/newsfirstlive-kannada/media/post_attachments/wp-content/uploads/2023/06/Miss-World.jpg)
ಭಾರತದ ಸುಂದರಿಯಾಗಬೇಕೆಂದು ಕನಸು ಹೊತ್ತವರಿಗೆ ಸಿಹಿ ಸುದ್ದಿ ಸಿಕ್ಕಿದೆ. 3 ದಶಕಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ವರ್ಧೆ ಆಯೋಜಿಸಲು ಚಿಂತಿಸಲಾಗಿದೆ. ಹಾಗಾಗಿ ಇದೇ ವರ್ಷ ಅಂತರಾಷ್ಟ್ರೀಯ ಸ್ಪರ್ಧೆ ಭಾರತದಲ್ಲಿ ನಡೆಯಲಿಕ್ಕಿದೆ.
ಇದೇ ನವೆಂಬರ್ ತಿಂಗಳಿನಲ್ಲಿ 71ನೇ ವಿಶ್ವ ಸುಂದರಿ ಆವೃತ್ತಿ ನಡೆಯಲಿಕ್ಕಿದೆ. ಆದರೆ ಅಂತಿಮ ದಿನಾಂಕ ಇನ್ನು ಖಚಿತವಾಗಿಲ್ಲ. ಭಾರತದಲ್ಲಿ ಕೊನೆಯದಾಗಿ 1996ರಲ್ಲಿ ಅಂತರಾಷ್ಟ್ರೀಯ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೀಗ 3 ದಶಕಗಳ ಬಳಿಕ ಮತ್ತೆ ಭಾರತದಲ್ಲಿ ನಡೆಯುತ್ತಿದೆ.
ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೋರ್ಲಿ ಮಾತನಾಡಿದ್ದು, ‘71ನೇ ವಿಶ್ವ ಸುಂದರಿ ಸ್ಪರ್ಧೆಯನ್ನ ಭಾರತದಲ್ಲಿ ಘೋಷಿಸಲು ನಾನು ಸಂತೋಷ ಪಡುತ್ತೇನೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ