newsfirstkannada.com

VIDEO: ಪೋಷಕರೇ ಎಚ್ಚರ.. ರೂಫ್​​ ಮೇಲೆ ಸಿಲುಕಿದ್ದ ಪುಟ್ಟ ಕಂದಮ್ಮ; ಆಮೇಲೇನಾಯ್ತು?

Share :

Published April 30, 2024 at 5:38pm

    ಪ್ರಾಣವನ್ನು ಪಣಕ್ಕಿಟ್ಟು ರೂಫ್ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಮಗುವಿನ ರಕ್ಷಣೆ

    ಅಪಾರ್ಟ್‌ಮೆಂಟ್‌ ನಿವಾಸಿಗಳ ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಈ ಮಗುವಿನ ವಿಡಿಯೋ

ಚೆನ್ನೈ: ಮನೆಯಲ್ಲಿ ಇರುವ ಪುಟ್ಟ ಮಕಳ್ಳನ್ನು ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಅದರಲ್ಲೂ ಅಂಬೆಗಾಲಿಡುವ ಮಕ್ಕಳ ಬಗ್ಗೆ ಪೋಷಕರ ಎಷ್ಟು ಜಾಗೃತೆ ವಹಿಸಿದರೂ ಸಾಕಾಗುವುದಿಲ್ಲ. ಆದರೆ ಕೆಲವೊಂದು ಬಾರಿ ಪೋಷಕರ ಕಣ್ಣು ತಪ್ಪಿ ಅಪಾಯಗಳು ಸಂಭವಿಸಿ ಬಿಡುತ್ತವೆ.

View this post on Instagram

A post shared by BAAP (@sunnobc)

ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್‌; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಇದೀಗ ಇಂತಹದ್ದೇ ಒಂದು ಘಟನೆ ಮುನ್ನೆಲೆಗೆ ಬಂದಿದೆ. ಪೋಷಕರ ಅಜಾಗರೂಕತೆಯಿಂದ ಮಗುವೊಂದು ಎರಡನೇ ಮಹಡಿಯ ಅಪಾರ್ಟ್‌ಮೆಂಟ್‌​ವೊಂದರ ರೂಫ್ ಮೇಲೆ ಸಿಕ್ಕಿಹಾಕಿಕೊಂಡಿರೋ ಘಟನೆ ಚೆನ್ನೈನಲ್ಲಿ ನಡೆದಿದೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಮಗುವೊಂದು ಆಟವಾಡುತ್ತ ಅಪಾರ್ಟ್‌ಮೆಂಟ್‌ನ ಪ್ಲಾಸ್ಟಿಕ್ ರೂಫ್​​ ಮೇಲೆ ಕಾಲಿಟ್ಟಿದೆ. ಹೀಗೆ ಕಾಲಿಟ್ಟ ಮಗುವು ಜಾರಿಕೊಂಡು ಮುಂದಕ್ಕೆ ಹೋಗಿದೆ. ಆಗ ಮಗು ಅಳುವ ಸದ್ದನ್ನು ಕೇಳಿಸಿಕೊಂಡ ತಾಯಿ, ಜೋರಾಗಿ ಕಿರುಚಿಕೊಂಡು ಅಕ್ಕ ಪಕ್ಕದ ನಿವಾಸಿಗಳನ್ನು ಕರೆದಿದ್ದಾಳೆ. ಮಹಿಳೆ ಶಬ್ದ ಕೇಳುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ಹೌಸಿಂಗ್ ಸೊಸೈಟಿಯ ನಿವಾಸಿಗಳು ದೌಡಾಯಿಸಿ ಮಗುವನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು, ಮಗು ಕೆಳಗೆ ಬೀಳದೆ ಇರೋ ಹಾಗೇ ಅಲ್ಲಿನ ನಿವಾಸಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮೊದಲನೇ ಮಹಡಿಯ ಕಿಟಕಿಯಿಂದ ನುಗ್ಗಿ ರೂಫ್ ಮೇಲೆ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಮಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪೋಷಕರೇ ಎಚ್ಚರ.. ರೂಫ್​​ ಮೇಲೆ ಸಿಲುಕಿದ್ದ ಪುಟ್ಟ ಕಂದಮ್ಮ; ಆಮೇಲೇನಾಯ್ತು?

https://newsfirstlive.com/wp-content/uploads/2024/04/baby1.jpg

Load More