/newsfirstlive-kannada/media/post_attachments/wp-content/uploads/2025/07/AI.jpg)
ಕೃತಕ ಬುದ್ಧಿಮತ್ತೆಯ (AI) ವ್ಯಾಪ್ತಿ ಮತ್ತು ಅದರ ವೇಗ ಹೆಚ್ಚಾಗಿದೆ. ಸಣ್ಣ, ಪುಟ್ಟ ಕೆಲಸಗಳಿಗೂ ಜನ AI ನೆಚ್ಚಿಕೊಂಡಿದ್ದಾರೆ. ಪ್ರಪಂಚದ ಲಕ್ಷಾಂತರ ಮಂದಿ ತಮ್ಮ ಬರವಣಿಗೆ ಮತ್ತು ಇತರ ಜ್ಞಾನಕ್ಕಾಗಿ ಚಾಟ್‌ಜಿಪಿಟಿ (Chatgpt) ಬಳಸುತ್ತಿದ್ದಾರೆ. ಹೆಚ್ಚುತ್ತಿರುವ AIನ ಸುಲಭ ಮಾರ್ಗವು ನಮ್ಮ ಮೆದುಳನ್ನು ದುರ್ಬಲಗೊಳಿಸುತ್ತಿದೆಯೇ ಎಂಬ ಪ್ರಶ್ನೆ ಶುರುವಾಗಿದೆ.
ಇದನ್ನೂ ಓದಿ: ಜುಲೈ 11 ರಂದು ಬೆಂಗಳೂರಿನಲ್ಲಿ ಬಿಸೈಡ್ಸ್ನ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನ
ಇದಕ್ಕೆ ಉತ್ತರ ಕಂಡುಕೊಳ್ಳಲು MIT ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Massachusetts Institute of Technology) ಸಂಶೋಧಕರು ಇತ್ತೀಚೆಗೆ ಒಂದು ಅಧ್ಯಯನ ಮಾಡಿದ್ದರು. ಈ ಸಂಶೋಧನೆಯಲ್ಲಿ AI ಬಗ್ಗೆ ಆಘಾತಕಾರಿ ಸತ್ಯ ಗೊತ್ತಾಗಿದೆ.
MIT ಸಂಶೋಧನೆ ಗೊತ್ತಾಗಿದ್ದು ಏನು..?
MIT ಮೀಡಿಯಾ ಲ್ಯಾಬ್, ವೆಲ್ಲೆಸ್ಲಿ ಕಾಲೇಜು ಮತ್ತು ಮಾಸ್‌ಆರ್ಟ್‌ನ ಸಂಶೋಧಕರ ತಂಡ ಅಧ್ಯಯ ನಡೆಸಿದೆ. ಪರೀಕ್ಷೆಗೆ 54 ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು.
- ಮೊದಲ ಗ್ರೂಪ್: ಪ್ರಬಂಧಗಳನ್ನು ಬರೆಯಲು ಚಾಟ್‌ಜಿಪಿಟಿ ಬಳಕೆ ಮಾಡಿತ್ತು
- ಎರಡನೇ ಗ್ರೂಪ್: ಪ್ರಬಂಧ ಬರೆಯಲು ಈ ಗುಂಪು ಗೂಗಲ್ನಲ್ಲಿ ಹುಡುಕಾಟ ನಡೆಸಿತ್ತು
- ಮೂರನೇ ಗ್ರೂಪ್: ಯಾರ ಸಹಾಯವೂ ಪಡೆಯದೇ ಪ್ರಬಂಧ ಬರೆದಿತ್ತು.
ಸಂಶೋಧನೆಯಲ್ಲಿ ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (Electroencephalogram) ತಂತ್ರಜ್ಞಾನ ಬಳಸಿ ಮೆದುಳಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಆ ಮೂಲಕ ಅವರ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಅನ್ನೊದನ್ನು ತಿಳಿದುಕೊಳ್ಳಲಾಯಿತು. ಅವರ ಮೆದುಳು ಎಷ್ಟು ಸಕ್ರಿಯವಾಗಿದೆ ಮತ್ತು ಚಾಟ್‌ಜಿಪಿಟಿ ಬಳಸುವ ಜನರ ಮೆದುಳು ಎಷ್ಟು ಮಾಹಿತಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿದರು.
ಫಲಿತಾಂಶ ಏನು..?
ಚಾಟ್ ಜಿಪಿಟಿ ಅವಲಂಬಿಸಿದ ವಿದ್ಯಾರ್ಥಿಗಳು ಕಡಿಮೆ ಮೆದುಳಿನ ಚಟುವಟಿಕೆ ಹೊಂದಿದ್ದಾರೆ. ಚಾಟ್ ಜಿಪಿಟಿ ಬಳಸಿದ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಯಾವುದೇ ತಂತ್ರಜ್ಞಾನವಿಲ್ಲದೆ ಸ್ವಂತವಾಗಿ ಪ್ರಬಂಧ ಬರೆದವರ ಮೆದುಳು ಹೆಚ್ಚು ಸಕ್ರಿಯವಾಗಿತ್ತು. ಸರ್ಚ್ ಇಂಜಿನ್ಗಳನ್ನು ಬಳಸಿದ ವಿದ್ಯಾರ್ಥಿಗಳ ಸ್ಥಿತಿ ಈ ಎರಡರ ನಡುವೆ ಇತ್ತು ಎಂದು ವರದಿ ಹೇಳಿದೆ.
ಇದನ್ನೂ ಓದಿ:1,00,000 ಉದ್ಯೋಗಿಗಳನ್ನ ಮನೆಗೆ ಕಳುಹಿಸಿದ ಟೆಕ್ ಕಂಪನಿಗಳು.. ಇನ್ನೂ 3 ವರ್ಷ ಇದೇ ಕತೆ -ಎಚ್ಚರಿಕೆ..!
ಒಮ್ಮೆ ಪ್ರಬಂಧ ಬರೆಯಲು ನೀಡಿದ ನಂತರ.. ಯಾವುದೇ ಸಹಾಯವಿಲ್ಲದೇ ಮತ್ತೊಮ್ಮೆ ಪ್ರಬಂಧ ಬರೆಲು ಅವಕಾಶ ಮಾಡಿಕೊಡಲಾಗಿತ್ತು. ಆಗ ಚಾಟ್‌ಜಿಪಿಟಿ ಬಳಸಿದ್ದ ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನೇ ಮರೆತುಬಿಟ್ಟಿದ್ದರು. ಅದನ್ನು ಸಂಶೋಧಕರು ನಾಲೇಜ್ ಆಪ್ಲೋಡಿಂಗ್ ಎಂದು ಕರೆದರು. ಅಂದರೆ ಮೆದುಳಿನ ಕೆಲಸವನ್ನು AI ಮೇಲೆ ಹಾಕುವುದಾಗಿದೆ.
ChatGPT ಬಳಸಿ ಬರೆದ ಪ್ರಬಂಧದ ರಚನೆಯ ವ್ಯಾಕರಣ ಮತ್ತು ಜ್ಞಾನ ಸಾಕಷ್ಟು ಉತ್ತಮವಾಗಿತ್ತು. ಆದರೆ ಆ ಪ್ರಬಂಧವು ಮೂಲ ವೈವಿಧ್ಯತೆ ಮತ್ತು ಆಳ ಹೊಂದಿರಲಿಲ್ಲ. ಮೆದುಳಿಗೆ ಮಾತ್ರ ಸೀಮಿತವಾದ ಗುಂಪಿನಲ್ಲಿ ತಮ್ಮ ಮನಸ್ಸಿನಿಂದ ಬರೆದವರು ಹೆಚ್ಚು ವಿಮರ್ಶಾತ್ಮಕ ಚಿಂತನೆ ಮತ್ತು ಪೂರ್ಣ ವೈವಿಧ್ಯಮಯ ಶಬ್ದಕೋಶ ಹೊಂದಿದ್ದರು.
AIನಿಂದ ಮೆದುಳಿಗೆ ಪೆಟ್ಟು..?
ChatGPT ನಂತಹ AI ಟೂಲ್ ಬಳಸೋದ್ರಿಂದ ಅನೇಕ ಮಾಹಿತಿಗಳು ಸಿಗುತ್ತವೆ. ಆದರೆ ಅವುಗಳ ಮೇಲಿನ ಅತಿಯಾದ ಅವಲಂಬನೆಯು ನಮ್ಮ ಮೆದುಳಿನ ಚಟುವಟಿಕೆ, ಸ್ಮರಣಶಕ್ತಿ ಮತ್ತು ಸೃಜನಶೀಲತೆಗೆ ಹಾನಿ ಮಾಡ್ತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ, ಅಧ್ಯಯನದ ಸಮಯದಲ್ಲಿ ವಿದ್ಯಾರ್ಥಿಗಳ ಆಲೋಚನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.
ಇದನ್ನೂ ಓದಿ: ತಂತ್ರಜ್ಞಾನದಲ್ಲಿ ಭಾರೀ ಬದಲಾವಣೆಗಳು.. ಡಿಗ್ರಿ ಪಡೆದರೂ ನಿಮ್ಗೆ ಕೆಲಸ ಸಿಗಲ್ಲ- ಉದ್ಯಮಿ ನಿಖಿಲ್ ಕಾಮತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ