೂ 6 ಬೈಕ್​ಗಳನ್ನ 10ನೇ ತರಗತಿಯಲ್ಲಿ ಉತ್ತೀರ್ಣರಾದ ಆರು ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದದರು. ಇದರ ಬೆನ್ನಲ್ಲೇ ಇದೀಗ ತನ್ನ ಅಪ್ಪಟ ಅಭಿಮಾನಿಯೊಬ್ಬರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ಸಚಿವರು ದಾನ ಮಾಡಿದ್ದಾರೆ.
ಹಾವೇರಿಯ ಹಾನಗಲ್ ತಾಲೂಕಿನ ನಾಗರಹಳ್ಳಿ ಗ್ರಾಮದ ಮಹಮ್ಮದ್ ಜಾಫರ್ ಎನ್ನುವರು ಅಪ್ಪಟ ಜಮೀರ್ ಅಹ್ಮದ್ ಅವರ ಅಭಿಮಾನಿ ಆಗಿದ್ದರು. ಯಾವಾಗಲಾದರೂ ಸಚಿವರು ಹಾವೇರಿಗೆ ಬಂದರೆ ಭೇಟಿಯಾಗುತ್ತಿದ್ದರು. ಜಮೀರ್ ಅಹ್ಮದ್ ಅವರಿಗೆ ಕೂಡ ಜಾಫರ್ ಅಂದರೆ ಅಷ್ಟೇ ಪ್ರೀತಿ ಇತ್ತು. ಕಂಡ ಕ್ಷಣ ಮಾತನಾಡುತ್ತಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಅಪಘಾತದಲ್ಲಿ ಜಾಫರ್ ಜೀವ ಕಳೆದುಕೊಂಡಿದ್ದರು.
ಇದನ್ನೂ ಓದಿ: ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್ ಶೋ; ಹಾನಗಲ್ ಗ್ಯಾಂಗ್ ಮತ್ತೆ ಜೈಲು ಪಾಲು
/newsfirstlive-kannada/media/post_attachments/wp-content/uploads/2025/05/Zameer_Ahmed_Khan_1.jpg)
ಈ ಸುದ್ದಿ ತಿಳಿಯುತ್ತಿದ್ದಂತೆ ಜಮೀರ್ ಅಹ್ಮದ್ ಅವರು ಬಹಳ ನೊಂದುಕೊಂಡಿದ್ದರು. ಆವಾಗಲೇ ಅವರ ಕುಟುಂಬಕ್ಕೆ ಏನಾದರೂ ನೀಡಬೇಕು ಎಂದುಕೊಂಡಿದ್ದರು. ಅದರಂತೆ ಜಾಫರ್ ಕುಟುಂಬವನ್ನು ದಾವಣಗೆರೆಗೆ ಕರೆಸಿಕೊಂಡಿದ್ದರು. ಬಳಿಕ ಕುಟುಂಬದೊಂದಿಗೆ ಒಂದೆರಡು ಮಾತುಗಳನ್ನಾಡಿ, ಅವರಿಗೆ ಧೈರ್ಯ ಹೇಳಿದರು.
ಬಳಿಕ ದಾವಣಗೆರೆ ನಗರದ ಎಂಪಿಎ ಹೆಲಿಪ್ಯಾಡ್​ನಲ್ಲಿ ಜಾಫರ್​ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ದಾನ ಮಾಡಿದರು. ತನ್ನ ಅಭಿಮಾನಿ ಕುಟುಂಬಕ್ಕೆ ಹಣ ನೀಡುವ ಮೂಲಕ ಸಚಿವರು ನೆರವಾಗಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರದ ಉಸ್ತುವಾರಿ ಆಗಿರುವ ಜಮೀರ್ ಅಹ್ಮದ್ ಅವರು, ಕೊಟ್ಟ ಮಾತಿನಂತೆ 10ನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದ ವಿಜಯನಗರ ಜಿಲ್ಲೆಯ 6 ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿ ನಗದು ಹಾಗೂ ದ್ವಿಚಕ್ರ ವಾಹನ ವಿತರಣೆ ಮಾಡಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us