/newsfirstlive-kannada/media/post_attachments/wp-content/uploads/2024/12/STARC-1.jpg)
ಅಡಿಲೇಡ್ ಟೆಸ್ಟ್ನಲ್ಲಿ ಟೀಂ ಇಂಡಿಯಾಗೆ ಹಿನ್ನಡೆ ಆಗಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ್ದ ರೋಹಿತ್ ಪಡೆ ಕೇವಲ 180 ರನ್ಗಳಿಸಿ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಟೀಂ ಇಂಡಿಯಾಗೆ ಆಸ್ಟ್ರೇಲಿಯಾದ ವೇಗಿ ಮಿಚಲ್ ಸ್ಟಾರ್ಕ್ ಕಂಟಕವಾದರು. 14.1 ಓವರ್ ಎಸೆದ ಸ್ಟಾರ್ಕ್, ಬರೋಬ್ಬರಿ 6 ವಿಕೆಟ್ ಕಿತ್ತು ಟೀಂ ಇಂಡಿಯಾಗೆ ಆಘಾತ ನೀಡಿದರು. ಪರಿಣಾಮ ರೋಹಿತ್ ಪಡೆ, ಊಟದ ವಿರಾಮದ ವೇಳೆಗೆ ಎಲ್ಲಾ ವಿಕೆಟ್ ಕಳೆದುಕೊಂಡು 180 ರನ್ಗಳಿಸಿದೆ.
ಟೀಂ ಇಂಡಿಯಾ ಪರ ಜೈಸ್ವಾಲ್, ಹರ್ಷಿತ್ ರಾಣಾ, ಜಸ್ಪ್ರೀತ್ ಬೂಮ್ರಾ ಸೊನ್ನೆ ಸುತ್ತಿದ್ರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಿರಾಜ್ ಒಂದಕಿ ದಾಟಲಿಲ್ಲ. ದಿಗ್ಗಜ ಕೊಹ್ಲಿ 7 ರನ್ಗಳಿಸಿದ್ರೆ, ರೋಹಿತ್ 3, ಸಿರಾಜ್ (ನಾಟೌಟ್) 4 ರನ್ಗಳಿಸಿದರು. ಕೆಎಲ್ ರಾಹುಲ್ 37, ಗಿಲ್ 31, ಪಂತ್ 21, ನಿತೀಶ್ ರೆಡ್ಡಿ 41, ಅಶ್ವಿನ್ 22 ರನ್ಗಳಿಸಿದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಹೊರತುಪಡಿಸಿ, ಕ್ಯಾಪ್ಟನ್ ಕಮ್ಮಿನ್ಸ್, ಸ್ಕಾಟ್ ಬೊಲಾಂಡ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ