newsfirstkannada.com

ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಅಂದ್ರಂತೆ ನಾಸೀರ್ ಹುಸೇನ್ -ಜಮೀರ್ ಅಹ್ಮದ್ ಖಾನ್

Share :

Published February 28, 2024 at 10:54am

  ‘ಯಾರೇ ಪಾಕ್ ಪರ ಘೋಷಣೆ ಕೂಗಿದ್ರೂ ತಪ್ಪೇ, ದೇಶದ್ರೋಹಿಗಳೇ’

  ವಿಡಿಯೋ ಕ್ಲಿಪ್ ಎಫ್​ಎಸ್​ಎಲ್ ವರದಿಗೆ ಕಳುಹಿಸಲಾಗಿದೆ-ಜಮೀರ್

  ಬಿಜೆಪಿಯವರಿಗೆ ವಿಷಯಗಳೇ ಇಲ್ಲ, ಹಾಗಾಗಿ ರಾಜೀನಾಮೆ ಕೇಳ್ತಿದ್ದಾರೆ

ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಎಂದು ನಾಸೀರ್ ಹುಸೇನ್ ಹೇಳಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ನಾಸೀರ್ ಹುಸೇನ್ ಅವರ ರಾಜ್ಯಸಭೆ ಚುನಾವಣೆ ಗೆಲುವು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬಂದಿದೆ ಎನ್ನಲಾಗಿರುವ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿರುವ ಜಮೀರ್.. ಪಾಕಿಸ್ತಾನ ಪರ ಘೋಷಣೆ ಕೂಗಿರೋದನ್ನು ನಾಸೀರ್ ಹುಸೇನ್ ಹೇಳಿಲ್ಲ. ಪಾಕ್ ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ. ನಾಸೀರ್ ಸಾಬ್ ಜಿಂದಾಬಾದ್ ಅಂತಾ ಘೋಷಣೆ ಕೂಗಿದ್ದಾರೆ ಎಂದಿದ್ದಾರೆ ಅಂತಾ ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು ಎಫ್​ಎಸ್‌ಎಲ್ ವರದಿಗೆ ಕಳುಹಿಸಿದ್ದೇವೆ. ಯಾರೇ ಘೋಷಣೆ ಕೂಗಿದ್ರೂ ದೇಶದ್ರೋಹಿಯೇ. ಈ ವಿಚಾರದಲ್ಲಿ ಎರಡು ಮಾತಿಲ್ಲ. ಬಿಜೆಪಿಯವರಿಗೆ ವಿಷಯಗಳೇ ಇಲ್ಲ. ಹಾಗಾಗಿ ಈ ವಿಚಾರದಲ್ಲಿ ಸಿಎಂ ಬಳಿ ರಾಜೀನಾಮೆ ಕೇಳುತ್ತಿದ್ದಾರೆ. ನಿನ್ನೆ ಬೇರೆ ಬಿಜೆಪಿಗೆ ಮುಖಭಂಗವಾಗಿದೆ. ಹಾಗಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದಿದ್ದಾರೆ.

ಏನಿದು ಪ್ರಕರಣ..?
ಕರ್ನಾಟಕದಿಂದ ರಾಜ್ಯಸಭೆಗೆ ಖಾಲಿಯಾಗಿದ್ದ 4 ಸ್ಥಾನಗಳಿಗೆ ನಿನ್ನೆ ವಿಧಾನಸೌಧದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಬ್ಬರು, ಕಾಂಗ್ರೆಸ್​ನಿಂದ ಮೂವರು ರಾಜ್ಯಸಭಾ ಚುನಾವಣಾ ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳು ಹಾಗೂ ದೋಸ್ತಿಯಿಂದ ಒಂದು ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​​ನ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆ ಬೆನ್ನಲ್ಲೆ ವಿಧಾನಸೌಧದಲ್ಲಿ ಸೆಲೆಬ್ರೇಷನ್ ನಡೆದಿತ್ತು. ಈ ​ ವೇಳೆ ‘ಪಾಕಿಸ್ತಾನ್​ ಜಿಂದಾಬಾದ್’​ ಎಂಬ ಘೋಷಣೆ ಕೂಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದು ಭಾರೀ ವಿವಾದಕ್ಕೀಡಾಗಿದೆ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಅಂದ್ರಂತೆ ನಾಸೀರ್ ಹುಸೇನ್ -ಜಮೀರ್ ಅಹ್ಮದ್ ಖಾನ್

https://newsfirstlive.com/wp-content/uploads/2024/02/Nasir-Hussain.jpg

Load More