/newsfirstlive-kannada/media/post_attachments/wp-content/uploads/2024/09/Missing.jpg)
11 ವರ್ಷದ ಹಿಂದೆ ಕಾಣೆಯಾಗಿದ್ದ ಯುವಕ ಇದೀಗ ಪತ್ತೆಯಾಗಿದ್ದಾನೆ. 20 ವರ್ಷ ವಯಸ್ಸಿನ ಯುವಕನನ್ನು ಪೊಲೀಸರು ಹುಡುಕಿ ಆತನ ಮನೆಯವರಿಗೆ ಒಪ್ಪಿಸಿದ್ದಾರೆ.
ಸತ್ಬುರ್​​ ಅಲಿಯಾಸ್​​ ಟಾರ್ಜನ್​​ ಎಂಬ ಯುವಕ 2013 ಸೆಪ್ಟೆಂಬರ್​ ತಿಂಗಳಿನಲ್ಲಿ ಹರಿಯಾಣದ ಕರ್ನಾಲ್​​ ಜಿಲ್ಲೆಯಿಂದ ಕಾಣೆಯಾಗಿದ್ದನು. ಆದರೆ ಆತನನ್ನು ಹರಿಯಾಣ ಪೊಲೀಸ್​ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಪತ್ತೆಹಚ್ಚಿದೆ.
ಇದನ್ನೂ ಓದಿ: ಮಾವನ ಮನೆಯ ಪಿತೃಪಕ್ಷ ಊಟಕ್ಕೆ ಹೋಗಲು ಪೊಲೀಸ್​ ಜೀಪ್​ ಕರೆಸಿಕೊಂಡ ಭೂಪ!
ಸತ್ಬುರ್ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಯುವಕನನ್ನು ಪತ್ತೆ ಹಚ್ಚಿದ್ದಾರೆ. ಯುವಕನ ಬಲ ಗೈಯಲ್ಲಿ ನಾಯಿ ಕಚ್ಚಿದ ಗಾಯದ ಗುರುತು ಮತ್ತು ಎಡಗೈಯಲ್ಲಿ ಮಂಗ ಕಚ್ಚಿದ ಗುರುತು ಕಂಡು ತಾಯಿ ಇದು ನನ್ನ ಮಗ ಎಂದು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ಮನೆ ಒಡತಿಯನ್ನೇ ಕೊಂ*ದ ಬಾಡಿಗೆದಾರ.. ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ನರಹಂತಕ
ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಸಬ್​ ಇನ್​​ಸ್ಟೆಕ್ಟರ್​​ ರಾಜೇಶ್​​ ಕುಮಾರ್​ ಅವರು ಈ ತನಿಖೆಯ ನೇತೃತ್ವ ವಹಿಸಿ ಹುಡುಕಾಡಿದ್ದಾರೆ. ದೆಹಲಿ, ಜೈಪುರ, ಕೋಲ್ಕತ್ತಾ, ಮುಂಬೈ, ಕಾನ್ಸುರ, ಶಿಮ್ಲಾ, ಲಕ್ನೋ ಭಾಗದಲ್ಲಿ ಯುವಕನ ಪೋಸ್ಟರ್​ ಹಂಚಲಾಗಿತ್ತು. ಕೊನೆಗೆ ಯುವಕನನ್ನು ಹರಿಯಾಣದಲ್ಲಿ ಪತ್ತೆಹಚ್ಚಿದ್ದಾರೆ.
ಸದ್ಯ ಸತ್ಬುರ್ ತಾಯಿ ಮತ್ತು ಸಹೋದರನ ಜೊತೆಗೆ ಕುಟುಂಬ ಸೇರಿದ್ದಾರೆ. ಅತ್ತ ಹೆತ್ತಬ್ಬೆ ಮಗನನ್ನು ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದ ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us