ನಾಗರಿಕ ವಿಮಾನಯಾನದಲ್ಲಿ ಲಕ್ಷ ಲಕ್ಷ ಸಂಬಳ.. ಈ ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
ನಾಗರಿಕ ವಿಮಾನಯಾನದಲ್ಲಿ ಲಕ್ಷ ಲಕ್ಷ ಸಂಬಳ.. ಈ ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ
Advertisment
  • ಪರೀಕ್ಷೆ ಇಲ್ಲ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತೆ
  • ನುರಿತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ ಸಂಸ್ಥೆ
  • ಹೆಚ್ಚು ಪ್ರತಿಭಾವಂತ, ಕ್ರಿಯಶೀಲ ಅಭ್ಯರ್ಥಿಗಳಿಗೆ ಅವಕಾಶ

ನಾಗರಿಕ ವಿಮಾನಯಾನ ಸಚಿವಾಲಯ, ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದಕ್ಕಾಗಿ ಯಾರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಹೆಚ್ಚು ಪ್ರತಿಭಾವಂತ ಹಾಗೂ ಕ್ರಿಯಶೀಲರಾಗಿರುತ್ತಾರೋ ಅಂತಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಅಹ್ವಾನಿಸಿದೆ. ಈ ಎಲ್ಲ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ ಆಗಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಡಿಜಿಸಿಎ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

ಆನ್​​ಲೈನ್ ಮೂಲಕ ಅಪ್ಲೇ ಮಾಡಿದ ಮೇಲೆ ಅದರ ಒಂದು ಪ್ರತಿಯನ್ನು ಅಭ್ಯರ್ಥಿಗಳು ದೆಹಲಿಗೆ ಕಳುಹಿಸಿಕೊಡಬೇಕು. ತಿಂಗಳ ಸಂಬಳ ಲಕ್ಷ.. ಲಕ್ಷ ರೂಪಾಯಿಗಳಲ್ಲಿ ಇದೆ. ಸಂದರ್ಶನವು ನಾಗರಿಕ ವಿಮಾನಯಾನ ಸಚಿವಾಲಯದ ನೇಮಕಾತಿ 2024ರ ಆಯ್ಕೆ ಪ್ರಕ್ರಿಯೆಯ ಭಾಗವಾಗಿರುತ್ತದೆ.

ಹುದ್ದೆಗಳ ಹೆಸರು, ಎಷ್ಟು ಉದ್ಯೋಗಗಳು?

  • ಕನ್ಸಲ್ಟೆಂಟ್ (Consultant) ( ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ವಿಮಾನ))= 2 ಹುದ್ದೆಗಳು
  • ಕನ್ಸಲ್ಟೆಂಟ್ (ಫ್ಲೈಟ್ ಆಪರೇಶನ್ ಇನ್​ಸ್ಪೆಕ್ಟರ್ (ವಿಮಾನ))= 10
  • ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 01
  • ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 05

ಒಟ್ಟು ಹುದ್ದೆಗಳು- 18

ವಯಸ್ಸಿನ ಮಿತಿ- 65 ವರ್ಷದ ಒಳಗಿನವರಿಗೆ ಅವಕಾಶ

ವಿದ್ಯಾರ್ಹತೆ- 10ನೇ ತರಗತಿ ಅಂಕಪಟ್ಟಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಭ್ಯಾಸ ಮಾಡಿರಬೇಕು. ಇದರ ಜೊತೆಗೆ ಸಂಸ್ಥೆ ಕೇಳಿದ ಲೈಸೆನ್ಸ್ ಸೇರಿ​ ಇತರೆ ನಿಖರ ದಾಖಲಾತಿಗಳು ಅಭ್ಯರ್ಥಿಗಳ ಅರ್ಜಿ ಜೊತೆ ಸಲ್ಲಿಕೆ ಮಾಡಬೇಕು. ಇದಕ್ಕಾಗಿ ಇಲಾಖೆಯ ವೆಬ್​ಸೈಟ್​ ಅನ್ನು ವೀಕ್ಷಿಸಬೇಕು.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಟ್ರಸ್ಟ್​​ನಲ್ಲಿ ಹಲವು ಹುದ್ದೆಗಳ ನೇಮಕಾತಿ.. ಅರ್ಜಿ ಆಹ್ವಾನ, ತಕ್ಷಣ ಅಪ್ಲೇ ಮಾಡಿ

publive-image

ತಿಂಗಳ ಸ್ಯಾಲರಿ ಹೇಗಿದೆ..?

  • ಕನ್ಸಲ್ಟೆಂಟ್ (Consultant) ( ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ವಿಮಾನ))= 7,46,000 ರೂ.ಗಳು
  • ಕನ್ಸಲ್ಟೆಂಟ್ (ಫ್ಲೈಟ್ ಆಪರೇಶನ್ ಇನ್​ಸ್ಪೆಕ್ಟರ್ (ವಿಮಾನ))= 5,02,800 ರೂ.ಗಳು
  • ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 3,78,000 ರೂ.ಗಳು
  • ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 2,82,800 ರೂ.ಗಳು

ಆಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳ ಹೆಸರು ಶಾರ್ಟ್ ಲಿಸ್ಟ್
  • ಸಂದರ್ಶನ
  • ದಾಖಲಾತಿ ಪರಿಶೀಲನೆ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 28 ಅಕ್ಟೋಬರ್ 2024
  • ಹಾರ್ಡ್​ಕಾಪಿ ಕಳುಹಿಸುವ ದಿನಾಂಕ- 04 ನವೆಂಬರ್ 2024
  • ಅರ್ಜಿ ಸಲ್ಲಿಸಿದ ಮೇಲೆ ಹಾರ್ಡ್​ ಕಾಪಿಯಲ್ಲಿ ಸೆಲ್ಫ್ ಅಟೆಸ್ಟೆಡ್ ಮಾಡಿ ದೆಹಲಿಗೆ ಕಳುಹಿಸಬೇಕು

ವಿಳಾಸ
ದ ರಿಕ್ವರ್​​ಮೆಂಟ್​ ಸೆಕ್ಷನ್
ಎ ಬ್ಲಾಕ್, ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್,
ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಎದುರು, ನವದೆಹಲಿ -110 003,

ಪ್ರಮುಖವಾದ ಲಿಂಕ್- https://www.dgca.gov.in/digigov-portal/?page=jsp/dgca/topHeader/jobs/vacancy/Circular%20-Consultant%20(FOIs)-%2014%20Oct%202024.pdf&mainnull

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment