ಮೊಟ್ಟ ಮೊದಲ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟ
ಹೆಸರು ಘೋಷಣೆ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಸಚಿವ
ಇತ್ತೀಚೆಗಷ್ಟೇ ಪದ್ಮ ಭೂಷಣ ಪ್ರಶಸ್ತಿ ಪಡೆದ ಬೆನ್ನಲ್ಲೇ ಗೌರವ
ನವದೆಹಲಿ: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರ ಪ್ರಯಾಣ ಹಾಗೂ ಸಿನಿ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹೇಳಿದ್ದಾರೆ.
ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪಡೆದ ಕೆಲವೇ ತಿಂಗಳಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮಿಥುನ್ ಚಕ್ರವರ್ತಿ ಅವರು ಕೇವಲ ನಟರಷ್ಟೇ ಅಲ್ಲ, ಟಿವಿ ನಿರೂಪಕ, ನಿರ್ಮಾಪಕ, ರಾಜಕಾರಣಿ ಆಗಿದ್ದಾರೆ. ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಹೆಸರು ಪಡೆದಿದ್ದಾರೆ. ಇವರು 1976ರಲ್ಲಿ ಮೊದಲ ಬಾರಿಗೆ ಹಿಂದಿ ಸಿನಿಮಾ ಮೃಗಯಾದಲ್ಲಿ ಅಭಿನಯ ಮಾಡಿದ್ದರು. ಅಂದಿನಿಂದ ಈವರೆಗೂ ಚಿತ್ರರಂಗದಲ್ಲಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ: Jr NTR ಸಿನಿಮಾದಲ್ಲಿ ಕನ್ನಡಿಗನ ಕಮಾಲ್.. KGFನಲ್ಲೂ ಖದರ್, ‘ದೇವರ’ದಲ್ಲೂ ಸೂಪರ್..!
ಈ ಸಂಬಂಧ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಮಿಥುನ್ ಚಕ್ರವರ್ತಿ ಅವರ ಗಮನಾರ್ಹ ಸಿನಿ ಜರ್ನಿ ಈಗಿನ ಮತ್ತು ಬರುವ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆ ಗಮನಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತೀರ್ಪುಗಾರರ ಆಯ್ಕೆ ಸಮಿತಿಯು ಅವರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಈ ಗೌರವವನ್ನು ಅಕ್ಟೋಬರ್ 08 ರಂದು ನಡೆಯುವ ನ್ಯಾಷನಲ್ ಫಿಲಂ ಅವಾರ್ಡ್ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಆರೋಪಕ್ಕೆ ಎಡಿಜಿಪಿ ಕೌಂಟರ್; ಗಂಗೇನಹಳ್ಳಿ ಕೇಸ್ಗೆ ಹೊಸ ತಿರುವು..!
ಡೆಬ್ಯೂ ಮಾಡಿದ್ದ ಮೃಗಯಾ ಸಿನಿಮಾದಲ್ಲಿ ಅಭಿನಯಕ್ಕಾಗಿ ಬೆಸ್ಟ್ ಆ್ಯಕ್ಟ್ ಎಂದು ಮಿಥುನ್ ಚಕ್ರವರ್ತಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿತ್ತು. ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನ ನೀಡಿ ಅವರನ್ನ ಗೌರವಿಸಲಾಗಿದೆ. ಆದರೆ ಇದೀಗ ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿರುವುದು ಅವರ ಗೌರವವನ್ನ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ