/newsfirstlive-kannada/media/post_attachments/wp-content/uploads/2024/06/darshan-16-2.jpg)
ದರ್ಶನ್ ಕೇಸ್​ನಲ್ಲಿ ಊಹೆಗೂ ನಿಲುಕದ ಬೆಳವಣಿಗೆಗಳು ನಡೆಯುತ್ತಿವೆ. ಹಲವು ಆಘಾತಕಾರಿ ಮಾಹಿತಿಗಳು ಹೊರಬಿಳ್ತೀವೆ. ಮೊನ್ನೆಯಷ್ಟೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಅಂದರ್ ಆಗಿರುವ ನಟ ದರ್ಶನ್​ನ್ನ ಪಾರು ಮಾಡಲು ಸಚಿವರೊಬ್ಬರು ಪ್ರಯತ್ನಿಸಿದ್ದಾರೆಂಬ ಶಾಕಿಂಗ್ ವಿಚಾರ ಹೊರಬಿದ್ದಿತ್ತು. ಈಗ ಈ ನಿಟ್ಟಿನಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆದಿವೆ.
ಒಬ್ಬ ರಾಜಕಾರಣಿ, ನಟ ಅಥವಾ ಸಾಕಷ್ಟು ದುಡ್ಡಿರುವ ಪ್ರಭಾವಿ ಲಾಕ್ ಆದ್ರೆ ಆತನನ್ನು ಹೊರಗೆ ತರೋಕೆ ಅದೆಷ್ಟೋ ಮಂದಿ ಕಾಯ್ತಿರ್ತಾರೆ. ಸೆಲೆಬ್ರೆಟಿ ಆದ್ರಂತೂ ಹಣ ಎಸೆದು ಟಕಾ ಟಕ್​ ಅಂತ ಹೊರಗೆ ಬರ್ತಾ ಇರ್ತಾರೆ. ಅದೇ ರೀತಿ ದರ್ಶನ್ ಕೇಸ್​ನಲ್ಲೂ ನಡೆದಿದೆ. ಅದೂ ಕೂಡ ಒಂದಲ್ಲ ಹಲವು ಬಾರಿ.
/newsfirstlive-kannada/media/post_attachments/wp-content/uploads/2024/06/Darshan-30.jpg)
ದರ್ಶನ್ ರಕ್ಷಿಸಲು ಪ್ರಭಾವಿಗಳಿಂದ ಒತ್ತಡ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಲಾಕ್ ಆಗಿರುವ ಸೋ ಕಾಲ್ಡ್​ ನಟ ದರ್ಶನನ್ನು ರಕ್ಷಿಸಲು ಪ್ರಭಾವಿಗಳು ಹವಣಿಸುತ್ತಲೇ ಇದ್ದಾರೆ. ಆಗಾಗ್ಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮಿಂದ ಆದಷ್ಟು ಒತ್ತಡವನ್ನು ಸರ್ಕಾರದ ಮೇಲೆ ಹಾಕುತ್ತಲೇ ಇದ್ದಾರೆ. ಆದ್ರೆ ಇದ್ಯಾವ ಒತ್ತಡಗಳಿಗೂ ಸಿಎಂ ಸಿದ್ದರಾಮಯ್ಯರಾಗಲಿ ಅಥವಾ ಗೃಹಸಚಿವ ಡಾ.ಪರಮೇಶ್ವರ್​ ಆಗಲಿ ಕೇರೇ ಮಾಡ್ತಿಲ್ಲ. ಇಷ್ಟಿದ್ರೂ ಮರಳಿ ಯತ್ನವ ಮಾಡುವಂತೆ ಒಬ್ಬ ನರರೂಪಿ ರಾಕ್ಷಸನನ್ನು ರಕ್ಷಿಸಲು ಪ್ರಭಾವಿ ರಾಜಕಾರಣಿಗಳು ಯತ್ನಿಸುತ್ತಲೇ ಇದ್ದಾರೆ.
/newsfirstlive-kannada/media/post_attachments/wp-content/uploads/2024/06/darshan23.jpg)
CBI - NIA ಪರ ಅಡ್ವಕೇಟ್​​ ಆಗಿದ್ದ ಪ್ರಸನ್ನ ಕುಮಾರ್
ದರ್ಶನ್ ರಕ್ಷಿಸಲು ಮತ್ತೆ ಮತ್ತೆ ಸಚಿವರು ಹಾಗೂ ಶಾಸಕರು ಪ್ರಯತ್ನಿಸುತ್ತಲೇ ಇದ್ದಾರೆ ಎನ್ನಲಾಗ್ತಿದೆ. ಪ್ರಕರಣದ SPP ಅಂದ್ರೆ ಸರ್ಕಾರಿ ಪರ ವಕೀಲರನ್ನು ಬದಲಾಯಿಸಲು ಷಡ್ಯಂತ್ರ ಮಾಾಡಲಾಗ್ತಿದೆ. SPP ಪ್ರಸನ್ನ ಕುಮಾರ್ ಬದಲಾಯಿಸಲು ಒತ್ತಡ ಹೆಚ್ಚಾಗಿದೆ. ಪ್ರಸನ್ನ ಕುಮಾರ್ ಮೊದಲೇ CBI - NIA ಪರ ಅಡ್ವಕೇಟ್​​ ಆಗಿದ್ದವರು. ಅಂತವ್ರು ಇದ್ರೆ ದರ್ಶನ್ ರಕ್ಷಣೆ ಅಸಾಧ್ಯ ಎಂಬ ಲೆಕ್ಕಾಚಾರ ಶುರುವಾಗಿದೆ. ಯಾಕಂದ್ರೆ ಈಗಾಗಲೇ ಅನೇಕ ಪ್ರಕರಣದಲ್ಲಿ ಪ್ರಸನ್ನ ಕುಮಾರ್ ಸಾಮರ್ಥ್ಯ ಸಾಬೀತಾಗಿದೆ. ಅನೇಕ ಮಂದಿ ಉಗ್ರರಿಗೆ ಪ್ರಸನ್ನಕುಮಾರ್​​ ಶಿಕ್ಷೆ ಕೊಡಿಸಿದ್ದರು. ಯಾರ ಒತ್ತಡಕ್ಕೂ ಮಣಿಯೋದಿಲ್ಲ ಅಂತಾನೇ ಪ್ರಸನ್ನ ಕುಮಾರ್ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರನ್ನು ಬದಲಾಯಿಸಲು ಒತ್ತಡ ಹೇರಲಾಗ್ತಿದೆ ಅಂತ ನ್ಯೂಸ್‌ಫಸ್ಟಗೆ ಪ್ರಕರಣದ ತನಿಖಾ ತಂಡದಿಂದ ಮಾಹಿತಿ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/06/darshan18.jpg)
ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿ 19 ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಆದ್ರೆ ಇದರಲ್ಲಿ ದರ್ಶನ್​ನ್ನ ಬಚಾವ್ ಮಾಡಲು ಹಲವು ಕಾಣದ ಕೈಗಳು ಪ್ರಯತ್ನ ಮಾಡ್ತಿವೆ. ಈಗ ಈ ಪ್ರಯತ್ನದ ಮುಂದುವರೆದ ಭಾಗವಾಗಿ ಎಸ್​ಪಿಪಿ ಪ್ರಸನ್ನಕುಮಾರ್​ನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿರೋದು ಆಘಾತಕಾರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us