newsfirstkannada.com

ನಮ್ಮ ಗುರು ಸಿದ್ರಾಮುಲ್ಲಾ ಖಾನ್.. ರಂಜಾನ್ ಪ್ರಾರ್ಥನೆಯಲ್ಲಿ ಜಮೀರ್ ಯಾಕ್ ಹಿಂಗೆ ಹೇಳಿದ್ರು?- ವಿಡಿಯೋ

Share :

Published April 11, 2024 at 3:11pm

Update April 11, 2024 at 3:14pm

  ಸಿದ್ರಾಮುಲ್ಲಾ ಖಾನ್ ಎಂದಿದ್ದ ಸಿ.ಟಿ ರವಿ, ಸಂಸದ ಅನಂತ ಕುಮಾರ್ ಹೆಗಡೆ

  ಸಿಎಂ ಸಿದ್ದರಾಮಯ್ಯಗೆ ಜ್ವರ ಇರೋದ್ರಿಂದ ರಂಜಾನ್ ಪ್ರಾರ್ಥನೆಗೆ ಬಂದಿಲ್ಲ

  ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು: ಇಂದು ಪವಿತ್ರ ರಂಜಾನ್ ಹಬ್ಬದ ಸಡಗರ. ದೇಶಾದ್ಯಂತ ರಂಜಾನ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ನಡೆದ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಾಥ್ ನೀಡಿದ್ದರು. ಪ್ರಾರ್ಥನೆಯ ವೇಳೆ ಸಚಿವ ಜಮೀರ್ ಅಹ್ಮದ್ ಅವರು ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟಿದ್ದಾರೆ.

ಇವತ್ತು ಸಿಎಂ ಸಿದ್ದರಾಮಯ್ಯ ಅವರು ಕೂಡ ನಮ್ಮ ಜೊತೆ ರಂಜಾನ್ ಪ್ರಾರ್ಥನೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ಅವರ ಆರೋಗ್ಯ ಸರಿಯಿಲ್ಲ. ಜ್ವರ ಇರೋದ್ರಿಂದ ಇಂದು ಅವರು ಬಂದಿಲ್ಲ. ಹೀಗಾಗಿ ನನ್ನ ಮೂಲಕ ರಾಜ್ಯದ ಜನರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಲು ಹೇಳಿದ್ದಾರೆ ಎಂದರು.

ಪ್ರಾರ್ಥನೆ ವೇಳೆ ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರಂತೆ ಸಿದ್ರಾಮುಲ್ಲಾಖಾನ್ ನಮ್ಮ ಗುರುಗಳು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಅವರನ್ನ ವಿಪಕ್ಷದವರು ಸಿದ್ರಾಮುಲ್ಲಾ ಖಾನ್ ಅಂತಾರೆ. ಹಾಗಾಗಿ ನಮ್ಮ ಗುರುಗಳು ಸಿದ್ರಾಮುಲ್ಲ ಖಾನ್ ಅಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: VIDEO: ‘ಜೆಡಿಎಸ್‌ಗೆ ಸೋಲು ಖಚಿತ’- ಹೆಚ್‌.ಡಿ ಕುಮಾರಸ್ವಾಮಿಗೆ ಜಮೀರ್ ಅಹ್ಮದ್ ಸವಾಲು

ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರಾದ ಸಿ.ಟಿ ರವಿ, ಸಂಸದ ಅನಂತ ಕುಮಾರ್ ಹೆಗಡೆ ಅವರು ಸಿದ್ರಾಮುಲ್ಲಾ ಖಾನ್ ಎಂದು ಟೀಕೆ ಮಾಡುತ್ತಿದ್ದರು. ಈಗ ಸಚಿವ ಜಮೀರ್ ಖಾನ್ ಅವರೇ ರಂಜಾನ್ ಹಬ್ಬದ ದಿನ ಹೌದು ಸಿದ್ರಾಮುಲ್ಲಾ ಖಾನ್ ನಮ್ಮ ಗುರುಗಳು ಅನ್ನೋ ಮೂಲಕ ಬಿಜೆಪಿ ನಾಯಕರಿಗೆ ಅವರ ಬಾಣವನ್ನು ಅವರಿಗೆ ತಿರುಗಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಗುರು ಸಿದ್ರಾಮುಲ್ಲಾ ಖಾನ್.. ರಂಜಾನ್ ಪ್ರಾರ್ಥನೆಯಲ್ಲಿ ಜಮೀರ್ ಯಾಕ್ ಹಿಂಗೆ ಹೇಳಿದ್ರು?- ವಿಡಿಯೋ

https://newsfirstlive.com/wp-content/uploads/2024/04/Zameer-On-Cm-Siddaramaiah.jpg

Load More