/newsfirstlive-kannada/media/post_attachments/wp-content/uploads/2024/11/Zameer-Ahmed-Khan-on-HD-Kumaraswamy.jpg)
ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಚನ್ನಪಟ್ಟಣ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜಮೀರ್ ಮಾತುಗಳು ಇಡೀ ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ.
ಚನ್ನಪಟ್ಟಣ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ನಾಯಕರು ಜಿದ್ದಿಗೆ ಬಿದ್ದಿದ್ದಾರೆ. ಕೊನೆ ಹಂತದ ಚುನಾವಣಾ ಪ್ರಚಾರದಲ್ಲಿ ವಾಕ್ಸಮರ ಜೋರಾಗಿತ್ತು. ಬಹಿರಂಗ ಪ್ರಚಾರದಲ್ಲಿ ಮಾತನಾಡಿರುವ ಜಮೀರ್ ಅಹ್ಮದ್ ಖಾನ್ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್ ಆಶಯ ವ್ಯರ್ಥ.. ಜೈಲಿಂದ ಬಿಡಿಸಿದ್ದ ಕೈದಿಯಿಂದ ಮತ್ತೆ ಹರಿದ ನೆತ್ತರು; ಆಗಿದ್ದೇನು?
ಜಮೀರ್ ‘ಕಲರ್’ ಮಾತು!
ಚನ್ನಪಟ್ಟಣದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೆಚ್.ಡಿ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆಯೇ ಮಾತನಾಡಿದ್ದಾರೆ. ಯೋಗೇಶ್ವರ್ ಹೊಗಳುವ ಭರದಲ್ಲಿ ಕರಿಯ ಕುಮಾರಸ್ವಾಮಿ ಎಂದು ಟೀಕಿಸಿದ್ದಾರೆ.
ಯೋಗೇಶ್ವರ್ ನಮ್ಮ ಪಾರ್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಪಕ್ಷಕ್ಕೆ ಹೋಗಬೇಕು ಅಂತಿದ್ರು ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್‌ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್, ಪಜಾಬ್ ಬೇಡ ಅಂದಿದ್ದೀಯಾ. ಈಗ ನಿನಗೆ ಮುಸಲ್ಮಾನರ ವೋಟ್ ಬೇಕಾ ಎಂದು ಸವಾಲು ಹಾಕಿದ್ದಾರೆ.
‘ಕರಿಯ ಎಂದು ಪ್ರೀತಿಯಿಂದ ಕರೆದಿದ್ದೇನೆ’
ಕರಿಯ ಕುಮಾರಸ್ವಾಮಿ ಅನ್ನೋ ಮಾತು ಕೋಲಾಹಲ ಸೃಷ್ಟಿಸಿದ ಮೇಲೂ ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅನ್ನು ನಾನು ಯಾವತ್ತಿಗೂ ಕರಿಯಣ್ಣನನೇ ಅಂತ ಕರೆಯೋದು. ನನ್ನ ಕುಳ್ಳ ಅಂತಾರೆ. ಪ್ರೀತಿಯಿಂದ ಅವರನ್ನು ಕರಿಯಣ್ಣನೇ ಅಂತ ಕರೆಯುತ್ತಿದ್ದೆ. ಇವಾಗ ಬಾಯಲ್ಲಿ ಹಾಗೇ ಬಂತು ಅದೇ ರೀತಿಯಲ್ಲಿ ಹೇಳಿದೆ ಎಂದಿದ್ದಾರೆ.
ನಾನು ಪ್ರೀತಿಯಿಂದ ಕರೆದಿದ್ದೇನೆ. ಆದರೆ ಹಿಂದಿನ ಆ ಪ್ರೀತಿ ಇವಾಗಿಲ್ಲ. ವಿರೋಧ ಮಾಡಿಕೊಳ್ಳುವರು ವಿರೋಧ ಮಾಡಿಕೊಳ್ಳಲಿ. ನನ್ನ ಸಮಾಜದ ಜನರನ್ನು ದುಡ್ಡಲ್ಲಿ ಖರೀದಿ ಮಾಡಲು ಕುಮಾರಸ್ವಾಮಿ ಹೋಗಿದ್ದಾರೆ. ಅದಕ್ಕಾಗಿ ನಾನು ಸಾಮಾನ್ಯವಾಗಿ ಆ ರೀತಿ ಕರೆದಿದ್ದೇನೆ ಎಂದು ಜಮೀರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ