/newsfirstlive-kannada/media/post_attachments/wp-content/uploads/2024/08/sampada.jpg)
ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಮುಕ್ತಾಯಗೊಂಡ ಧಾರಾವಾಹಿಗಳು ಇನ್ನೂ ವೀಕ್ಷಕರ ಮನಸಲ್ಲಿ ಹಾಗೇ ಉಳಿದಿವೆ. ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಕನ್ನಡ ಕಿರುತೆರೆಯ ಮಿಥುನ ರಾಶಿ ಸೀರಿಯಲ್ ಕೂಡ ಒಂದು. ಮಿಥುನ ರಾಶಿ ಧಾರಾವಾಹಿಯಲ್ಲಿ ಅಕ್ಕ-ತಂಗಿ ಬಾಡಿಂಗ್ ಕೂಡ ಇತ್ತು. ರಾಶಿ ಹಾಗೂ ಸುರಕ್ಷಾ ಜೋಡಿ ಈ ಧಾರಾವಾಹಿಯಲ್ಲಿ ಫುಲ್ ಮೋಡಿ ಮಾಡಿದ್ರು.
/newsfirstlive-kannada/media/post_attachments/wp-content/uploads/2024/08/sampada1.jpg)
ಇದೇ ಸೀರಿಯಲ್​​ನಲ್ಲಿ ಸುರಕ್ಷಾ ಪಾತ್ರದಲ್ಲಿ ನಟಿ ಸಂಪದಾ ಹುಲಿವನ ಮಿಂಚುತ್ತಿದ್ದ. ಸದ್ಯ ಸೀರಿಯಲ್​ ಮುಕ್ತಾಯಗೊಂಡ ಬಳಿಕ ನಟಿ ಸಂಪದಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿದ್ದರು. ಅಷ್ಟೇ ಅಲ್ಲದೇ ತಮ್ಮ ನಟನೆಯ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಇದೀಗ ನಟಿ ಸಂಪದಾ ಅವರು ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದ ದಿನವೇ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/sampada2.jpg)
ಹೌದು, ನಟಿ ಸಂಪದಾ ಹುಲಿವನ ಅವರು ತೆಲುಗು ಸಿನಿಮಾವೊಂದಕ್ಕೆ ನಾಯಕಿ ನಟಿಯಾಗಿ ಆಯ್ಕೆಯಾದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾದಲ್ಲಿ ಸಂಪದಾ ಹುಲಿವನ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟ. ಇನ್ನು ‘ಶ್ರೀ ಶ್ರೀ ಶ್ರೀ ರಾಜ ವಾರು’ ಸಿನಿಮಾದಲ್ಲಿಯೂ ಸಂಪದಾ ನಟಿಸಿದ್ದರು. ಜೊತೆಗೆ ರಾಜ್ ತರುಣ್, ಸಂದೀಪ್ ಮಾಧವ್ ಅವರ ‘ಮಾಸ್ ಮಹಾರಾಜು’ ಸಿನಿಮಾದಲ್ಲಿ ಸಂಪದಾ ನಟಿಸುತ್ತಿದ್ದಾರೆ.
View this post on Instagram
ಇದೀಗ ಮಾಸ್ ಕಾ ದಾಸ್ ಎಂದೇ ಖ್ಯಾತಿ ಪಡೆದಿರುವ ನಟ ವಿಶ್ವಕ್ ಸೇನ್​ ಅವರ 13ನೇ ಸಿನಿಮಾ ಘೋಷಣೆ ಆಗಿದೆ. ವಿಶ್ವಕ್ ಸೇನ್ ಅವರ 13ನೇ ಸಿನಿಮಾದಲ್ಲೂ ನಟಿ ಸಂಪದಾ ಹುಲಿವನ ನಾಯಕಿ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ಈ ನೂತನ ಚಿತ್ರಕ್ಕೆ 'VS13' ಎಂದು ಹೆಸರಿಡಲಾಗಿದೆ. ಸ್ವಾತಂತ್ರೋತ್ಸವದ ದಿನವೇ ಈ ಸಿನಿಮಾದ ಮುಹೂರ್ತ ನಡೆದಿದೆ. ಶ್ರೀಧರ್ ಗಂಟ ಎನ್ನುವ ಹೊಸ ನಿರ್ದೇಶಕರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us