newsfirstkannada.com

ಬರೋಬ್ಬರಿ 6 ಮಕ್ಕಳನ್ನ ಒಂದೇ ಬಾರಿ ಹೆತ್ತ ಮಹಾತಾಯಿ.. ಗಂಡ, ಕುಟುಂಬಸ್ಥರು ಫುಲ್ ಖುಷ್!

Share :

Published April 21, 2024 at 8:48am

    ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮ ನೀಡಿದ ತಾಯಿ

    6 ಮಕ್ಕಳಲ್ಲಿ ಎಷ್ಟು ಹೆಣ್ಣು, ಎಷ್ಟು ಗಂಡು ಮಕ್ಕಳು ಇದಾವೆ ಗೊತ್ತಾ?

    ಜಿಲ್ಲಾ ಆಸ್ಪತ್ರೆಯಲ್ಲಿ ಒಂದೇ ಬಾರಿ 6 ಮಕ್ಕಳಿಗೆ ಜನ್ಮ ನೀಡಿದ ತಾಯಿ

ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಪವಾಡ ಎನ್ನುವಂತೆ ಜನ್ಮ ನೀಡಿದ್ದು ಎಲ್ಲವೂ ಆರೋಗ್ಯವಾಗಿವೆ. ಇದರಲ್ಲಿ 4 ಗಂಡು, 2 ಹೆಣ್ಣು ಮಕ್ಕಳು ಸೇರಿವೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ 27 ವರ್ಷದ ಜೀನತ್ ವಹೀದ್ ಅವರು ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಟೆಯ ಅವಧಿಯಲ್ಲಿ ಎಲ್ಲ ಮಕ್ಕಳಿಗೆ ಒಂದರ ನಂತರ ಒಂದರಂತೆ ಜೀನತ್ ಜನ್ಮ ನೀಡಿದಳು. ತಾಯಿ ಸೇರಿದಂತೆ ಎಲ್ಲ ಶಿಶುಗಳ ಸ್ಥಿತಿ ಸ್ಥಿರವಾಗಿದೆ. ಶಿಶುಗಳು ಉತ್ತಮ ಆರೋಗ್ಯ ಹೊಂದಿದ್ದು ಮತ್ತು ಅವರೆಲ್ಲರೂ ಕಡಿಮೆ ತೂಕ ಹೊಂದಿದ್ದಾರೆ. ಆದರೆ ಬೆಳೆದಂತೆ ಸರಿ ಹೋಗ್ತಾರೆ. ಮನೆಯಲ್ಲಿ ಲಾಲನೆ, ಪಾಲನೆ ಸರಿಯಾಗಿ ಆದರೆ ತೂಕ ಸರಿದೂಗಿಸಿಕೊಳ್ಳಬಹುದು. ಸದ್ಯ ಶಿಶುಗಳನ್ನು ಆಸ್ಪತ್ರೆಯ ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದ್ದು, ಅವುಗಳಿಗೆ ಅಥವಾ ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಬ್ಬಾ! ಮಳೆ.. ಮಳೆ.. ಕೊಚ್ಚಿ ಹೋದ ಬೈಕ್‌ಗಳು, ಪಲ್ಟಿಯಾದ ಲಾರಿ; ರಾಜ್ಯದಲ್ಲಿ ಇಂದು ವರುಣಾರ್ಭಟ!

ರಾವಲ್ಪಿಂಡಿಯ ಹಾಜಿರಾ ಕಾಲೋನಿಯ ನಿವಾಸಿ ಮೊಹಮ್ಮದ್ ವಹೀದ್ ಪತ್ನಿ ಜೀನತ್ ವಹೀದ್ ಆಗಿದ್ದಾರೆ. ಪತ್ನಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ನೋವು ಕಾಣಿಸಿದ್ದಕ್ಕೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆರಿಗೆ ಸಮಯದ ಒಂದು ಗಂಟೆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಮೆಡಿಕಲ್ ಮಿರಕಲ್ ನಡೆದು ಹೋಗಿದೆ. ಪತ್ನಿ 6 ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತಿ ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗೆದ್ದರೆ ಫ್ಲೇ ಆಫ್ ಜೀವಂತ.. KKR ವಿರುದ್ಧ RCBಗೆ ಇಂದಾದ್ರೂ ಗೆಲುವು ಸಿಗುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 6 ಮಕ್ಕಳನ್ನ ಒಂದೇ ಬಾರಿ ಹೆತ್ತ ಮಹಾತಾಯಿ.. ಗಂಡ, ಕುಟುಂಬಸ್ಥರು ಫುಲ್ ಖುಷ್!

https://newsfirstlive.com/wp-content/uploads/2024/04/Pakistani_Woman.jpg

Load More