Advertisment

ಬೆಳಗಾವಿಯಲ್ಲಿ ಬೆಳ್ಳಂ‌ಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನ ಬರ್ಬರ ಹತ್ಯೆ

author-image
AS Harshith
Updated On
ಬೆಳಗಾವಿಯಲ್ಲಿ ಬೆಳ್ಳಂ‌ಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನ ಬರ್ಬರ ಹತ್ಯೆ
Advertisment
  • ಬೆಳ್ಳಂಬೆಳಗ್ಗೆ ಯುವಕನ ಬರ್ಬರ ಕೊಲೆ
  • ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿ ಹತ್ಯೆ
  • ಯುವಕನನ್ನು ಕೊಲೆ ಮಾಡಲು ಕಾರಣವೇನು ಗೊತ್ತಾ?

ಬೆಳಗಾವಿಯಲ್ಲಿ ಬೆಳ್ಳಂ‌ಬೆಳಗ್ಗೆ ನೆತ್ತರು ಹರಿದಿದೆ. ಯುವಕನನ್ನು ಮಾರಕಾಸ್ತ್ರಗಳಿಂದ‌ ಕೊಚ್ಚಿ ಹತ್ಯೆ ಮಾಡಲಾಗಿದೆ.

Advertisment

ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ನಿವಾಸಿ ಮೋಮಿನ್ (28) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಅನೈತಿಕ ಸಂಬಂಧ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೇ ಗ್ರಾಮದ ಅಮೋಘ ಢವಳೇಶ್ವರ ಎಂಬಾತನಿಂದ ಕೃತ್ಯ ನಡೆದಿದೆ.

publive-image

ಇಂದು‌ ಬೈಕ್ ಮೇಲೆ ಮೋಮಿನ್ ಹಾಗೂ ಅಮೋಘ ಪತ್ನಿ ‌ಶಿಲ್ಪಾ ಹೊರಟಿದ್ದರು. ಇದನ್ನು ಗಮನಿಸಿದ ಅಮೋಘ ಬೆನ್ನಟ್ಟಿಕೊಂಡು ಬಂದಿದ್ದಾಳೆ. ಬಳಿಕ ಲಾಂಗ್‌ನಿಂದ ಮೋಮಿನ್ ಮತ್ತು ಪತ್ನಿ ಶಿಲ್ಪಾ ಮೇಲೆ‌ ದಾಳಿ ನಡೆಸಿದ್ದಾನೆ. ದಾಳಿ ವೇಳೆ ಯುವಕ ಮೋಮಿನ್ ಸ್ಥಳದಲ್ಲೇ ‌ಸಾವನ್ನಪ್ಪಿದ್ದಾನೆ. ಶಿಲ್ಪಾ ಗಂಭೀರ ಗಾಯಗೊಂಡಿದ್ದಾಳೆ.

Advertisment

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: 7 ದಿನವಾದ್ರೂ ಸಿಗದ ಮೃತದೇಹ; ಮಿಲಿಟರಿ ತಂಡ ಆಗಮನ

ಮೋಮಿನ್ ಮೇಲೆ ದಾಳಿ ನಡೆಸಿದ ಬಳಿಕ ಅಮೋಘ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಯುವಕನ ಕೊಲೆಯಿಂದಾಗಿ ಲಕ್ಷ್ಮೇಶ್ವರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

publive-image

ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ 

Advertisment

ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment