Advertisment

ಸ್ಟಾರ್​ ನಟನ ಹೆಂಡತಿಯ ಬ್ಯುಸಿನೆಸ್​ ಐಡಿಯಾ.. ಕೇವಲ ನಿದ್ದೆ ಮಾಡಲು ಲಕ್ಷ ಲಕ್ಷ ಹಣ, ಭಾರೀ ಟೀಕೆ!

author-image
Bheemappa
Updated On
ಸ್ಟಾರ್​ ನಟನ ಹೆಂಡತಿಯ ಬ್ಯುಸಿನೆಸ್​ ಐಡಿಯಾ.. ಕೇವಲ ನಿದ್ದೆ ಮಾಡಲು ಲಕ್ಷ ಲಕ್ಷ ಹಣ, ಭಾರೀ ಟೀಕೆ!
Advertisment
  • ಒಂದು ಗಂಟೆ ಜಪಾನೀಸ್ ಲಿಂಫಾಟಿಕ್ ಮಸಾಜ್​ಗೆ ಹಣ ಎಷ್ಟು?
  • ಈ ಐಷಾರಾಮಿ ವಿಶ್ರಾಂತಿ ತಾಣದ ಸೇವೆಗಳ ಬೆಲೆ ಶಾಕ್ ಕೊಡ್ತಾವೆ
  • ಆತಂಕ, ದುಗುಡು, ನಿರಾಸೆ ಇದ್ದರೇ ಅರ್ಧಗಂಟೆಗೆ 10 ಸಾವಿರ ಹಣ

ಬಾಲಿವುಡ್ ಸ್ಟಾರ್​ ಶಾಹಿದ್ ಕಪೂರ್ ಅವರ ಹೆಂಡತಿ ಮೀರಾ ರಜಪೂತ್ ಅವರು ಮುಂಬೈನ ಬಂದ್ರಾದಲ್ಲಿ ಐಷಾರಾಮಿ ವಿಶ್ರಾಂತಿ ತಾಣ ಆರಂಭಿಸಿದ್ದಾರೆ. ಇಲ್ಲಿನ ಸೇವೆಗಳಿಗೆ ವಿಧಿಸಲಾಗುವ ಶುಲ್ಕಗಳ ಬಗ್ಗೆ ಕೇಳಿದ್ರೆ ಎಲ್ಲರೂ ಶಾಕ್​ ಆಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ನೆಟ್ಟಿಗರು ಟೀಕೆ ಮಾಡುತ್ತ, ಟ್ರೋಲ್ ಮಾಡುತ್ತಿದ್ದಾರೆ.

Advertisment

publive-image

ಧುನ್ ವೆಲ್ನೆಸ್ ಎಂಬುದು ಮೀರಾ ರಜಪೂತ್ ಅವರ ಐಷಾರಾಮಿ ವಿಶ್ರಾಂತಿ ತಾಣವಾಗಿದೆ. ಇಲ್ಲಿ ನೀಡುವ ಪ್ರತಿಯೊಂದು ಸೇವೆ ಕೂಡ ಹೆಚ್ಚು ದುಬಾರಿಯಾಗಿವೆ. ಆಯುರ್ವೇದ ಚಿಕಿತ್ಸೆಗಳ ಜೊತೆಗೆ ಶಾಂತ ಮನಸ್ಥಿತಿ ಒದಗಿಸುತ್ತದೆ. ಕೆಲಸದ ಒತ್ತಡ ಅಥವಾ ಇತರೆ ಒತ್ತಡಗಳಿಗೆ ಸಿಲುಕಿದವರಿಗೆ ನಿದ್ದೆ ಮಾಡುತ್ತ ವಿಶ್ರಾಂತಿ ಪಡೆಯಬಹುದು. ಗ್ರಾಹಕರಿಗೆ ಪುನರ್ಯೌವನದ ಅನುಭವವನ್ನು ನೀಡುವ ಭರವಸೆ ಇಲ್ಲಿ ನೀಡಲಾಗುತ್ತದೆ. ಆದರೆ ಇಲ್ಲಿನ ಬೆಲೆಗಳು ಮಾತ್ರ ಆಕಾಶದೆತ್ತರಕ್ಕೆ ಇವೆ.

ತುಲ್ಯಾ ಸೆಷನ್ (Tulya session) 90 ನಿಮಿಷಕ್ಕೆ ಅಂದರೆ ಒಂದೂವರೆ ತಾಸಿಗೆ 12,500 ರೂಪಾಯಿಗಳು ಆಗಿವೆ. ಎಥೆರಾ ಫೇಶಿಯಲ್, ಜಪಾನೀಸ್ ಲಿಂಫಾಟಿಕ್ ಮಸಾಜ್‌ 1 ಗಂಟೆಗೆ 12,000 ರೂಪಾಯಿ ಶುಲ್ಕವಿದೆ. ಮನದಲ್ಲಿ ಆತಂಕ, ದುಗುಡು, ನಿರಾಸೆ (EFT- Emotional Freedom Technique) ಇಂತವುಗಳಿದ್ದರೇ ಅವುಗಳ ನಿವಾರಣೆಗೆ ಪ್ರತಿ ಅರ್ಧಗಂಟೆಗೆ 10 ಸಾವಿರ ರೂಪಾಯಿ ಶುಲ್ಕ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಧಾನಸೌಧ ಗೈಡೆಡ್ ಟೂರ್.. ಇಂದಿನಿಂದ ಸಾರ್ವಜನಿಕರಿಗೆ ಅವಕಾಶ, ಮಕ್ಕಳಿಗೆ ಉಚಿತ ಪ್ರವೇಶ

Advertisment

publive-image

ಒಂದು ವೇಳೆ ಗ್ರಾಹಕರಿಗೆ ಒಂದು ವಾರದವರೆಗೆ ಮೀರಾ ರಜಪೂತ್ ಅವರ ಐಷಾರಾಮಿ ವಿಶ್ರಾಂತಿ ತಾಣದಲ್ಲಿ ಇರಬೇಕು ಅನಿಸಿದ್ರೆ 1.5 ಲಕ್ಷ ರೂಪಾಯಿ ಪಾವತಿ ಮಾಡಬೇಕು. ಈ ರೀತಿ ಬೆಲೆಗಳನ್ನು ವಿಧಿಸಲಾಗುತ್ತಿದೆ. ಇದನ್ನೇ ನೆಟ್ಟೆಗರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇವರು ನೀಡುವ ಸೇವೆಯ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಕೇವಲ 500 ರೂಪಾಯಿಗೆ ಇದನ್ನೆಲ್ಲಾ ಮಾಡಬಹುದು ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. 1.5 ಲಕ್ಷ ರೂಪಾಯಿಗೆ ಮೀರಾ ರಜಪೂತ್ ನಮಗೆ ನಿದ್ದೆ ಮಾಡಿಸುತ್ತಾರೆ ಎಂದು ಕಾಲೆಳೆದಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment