ರೂಪೇಶ್ ರಾಜಣ್ಣ ಪೊಲೀಸ್ ವಶಕ್ಕೆ.. ಜಮೀರ್ ಆಪ್ತ ಸರ್ಫರಾಜ್ ಮಾಡಿದ ಗಂಭೀರ ಆರೋಪ ಏನು..?

author-image
Veena Gangani
Updated On
ರೂಪೇಶ್ ರಾಜಣ್ಣ ಪೊಲೀಸ್ ವಶಕ್ಕೆ.. ಜಮೀರ್ ಆಪ್ತ ಸರ್ಫರಾಜ್ ಮಾಡಿದ ಗಂಭೀರ ಆರೋಪ ಏನು..?
Advertisment
  • ಸಚಿವ ಜಮೀರ್ ಆಪ್ತ ಸರ್ಫರಾಜ್ ಖಾನ್ ಗಂಭೀರ ಆರೋಪ
  • ರೂಪೇಶ್ ರಾಜಣ್ಣ, ಬೆಂಬಲಿಗರನ್ನ ವಶಕ್ಕೆ ಪಡೆದು ಪೊಲೀಸರು
  • ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ವಿರುದ್ಧ ಬಂದ ಆರೋಪವೇನು?

ಬೆಂಗಳೂರು: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ವಿರುದ್ಧ ಸಚಿವ ಜಮೀರ್ ಆಪ್ತ ಸರ್ಫರಾಜ್ ಖಾನ್ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಜಮೀರ್ ಸರ್ಕಾರಿ ನಿವಾಸಕ್ಕೆ ಬಂದಿದ್ದರು.

publive-image

ಸವೆನ್ ಮಿನಿಸ್ಟರ್ ಕ್ವಾಟ್ರಸ್​ನಲ್ಲಿರುವ ಸಚಿವ ಜಮೀರ್ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ರೂಪೇಶ್ ರಾಜಣ್ಣ, ನನ್ನ ಮೇಲೆ ಸಚಿವರ ಪಿಎ ಸರ್ಫರಾಜ್​ ಖಾನ್ ಸುಳ್ಳು ಆರೋಪ ಮಾಡಿದ್ದಾರೆ. ನೀವು ಸತ್ಯ ತಿಳಿಸದೆ ನಾನು ಹಿಂದೆ ಸರಿಯಲ್ಲ. ನೀವು ಹೇಳಿರುವುದು ಸತ್ಯ ಅಂತ ದಾಖಲೆ ಸಹಿತ ನಿರೂಪಿಸಿ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದರು. ರೂಪೇಶ್ ರಾಜಣ್ಣ ಆಗಮನ ಹಿನ್ನೆಲೆಯಲ್ಲಿ ಸಚಿವ ಜಮೀರ್ ಸರ್ಕಾರಿ ನಿವಾಸಕ್ಕೆ ಪೊಲೀಸರು ಭದ್ರತೆ ನೀಡಿದ್ದರು. ಇದೇ ವೇಳೆ ಜಮೀರ್ ಸರ್ಕಾರಿ ನಿವಾಸದ ಮುಂದೆ ಹೈಡ್ರಾಮಾ ನಡೆದಿದೆ. ಅಲ್ಲದೇ ಜಮೀರ್ PA ವಿರುದ್ಧ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಹೇಡಿಗಳಂತೆ ಪೊಲೀಸರನ್ನ ಹಾಕಿ ಪ್ರತಿಭಟನೆ ಹತ್ತಿಕುತ್ತಿದ್ದಾರೆಂದು ಎಂದು ಕೂಗುತ್ತಿದ್ದ ರೂಪೇಶ್ ರಾಜಣ್ಣ ಹಾಗೂ ಅವರ ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

publive-image

ರೂಪೇಶ್ ರಾಜಣ್ಣ ವಿರುದ್ಧ ಬಂದ ಆರೋಪವೇನು..?

ಸಚಿವ ಜಮೀರ್ ಅಹ್ಮದ್ ಖಾನ್​ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಫರಾಜ್​ ಖಾನ್, ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ. 2006ರಲ್ಲಿ ನಾನು ಈ ಜಾಗವನ್ನು ಖರೀದಿ ಮಾಡಿದ್ದೇನೆ. ಫಾರ್ಮ್​ ಹೌಸ್​​ ನಿರ್ಮಿಸಲು ಅನುಮತಿ ಕೂಡ ಪಡೆದುಕೊಂಡಿದ್ದೀನಿ. ಕಂದಾಯವನ್ನ ಸಹ ಕಟ್ಟಿದ್ದೇನೆ, ಪಂಚಾಯತ್ ಪರ್ಮಿಷನ್ ಪಡೆದಿದ್ದೇನೆ. ಪೊಲೀಸ್ ಇಲಾಖೆಯಿಂದ ಎನ್‌ಓಸಿ ಪಡೆದಿದ್ದೇನೆ. ನನ್ನ ಫಾರ್ಮ್‌ಹೌಸ್ ಕಾನೂನು ಬದ್ದವಾಗಿ ಮಾಡಿದ್ದೇನೆ. ನನ್ನ ಕೇಳಬೇಕಿತ್ತು, ಲೀಗಲ್ ಆಗಿ ಮಾಡ್ತಿದ್ದೀರಾ ಇಲ್ವಾ ಎಂದು? ನಾನು ಈ ಜಮೀನು ಖರೀದಿ ಮಾಡಿ 20 ವರ್ಷವಾಗಿದೆ ಎಂದರು. ಇದೇ ವೇಳೆ ಕೆಲವರು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಆದ್ರೆ ನಾನು ನನ್ನ ಸರ್ವಿಸ್‌ನಲ್ಲಿ ಅಕ್ರಮ ಮಾಡಿಲ್ಲ.

ಯಾರೋ ಒಬ್ಬ ರೂಪೇಶ್​ ರಾಜಣ್ಣ ಅಂತ ಹುಟ್ಟಿಕೊಂಡಿದ್ದಾನೆ. ಅವನು ನನ್ನ ಕಚೇರಿಗೆ ಬಂದಿದ್ದ. ನಾನು ಹಿಜಾಬ್​ ಬಗ್ಗೆ ಕೆಲಸ ಮಾಡುತ್ತೇನೆ. ಹಣ ನೀಡಿ ಎಂದು ಕೇಳಿದ್ದ. ನಾನು ಬಿಗ್​ಬಾಸ್​ಗೆ ಹೋಗಿದ್ದೆ, ಅಲ್ಲಿಂದ ನಾನೊಬ್ಬ ಸ್ಟಾರ್ ಸೆಲೆಬ್ರಿಟಿ ಅಂದುಕೊಂಡು ಹಣ ಕೇಳಿದ್ದ. ಈ ರೀತಿ ಬ್ಲ್ಯಾಕ್ ಮೇಲ್ ಮಾಡುವವರು ಸಮಾಜದಲ್ಲಿ ಉಳಿದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment