ಶೆಡ್‌ನಲ್ಲಿ ಮತ್ತೊಂದು ಮರ್ಡರ್‌.. ಯುವಕನನ್ನು ಕರೆದು ಸುಟ್ಟು ಹಾಕಿದ ದುಷ್ಕರ್ಮಿಗಳು; ಕಾರಣವೇನು?

author-image
admin
Updated On
ಶೆಡ್‌ನಲ್ಲಿ ಮತ್ತೊಂದು ಮರ್ಡರ್‌.. ಯುವಕನನ್ನು ಕರೆದು ಸುಟ್ಟು ಹಾಕಿದ ದುಷ್ಕರ್ಮಿಗಳು; ಕಾರಣವೇನು?
Advertisment
  • ಇಷ್ಟ ಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವ ಭರವಸೆ
  • ಮೃತದೇಹ ಇನೋವಾ ಕಾರಿನಲ್ಲಿ ತೆಗೆದುಕೊಂಡು ಹೋಗಿ ಬೆಂಕಿ
  • ಬಂಕ್‌ನಲ್ಲಿ 5 ಲೀಟ‌ರ್ ಪೆಟ್ರೋಲ್ ಖರೀದಿಸಿದ್ದ ಡೆಡ್ಲಿ ಗ್ಯಾಂಗ್‌!

ಹಾವೇರಿ: ಇಷ್ಟ ಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್‌ಗೆ ಕರೆಸಿಕೊಂಡು ಹತ್ಯೆ ಮಾಡಿರುವ ಘಟನೆಯನ್ನು ಹಾನಗಲ್ ಪೊಲೀಸರು ಬೇಧಿಸಿದ್ದಾರೆ. ಕಾರು ಸಮೇತ ಮೃತದೇಹ ಸುಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಯುವತಿಯನ್ನ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪ ಗ್ರಾಮದ ಯುವಕ ವೀರೇಶ ಪ್ರೀತಿಸುತ್ತಿದ್ದ. ಅಂಕಿತಾ ಮನೆಯವರಿಗೆ ಪ್ರೀತಿ ವಿಷಯ ತಿಳಿದ ಮೇಲೆ ವೀರೇಶನನ್ನು ಮದುವೆ ಮಾಡಿಸುವುದಾಗಿ ಯುವತಿ ಪೋಷಕರು ಹೇಳಿದ್ದಾರೆ. ಅಕ್ಕಿ ಆಲೂರಿಗೆ ಕರೆಸಿ ತಮ್ಮದೇ ಶೆಡ್ ಒಂದರಲ್ಲಿ ಹತ್ಯೆಗೈದಿದ್ದಾರೆ. ಮೃತ ದೇಹವನ್ನು ವೀರೇಶ ತಂದಿದ್ದ ಸ್ನೇಹಿತನ ಇನೋವಾ ಕಾರಿನಲ್ಲಿ ಸಾಗಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತೊಗರ್ಸಿ ಬಳಿಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ. ಈ ಮಾಹಿತಿ ತಿಳಿದ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಠಾಣೆಯ ಪೊಲೀಸರು ತನಿಖೆ ನಡೆಸಿದ್ದಾರೆ.

publive-image

ವೀರೇಶ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಹಾನಗಲ್ ಠಾಣೆಗೆ ವರ್ಗಾಯಿಸಿದ್ದರು. ನಂತರ ಅಕ್ಕಿ ಆಲೂರಿನ ಯುವತಿಯ ಇಬ್ಬರು ಸಹೋದರರು, ತಂದೆ- ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರನ್ನು ಬಂಧಿಸಲಾಗಿತ್ತು.

ಶಿವಮೊಗ್ಗದ ಗಾಡಿಕೊಪ್ಪದ ವೀರೇಶ, ಚಾಲಕ ವೃತ್ತಿಯಲ್ಲಿದ್ದರು. ಶಿವಮೊಗ್ಗದಲ್ಲಿ ಓದುತ್ತಿದ್ದ ದೂರದ ಸಂಬಂಧಿಯೂ ಆಗಿದ್ದ ಅಕ್ಕಿ ಆಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ವೀರೇಶನ ನಡತೆ ಸರಿ ಇಲ್ಲ ಎಂದು ಯುವತಿಯ ಅಣ್ಣಂದಿರು, ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​​; ನಟ ದರ್ಶನ್​​ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..? 

ಯುವತಿಯನ್ನು ಮದುವೆಯಾಗಲು ತೀರ್ಮಾನಿಸಿದ್ದ ವೀರೇಶ, ಅವರ ಮನೆಗೂ ಹೋಗಿ ಕೇಳಿ ಬಂದಿದ್ದ. ಆದರೆ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಸಿಟ್ಟಾದ ವೀರೇಶ, ಯುವತಿ ಜೊತೆಗಿನ ಚಿತ್ರಗಳನ್ನು ಸಂಬಂಧಿಕರೊಬ್ಬರಿಗೆ ಕಳುಹಿಸಿದ್ದ. ವಿಷಯ ತಿಳಿದ ಯುವತಿಯ ಸಹೋದರರು, ಮದುವೆ ಮಾಡಿಸುವ ನೆಪದಲ್ಲಿ ವೀರೇಶನನ್ನು ಕರೆಸಿಕೊಂಡು ತಾಕೀತು ಮಾಡಲು ಸಂಚು ರೂಪಿಸಿ ಹತ್ಯೆಗೈಗಿದ್ದಾರೆ.

ಕಳೆದ ಮಾರ್ಚ್ 15ರಂದು ಬೆಳಗ್ಗೆ ವೀರೇಶಗೆ ಕರೆ ಮಾಡಿದ್ದ ಯುವತಿಯ ಅಣ್ಣಂದಿರು, ತಂಗಿ ಜೊತೆಗಿನ ಫೋಟೋವನ್ನು ಎಲ್ಲರಿಗೂ ಕಳುಹಿಸುತ್ತಿದ್ದಿಯಾ. ಇದರಿಂದ ನಮ್ಮ ಮರ್ಯಾದೆ ಹೋಗುತ್ತಿದೆ. ನೀನು ನಮ್ಮೂರಿಗೆ ಬಾ. ನಿನ್ನ ಜೊತೆ ತಂಗಿಯ ಮದುವೆ ಮಾಡಿಸುತ್ತೇವೆ. ಕರೆದುಕೊಂಡು ಹೋಗು ಎಂದಿದ್ದರು.

[caption id="attachment_74672" align="aligncenter" width="800"]publive-image ಹಾವೇರಿ ಎಸ್ಪಿ ಅಂಶುಕುಮಾರ್[/caption]

ಅದರಿಂದ ಖುಷಿಯಾಗಿದ್ದ ವೀರೇಶ, ಸ್ನೇಹಿತನ ಇನ್ನೋವಾ ಕಾರು (KA 51 MD 3369) ತೆಗೆದುಕೊಂಡು ತಮ್ಮ ಊರಿನಿಂದ ಅಕ್ಕಿಆಲೂರಿನತ್ತ ಹೊರಟಿದ್ದರು. ಇನ್ನೊಂದಡೆ ಯುವತಿಯ ಅಣ್ಣದಿಂದರು ಗೋವಿನ ಜೋಳದ ಮೂಟೆಗಳನ್ನು ಇಳಿಸಬೇಕೆಂದು ಹೇಳಿ ಮೂವರು ಕಾರ್ಮಿಕರನ್ನು ಶೆಡ್‌ಗೆ ಕರೆಸಿಕೊಂಡಿದ್ದರು. ಆದರೆ, ಮೂಟೆಗಳು ಬಂದಿರಲಿಲ್ಲ. ಅನುಮಾನಗೊಂಡು ಕಾರ್ಮಿಕರು ಕೇಳಿದಾಗ, ಸದ್ಯದಲ್ಲೇ ಬರುವುದಾಗಿ ಹೇಳಿ ಸುಮ್ಮನಾಗಿಸಿದ್ದರು.

ಅಕ್ಕಿ ಆಲೂರಿಗೆ ಬರುತ್ತಿದ್ದ ವೀರೇಶನಿಗೆ ಆರೋಪಿಗಳು ಕರೆ ಮಾಡಿದ್ದರು. ಮಾರ್ಗ ಮಧ್ಯೆ ಇರುವುದಾಗಿ ವೀರೇಶ ಹೇಳಿದ್ದ. ಆಗ ಆರೋಪಿಯೊಬ್ಬ ಕಾರ್ಮಿಕನ ಜೊತೆ ಬೈಕ್‌ನಲ್ಲಿ ನಾಲ್ಕರ ಕ್ರಾಸ್‌ಗೆ ಹೋಗಿದ್ದ. ಅಲ್ಲಿಯೇ ವೀರೇಶ ಅವರ ಕಾರು ನಿಲ್ಲಿಸಿ, ಅದರಲ್ಲೇ ಹತ್ತಿದ್ದ. ಬಳಿಕ, ಇಬ್ಬರೂ ಕಾರಿನಲ್ಲಿ ಶೆಡ್‌ಗೆ ಬಂದಿದ್ದರು. ಯುವತಿ ವಿಚಾರ ಪ್ರಸ್ತಾಪಿಸಿದ್ದ ಆರೋಪಿಗಳು, ಹಲ್ಲೆ ಮಾಡಿದ್ದರು. ಮಚ್ಚಿನಿಂದ ಹೊಡೆದಿದ್ದರು. ತೀವ್ರ ಗಾಯಗೊಂಡ ವೀರೇಶ ಮೃತಪಟ್ಟಿದ್ದರು. ಶೆಡ್‌ಗೆ ಬಂದಿದ್ದ ಯುವತಿಯ ತಂದೆ-ಚಿಕ್ಕಪ್ಪ, ರಕ್ತದ ಕಲೆಗಳನ್ನು ತೊಳೆದಿದ್ದರು ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರತ್ನ ಭಂಡಾರದಲ್ಲಿ ಸಿಕ್ಕಿದ್ದೇನು? ಬಾಗಿಲು ತೆರೆದಾಗ ಏನಾಯ್ತು? ಅಸಲಿ ವಿಷ್ಯ ಇಲ್ಲಿದೆ! 

ಶೆಡ್‌ ಹಾಗೂ ಸುತ್ತಮುತ್ತ ಮೃತದೇಹ ಎಸೆದರೆ ಪೊಲೀಸರು ತಮ್ಮನ್ನು ಬಂಧಿಸಬಹುದೆಂದು ಆರೋಪಿಗಳು ಅಂದುಕೊಂಡಿದ್ದರು. ಹೀಗಾಗಿ ವೀರೇಶ ತಂದಿದ್ದ ಇನ್ನೋವಾ ಕಾರಿನಲ್ಲೇ ಮೃತದೇಹ ಇಟ್ಟುಕೊಂಡು ಆರೋಪಿಗಳು ಶಿರಾಳಕೊಪ್ಪದತ್ತ ಹೊರಟಿದ್ದರು. ಮಾರ್ಗ ಮಧ್ಯೆ ಬಂಕ್‌ವೊಂದರಲ್ಲಿ 5 ಲೀಟ‌ರ್ ಪೆಟ್ರೋಲ್ ಖರೀದಿಸಿದ್ದರು. ಮಾರ್ಚ್ 16ರಂದು ನಸುಕಿನಲ್ಲಿ ತೊಗರ್ಸಿ ಗ್ರಾಮ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿ ಮೃತದೇಹ ಸುಟ್ಟಿದ್ದರು.

ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದರ ಸಮೇತ ನ್ಯಾಯಾಲಯಕ್ಕೆ ಸದ್ಯದಲ್ಲೇ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment