newsfirstkannada.com

ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

Share :

Published May 5, 2024 at 12:42pm

Update May 5, 2024 at 12:43pm

    23 ವರ್ಷಕ್ಕೆ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಭಾಗವಿಹಿಸಿದ್ದ ಚೆಲುವೆ

    ಡಿನ್ನರ್‌ಗೆ ರೆಸ್ಟೋರೆಂಟ್‌ಗೆ ತೆರಳಿದ್ದ ಬ್ಯೂಟಿ ಮೇಲೆ ಡೆಡ್ಲಿ ಅಟ್ಯಾಕ್

    ಎರಡು ಸುತ್ತಿನ ಗುಂಡು ಹಾರಿಸಿ ರೆಸ್ಟೋರೆಂಟ್‌ನಿಂದ ಇಬ್ಬರು ಎಸ್ಕೇಪ್‌

ಈಕೆ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. ಆದರೆ ಸುಂದರಿ ಪಟ್ಟ ಅಲಂಕರಿಸಿದ 2 ವರ್ಷಕ್ಕೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾಳೆ. ಹಂತಕರು ಈಕೆಯ ಇನ್‌ಸ್ಟಾಗ್ರಾಮ್‌ ಪೋಸ್ಟ್ ಫಾಲೋ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಲ್ಯಾಂಡಿ ಪರ್ರಾಗಾ ಗೊಯ್ಬುರೊ 23 ವರ್ಷಕ್ಕೆ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿದ್ದವಳು. ಈಕೆಗೆ ಬಹಳಷ್ಟು ಮಂದಿ ಅಭಿಮಾನಿಗಳಿದ್ದು, ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
2022ರ ಮಿಸ್ ಈಕ್ವೆಡಾರ್‌ ಲ್ಯಾಂಡಿ ಪರ್ರಾಗಾ ಗೊಯ್ಬುರೊ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಏಪ್ರಿಲ್ 28ರಂದು ಲ್ಯಾಂಡಿ ಪರ್ರಾಗಾ ಕ್ವೆವೆಡೊ ನಗರದ ರೆಸ್ಟೋರೆಂಟ್‌ಗೆ ತೆರಳಿದ್ದರು. ಈ ವೇಳೆ ಅವಳನ್ನ ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿದ್ದ ಲ್ಯಾಂಡಿ ಪರ್ರಾಗಾ ಮೇಲೆ ಅಟ್ಯಾಕ್ ಮಾಡಿರುವ ಕೊಲೆಗಾರರು ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ರೆಸ್ಟೋರೆಂಟ್‌ಗೆ ಬಂದು ಗುಂಡು ಹಾರಿಸಿರುವ ಲೈವ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಉತ್ತರ ಕನ್ನಡ: ತಾಯಿ ನಾಲೆಗೆ ಎಸೆದ ಮಗುವಿನ ಮೃತದೇಹ ಪತ್ತೆ.. ಮೊಸಳೆ ಬಾಯಿಯಿಂದ ಹೊರತೆಗೆದ ಸಿಬ್ಬಂದಿ 

ಗುಂಡಿನ ದಾಳಿಗೆ ಒಳಗಾದ ಲ್ಯಾಂಡಿ ಪರ್ರಾಗಾ ಸ್ಥಳದಲ್ಲೇ ರಕ್ತ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಅಂದು ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಒಂದು ಪೋಸ್ಟ್‌ ಕೊಲೆಗಾರರಿಗೆ ಬ್ಯೂಟಿ ಕ್ವೀನ್ ಎಲ್ಲಿದ್ದಾರೆ ಅನ್ನೋದರ ಬಗ್ಗೆ ಮಹತ್ವದ ಸುಳಿವು ನೀಡಿದೆ. ಮದುವೆ ಸಮಾರಂಭ ತೆರಳಿದ ಲ್ಯಾಂಡಿ, ಡಿನ್ನರ್‌ಗಾಗಿ ಕ್ವೆವೆಡೊ ನಗರದ ರೆಸ್ಟೋರೆಂಟ್‌ಗೆ ಹೋಗುವ ಪೋಸ್ಟ್ ಮಾಡಿದ್ದರು.

ಈ ಸುಳಿವನ್ನು ಆಧರಿಸಿ ರೆಸ್ಟೋರೆಂಟ್‌ ಲೋಕೇಷನ್ ಪತ್ತೆ ಹಚ್ಚಿದ ಕೊಲೆಗಾರರು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಹಂತಕರು ಲ್ಯಾಂಡಿ ಪರ್ರಾಗಾ ಹಾಕಿದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಅವರಿಗೆ ಸಹಾಯ ಮಾಡಿದೆ ಎನ್ನಲಾಗಿದೆ. ಈಕ್ವೆಡಾರ್‌ನಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಬ್ಯೂಟಿ ಕ್ವೀನ್‌ ಲ್ಯಾಂಡಿ ಪರ್ರಾಗಾ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರು ಅಪರಿಚಿತರು ರೆಸ್ಟೋರೆಂಟ್‌ಗೆ ಗುಂಡಿಕ್ಕಿ ಕೊಂದು ಹೋಗಿದ್ದಾರೆ. ಲ್ಯಾಂಡಿ ಪರ್ರಾಗಾ ಸಾವಿನ ಬಗ್ಗೆ ಉನ್ನತ ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

https://newsfirstlive.com/wp-content/uploads/2024/05/Landy-Parraga-Goyburo-2.jpg

Load More