ಭಾರೀ ಗಾಳಿ, ಮಳೆಗೆ ಕುಸಿದ ಏರ್​ಪೋರ್ಟ್​ನ ಶೆಡ್​.. ನೀರಲ್ಲಿ ಮುಳುಗಿದ ವಾಹನಗಳು! -Video

author-image
Bheemappa
Updated On
ಭಾರೀ ಗಾಳಿ, ಮಳೆಗೆ ಕುಸಿದ ಏರ್​ಪೋರ್ಟ್​ನ ಶೆಡ್​.. ನೀರಲ್ಲಿ ಮುಳುಗಿದ ವಾಹನಗಳು! -Video
Advertisment
  • ನಗರದಲ್ಲಿ ಆಲಿಕಲ್ಲು ಸಮೇತ ಸುರಿದ ಮಳೆಯಿಂದ ಭಾರೀ ಅವಾಂತರ
  • ಆಸ್ತಿ- ಪಾಸ್ತಿ ಹಾನಿಯ ಜೊತೆಗೆ ಜೀವ ಹಾನಿ ಕೂಡ ಮಾಡಿರುವ ವರುಣ
  • ಏರ್​ಪೋರ್ಟ್​ ಶೆಡ್​ ಕುಸಿದು ಬಿದ್ದಿರುವುದು ಹೇಗೆ, ವಿಡಿಯೋ ಇಲ್ಲಿದೆ!

ನವದೆಹಲಿ: ಭಾರೀ ಗುಡುಗು, ಸಿಡಿಲು ಹಾಗೂ ಜೋರಾದ ಮಳೆಯ ನಡುವೆ ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್​-1 ರಲ್ಲಿ ಶೇಡ್​ವೊಂದು ಮಳೆನೀರಿನ ಭಾರ ತಡೆಯಲಾರದೇ ಕುಸಿದು ಬಿದ್ದಿದೆ. ದೆಹಲಿಯಲ್ಲಿ ಈ ವರೆಗೆ ಮಳೆಯಿಂದ ಇಬ್ಬರು ಜೀವ ಕಳೆದುಕೊಂಡಿದ್ದು 11ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

publive-image

ರಾಷ್ಟ್ರರಾಜಧಾನಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಈಗಾಗಲೇ ಪ್ರಾಣ ಹಾನಿ ಮಾಡಿದ್ದು ಜೊತೆಗೆ ಆಸ್ತಿ-ಪಾಸ್ತಿ ಕೂಡ ಹಾನಿಯಾಗಿದೆ. ಇದರ ಬೆನ್ನಲ್ಲೇ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​-1 ರಲ್ಲಿ ಶೇಡ್​ವೊಂದು ಕುಸಿದಿದೆ. ಶೆಡ್​ ಮೇಲೆ ಮಳೆನೀರು ಹೆಚ್ಚು ಸಂಗ್ರಹವಾಗಿದ್ದರಿಂದ ಭಾರ ತಾಳಲಾರದೇ ಮುರಿದು ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಪಾದಾಚಾರಿ ಮಾರ್ಗವೆಲ್ಲ ನೀರು ತುಂಬಿದ್ದು ಪ್ರಯಾಣಿಕರಿಗೆ ಕೊಂಚ ಸಮಸ್ಯೆ ಆಗಿದೆ.

publive-image

ದೆಹಲಿ ನಗರದ್ಯಾಂತ ಭಾರೀ ಮಳೆ ಆಗುತ್ತಿದ್ದರಿಂದ 17 ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ 49 ವಿಮಾನಗಳನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆಡೆಗೆ ತಿರುಗಿಸಲಾಗಿದೆ. ಮೇ 24 ರಂದು ದೆಹಲಿಯಲ್ಲಿ 80 ಎಂಎಂ ದಾಖಲೆಯ ಮಳೆಯಾಗಿದೆ. ಇದರ ಜೊತೆಗೆ 70 ರಿಂದ 80 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಗಾಳಿ ಬೀಸಿದ್ದರಿಂದ ಮರಗಳು, ಕರೆಂಟ್​ ಕಂಬಗಳು ನೆಲಕ್ಕೆ ಉರುಳಿದ್ದರಿಂದ ಹಲವು ಕಡೆ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊನೆ ಪಂದ್ಯದಲ್ಲಿ CSK ಸಿಡಿಲಬ್ಬರದ ಬ್ಯಾಟಿಂಗ್​.. ಕಾನ್ವೆ, ಬ್ರೆವಿಸ್ ಅರ್ಧಶತಕ, ಗುಜರಾತ್​ಗೆ ಬಿಗ್ ಟಾರ್ಗೆಟ್​

publive-image

ಮರಗಳು ಉರುಳಿ ಬಿದ್ದು ವಾಹನಗಳು ಹೆಚ್ಚು ಹಾನಿಗೊಂಡಿವೆ. ಕೆಲವು ಕಡೆ ವಾಹನ ಮುಳುಗುವಷ್ಟು ನೀರು ನಿಂತು ಸಂಚಾರ ಮಾಡಲು ಸಾಕಷ್ಟು ಸಮಸ್ಯೆ ಆಯಿತು. ವಿಮಾನ ನಿಲ್ದಾಣದ ಸುತ್ತಮುತ್ತ ವರುಣನ ಆರ್ಭಟದಿಂದ ಪ್ರಯಾಣದಲ್ಲಿ ವ್ಯತ್ಯಯವಾಗಿರುವುದು ಕಂಡು ಬಂದಿದೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.


">May 25, 2025


">May 25, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment