/newsfirstlive-kannada/media/post_attachments/wp-content/uploads/2025/03/DC_Mitchell_Starc.jpg)
ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್​ನಿಂದ ಬೃಹತ್​ ಮೊತ್ತದ ರನ್​ಗಳ ಕಲೆ ಹಾಕುವ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್ ತಂಡ 18.4 ಓವರ್​ಗಳಲ್ಲಿ ಕೇವಲ 163 ರನ್​ಗೆ ಆಲೌಟ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್ ಮಿಚೆಲ್ ಸ್ಟಾರ್ಕ್​ ಹಾಗೂ ಕುಲ್​ದೀಪ್ ಯಾದವ್ ಬೌಲಿಂಗ್ ಮುಂದೆ ಹೈದ್ರಾಬಾದ್ ಬ್ಯಾಟಿಂಗ್ ಏನೂ ನಡೆಯಲಿಲ್ಲ.
ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದ್ರಾಬಾದ್ ತಂಡ ನೆಲ ಕಚ್ಚಿದೆ. ಮಿಚೆಲ್ ಸ್ಟಾರ್ಕ್ ಅವರ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನದ ಮುಂದೆ ಇಶನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಟ್ರಾವಿಸ್ ಹೆಡ್ ಬೇಗನೆ ಔಟ್ ಆದರು. ಇದು ಹೈದ್ರಾಬಾದ್​ಗೆ ದೊಡ್ಡ ಪೆಟ್ಟು ಬಿದ್ದಂತೆ ಆಯಿತು.
/newsfirstlive-kannada/media/post_attachments/wp-content/uploads/2025/03/Kuldeep_Yadav-1.jpg)
ಪ್ರಮುಖ ವಿಕೆಟ್ ಹೋದರು ಯುವ ಬ್ಯಾಟರ್ ಅನಿಕೇತ್ ವರ್ಮಾ ಬಲಿಷ್ಠ ಬ್ಯಾಟಿಂಗ್ ಮಾಡಿದರು. ಕೇವಲ 34 ಎಸೆತಗಳನ್ನು ಎದುರಿಸಿದ ಅನಿಕೇತ್​, 4 ಫೋರ್ ಹಾಗೂ 3 ಬಿಗ್ ಸಿಕ್ಸರ್ ಸಮೇತ ಅರ್ಧಶತಕ ಪೂರೈಸಿದರು. ಇದು ಅವರ ಮೊದಲ ಹಾಫ್​ಸೆಂಚುರಿ ಆಗಿದೆ. ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅವರು, 41 ಎಸೆತಗಳಲ್ಲಿ 5 ಫೋರ್, 6 ಸಿಕ್ಸರ್​ನಿಂದ ಒಟ್ಟು 74 ರನ್​ಗಳಿಸಿ ಆಡುವಾಗ ಕುಲ್​ದೀಪ್ ಯಾದವ್ ಬ್ರೇಕ್ ಹಾಕಿದರು.
ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸಿನ್ 2 ಫೋರ್, 2 ಸಿಕ್ಸರ್​ನಿಂದ 19 ಬಾಲ್​ನಲ್ಲಿ 32 ರನ್​ಗಳನ್ನು ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದರು. ಹೈದ್ರಾಬಾದ್ ಬ್ಯಾಟಿಂಗ್​ ಬಲದ ಮೇಲೆ ಆಕ್ರಮಣ ಮಾಡಿದ ಮಿಚೆಲ್ ಸ್ಟಾರ್ಕ್ 5 ವಿಕೆಟ್​ ಹಾಗೂ ಕುಲ್​ದೀಪ್ ಯಾದವ್ 3 ವಿಕೆಟ್​ ಪಡೆದು ಸಂಭ್ರಮಿಸಿದರು. ಇದರಿಂದ ಹೈದ್ರಾಬಾದ್ 18.4 ಓವರ್​ಗಳಲ್ಲಿ ಕೇವಲ 163 ರನ್​ಗೆ ಆಲೌಟ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us