ಭಾರತಕ್ಕೆ ಮತ್ತೊಂದು ನಿರಾಸೆ.. ಕೇವಲ ಒಂದೇ ಒಂದು ಕೆಜಿಯಿಂದ ಮೆಡಲ್​ ಮಿಸ್ ಮಾಡಿಕೊಂಡ ಮೀರಾಬಾಯಿ ಚಾನು

author-image
Bheemappa
Updated On
ಭಾರತಕ್ಕೆ ಮತ್ತೊಂದು ನಿರಾಸೆ.. ಕೇವಲ ಒಂದೇ ಒಂದು ಕೆಜಿಯಿಂದ ಮೆಡಲ್​ ಮಿಸ್ ಮಾಡಿಕೊಂಡ ಮೀರಾಬಾಯಿ ಚಾನು
Advertisment
  • ಮತ್ತೊಂದು ಪದಕದ ಆಸೆ ಹುಟ್ಟಿಸಿದ ಬೆನ್ನಲ್ಲೇ ನಿರಾಸೆ
  • ಭಾರತಕ್ಕೆ ಮತ್ತೊಂದು ಪದಕ ಸ್ವಲ್ಪದರಲ್ಲೇ ಕೈ ತಪ್ಪಿದೆ
  • ಅತಿ ಹೆಚ್ಚು ವೇಟ್​ ಲಿಫ್ಟ್​ ಮಾಡಿದವರು ಯಾರು..?

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಸ್ಪರ್ಧಿಗಳು ಯಶಸ್ಸಿನ ಕಡೆಗೆ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ. ಭಾರತಕ್ಕೆ ಶೂಟಿಂಗ್​ನಲ್ಲಿ 3 ಪದಕಗಳು ಬಂದ ಮೇಲೆ ಮತ್ತೆ ಯಾವ ಸ್ಪರ್ಧೆಯಲ್ಲೂ ಪದಕಗಳು ಬಂದಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಪದಕ ಕೇವಲ ಒಂದೇ ಒಂದು 1ಕೆ.ಜಿಯಲ್ಲಿ ಕೈತಪ್ಪಿದೆ. ಸದ್ಯ ಭಾರತ ಪದಕಗಳ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:BREAKING: ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್

ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಒಟ್ಟು 199 ಕೆ.ಜಿ ಭಾರವನ್ನು ಎತ್ತುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತಕ್ಕೆ ಮತ್ತೊಂದು ಪದಕ ಸ್ವಲ್ಪದರಲ್ಲೇ ಕೈತಪ್ಪಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪೂಜೆ ಮುಗಿಸಿ ಬರುವಾಗ ಅನಾಹುತ; ಗಂಡನ ಎದುರಲ್ಲೇ ನರಳಿ ನರಳಿ ಪ್ರಾಣಬಿಟ್ಟ ಗರ್ಭಿಣಿ


">August 7, 2024

ವೇಟ್ ಲಿಫ್ಟರ್ ಸ್ಪರ್ಧೆಯಲ್ಲಿ ಚೀನಾದ Z.H ಹೌ ಅವರು 206 ಕೆ.ಜಿ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ದ್ವಿತಿಯ ಸ್ಥಾನದಲ್ಲಿ ರೊಮಾನಿಯಾದ ಎಂ.ವಿ. ಕ್ಯಾಂಬೆ ಅವರು 205 ಕೆ.ಜಿ ಎತ್ತುವ ಮೂಲಕ ಬೆಳ್ಳಿ ಪದಕ​ ಪಡೆದುಕೊಂಡರು. 3ನೇ ಸ್ಥಾನದಲ್ಲಿ ಥೈಲ್ಯಾಂಡ್​ನ ಎಸ್​. ಖಾಂಬೊ 200 ಕೆ.ಜಿ ಎತ್ತುವುದರಿಂದ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಆದರೆ ಭಾರತದ ಮೀರಾಬಾಯಿ ಚಾನು 199 ಕೆ.ಜಿ ಭಾರ ಎತ್ತುವ ಮೂಲಕ ಕೇವಲ ಒಂದೇ ಒಂದು ಕೆ.ಜಿಯಿಂದ ಪದಕ ಮಿಸ್ ಮಾಡಿಕೊಂಡಿದ್ದಾರೆ. ಇದರಿಂದ ಭಾರತಕ್ಕೆ ದೊಡ್ಡ ನಿರಾಸೆಯಾಗಿದೆ. ಸದ್ಯ ಪದಕ ಪಟ್ಟಿಯಲ್ಲಿ ಅಮೆರಿಕ 27 ಗೋಲ್ಡ್​ಗಳಿಂದ ಫಸ್ಟ್​ ಸ್ಥಾನ ಪಡೆದರೆ, ಚೀನಾ 25 ಬಂಗಾರದಿಂದ 2ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment