Advertisment

ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!

author-image
Ganesh
Updated On
ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
Advertisment
  • ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿರುವ ಬಗ್ಗೆ ಜಮೀರ್ ಮಾತು
  • ಜಮೀರ್ ಕೈವಾಡದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಆರೋಪ
  • ತಮ್ಮ ಮೇಲಿನ ಆರೋಪಗಳ ಬಗ್ಗೆ ಸಚಿವ ಜಮೀರ್ ಏನಂದ್ರು?

ಕೊಲೆ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

Advertisment

ದರ್ಶನ್ ಬಳ್ಳಾರಿಗೆ ಬರೋದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ಪೊಲೀಸ್ ಇಲಾಖೆಯ ತೀರ್ಮಾನ. ಜೈಲಿನಲ್ಲಿ ಟೀ-ಕಪ್ ಹಿಡಿದು, ಸಿಗರೇಟ್ ಸೇದುತ್ತಿದ್ದ ಫೋಟೋ ವೈರಲ್ ಆಗಿತ್ತು. ಅದು ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆ ಶಿಫ್ಟ್ ಮಾಡಲಾಗಿದೆ. ನಾನು ಜಿಲ್ಲಾ ಉಸ್ತುವಾರಿ ಆಗಿರಬಹುದು. ಆದರೆ ನಾನು ಡಿಜಿ ಅಲ್ಲ. ನಾನು ಬರೀ ಜಿಲ್ಲಾ ಉಸ್ತುವಾರಿ ಮಂತ್ರಿ ಅನ್ನೋ ಮೂಲಕ ತಮಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬಳ್ಳಾರಿಗೆ ಹೋದರೂ ಬಿಡಲ್ಲ ಬೆಂಗಳೂರು ಪೊಲೀಸರು; ದರ್ಶನ್ ನಿರಾಳರಾಗೋ ಮಾತೇ ಇಲ್ಲ, ಯಾಕೆಂದರೆ..!

ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ರಾಜಾತಿಥ್ಯ ಸಿಗ್ತಿದೆ ಎಂಬ ಆರೋಪ ಇತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿತ್ತು. ಬೆನ್ನಲ್ಲೇ ಈ ವಿಚಾರ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಬುಧವಾರ ಶಿಫ್ಟ್ ಮಾಡಲಾಗಿದೆ.

Advertisment

ಇದನ್ನೂ ಓದಿ: ಬಳ್ಳಾರಿ ಜೈಲಿನಲ್ಲಿ ದರ್ಶನ್​ಗೆ ಸಮಸ್ಯೆ; ರಾತ್ರಿ ನಡೆದ ಕೆಟ್ಟ ಅನುಭವದ ವಿರುದ್ಧ ಅಧಿಕಾರಿಗಳಿಗೆ ದೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment