newsfirstkannada.com

‘ಕಾಟೇರ’ ನೋಡಲು ಹೋದಾಗ ಸ್ನೇಹಿತರೊಂದಿಗೆ ಚಾಲೆಂಜ್​​.. ಯುವತಿಗೆ ಬ್ಯಾಡ್​ ಟಚ್​​​ ಮಾಡಿ ಸಿಕ್ಕಿಬಿದ್ದ ಕಾಮುಕ..!

Share :

Published February 1, 2024 at 6:43am

    ಕ್ಯಾಶ್‌ ಕೌಂಟರ್‌ ಬಳಿ ಯುವತಿಗೆ ಮಾಡಿದ್ದ ಬ್ಯಾಡ್‌ಟಚ್

    ಸ್ನೇಹಿತರ ಚಾಲೆಂಜ್ ಸ್ವೀಕರಿಸಿದವನಿಂದ ಬ್ಯಾಡ್ ಟಚ್‌

    CCTV, ಗೂಗಲ್ ಪೇ ನಂ ಆಧರಿಸಿ ಚಂದನ್ ಬಂಧನ

ಬೆಂಗಳೂರು: ಇದು ಸ್ನೇಹಿತರ ಸವಾಲ್ ಸ್ವೀಕರಿಸಿ ಸೆರೆ ಮನೆ ಸೇರಿದ ಯುವಕನ ಕಥೆ. ಚಾಲೆಂಜ್​ ಹಾಕಿ ಯುವತಿಗೆ ಬ್ಯಾಡ್ ಟಚ್ ಮಾಡಿ ವಿಕೃತಿ ಮೆರೆದ ಕೀಚಕನ ಸ್ಟೋರಿ. ಕಾಟೇರ ಸಿನಿಮಾ ನೋಡಲು ಹೋಗಿದ್ದ ಮೂವರು ಸ್ನೇಹಿತರ ಬೆಟ್ಟಿಂಗ್​ ಗುಟ್ಟು ಪೊಲೀಸ್​ ಮುಂದೆ ಕೊನೆಗೂ ಆಯ್ತು ರಟ್ಟು.

ಜನವರಿ 18ರಂದು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಯುವಕರ ಗುಂಪಿನ ಹೇಯ ಕೃತ್ಯ ಮಾಡಿದ್ದಾರೆ. ಈ ಘಟನೆ ಹಿಂದಿನ ಅಸಲಿ ಸತ್ಯ​ ಈಗ ಬಯಲಾಗಿದೆ. ಯುವತಿಗೆ ಬ್ಯಾಡ್ ಟಚ್ ಮಾಡಿ ವಿಕೃತಿ ಮೆರೆದವ ಈಗ ಪೊಲೀಸ್​ ಕೈಯಲ್ಲಿ ಲಾಕ್​ ಆಗಿದ್ದು. ಆ ರಾತ್ರಿ ನಡೆದ ಅಸಲಿಯತ್ತು ಬಾಯ್​ ಬಿಟ್ಟಿದ್ದಾನೆ. ಆರೋಪಿಯಾಗಿರೋ​ ಚಂದನ್​ ವೃತ್ತಿಯಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್. ಆದ್ರೆ, ಘಟನೆ ನಡೆದ ದಿನ ಸ್ನೇಹಿತರು ಹಾಕಿದ ಸವಾಲ್ ಸ್ವೀಕರಿಸಿ‌ ಧೀರ ಶೂರ ಅನಿಸಿಕೊಳ್ಳಲು ಹೋಗಿದ್ದ. ಗುಬ್ಬಿಯಿಂದ ಬಂದಿದ್ದ ಸ್ನೇಹಿತರೊಂದಿಗೆ ಕಾಟೇರ ಸಿನಿಮಾ ನೋಡಲು ಹೋಗಿದ್ದ ಚಂದನ್.

ಬಳಿಕ ಸ್ನೇಹಿತರೊಂದಿಗೆ ಟೀ ಕುಡಿಯಲು ವಿಜಯನಗರದ ನಮ್ಮೂಟ ಹೊಟೇಲ್​ಗೆ ಹೋಗಿದ್ದ. ಆ ವೇಳೆ ಹೋಟೆಲ್ ಬಳಿ ಯುವತಿಯರನ್ನ ನೋಡಿ ಅವ್ರನ್ನ ಟಚ್ ಮಾಡಲು ಬೆಟ್ಟಿಂಗ್ ಕಟ್ಟಿದ್ದ. ಸ್ನೇಹಿತರು ಹಾಕಿದ ಸವಾಲ್ ಸ್ವೀಕರಿಸಿ‌ ಕ್ಯಾಶ್ ಕೌಂಟರ್ ಬಳಿ ನಿಂತಿದ್ದ ಯುವತಿಗೆ ಚಂದನ್ ಬ್ಯಾಡ್ ಟಚ್ ಮಾಡಿದ್ದ. ಬಳಿಕ ಪ್ರಶ್ನಿಸಿದ ಯುವತಿಗೆ ಅವಾಜ್ ಹಾಕಿ ಚಂದನ್ ಅಂಡ್ ಸ್ನೇಹಿತರು ಎಸ್ಕೇಪ್ ಆಗಿದ್ರು. ನಮ್ಮೂಟ ಹೋಟೆಲ್ ಸಿಬ್ಬಂದಿ ಕೊಟ್ಟ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸಿಸಿಟಿವಿ ಹಾಗೂ ಹಣ ಪಾವತಿಸಿದ್ದ ಗೂಗಲ್ ಪೇ ನಂಬರ್ ಆಧರಿಸಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಟೇರ’ ನೋಡಲು ಹೋದಾಗ ಸ್ನೇಹಿತರೊಂದಿಗೆ ಚಾಲೆಂಜ್​​.. ಯುವತಿಗೆ ಬ್ಯಾಡ್​ ಟಚ್​​​ ಮಾಡಿ ಸಿಕ್ಕಿಬಿದ್ದ ಕಾಮುಕ..!

https://newsfirstlive.com/wp-content/uploads/2024/02/VIJ-1.jpg

Load More