/newsfirstlive-kannada/media/post_attachments/wp-content/uploads/2025/02/Vaishnavi2.jpg)
ಮಿಥುನ ರಾಶಿ ಧಾರಾವಾಹಿ ಯಾರಿಗೆಲ್ಲಾ ನೆನಪಿದೆ? ಆಟೋ ಓಡಿಸಿ ಸೌಂಡ್ ಮಾಡಿದ್ದ ರಾಶಿ ಪಾತ್ರ ಪಕ್ಕಾ ಕಣ್ಮುಂದೆ ಬಂದಿರುತ್ತೆ. ಧಾರಾವಾಹಿ ಮುಕ್ತಾಯವಾಗಿ ಎರಡು ವರ್ಷ ಕಳಿತು. ಆದರೆ, ರಾಶಿ ಪಾತ್ರ ಮಾಡಿದ್ದ ನಟಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ:ನಿರ್ದೇಶಕ S.S ರಾಜಮೌಳಿಗೆ ಬಿಗ್ ಶಾಕ್.. ಡೆತ್‌ನೋಟ್ ಬರೆದಿಟ್ಟ 34 ವರ್ಷದ ಸ್ನೇಹಿತ!
ಹೌದು, ಮಿಥುನ ರಾಶಿ ಮೂಲಕ ಜನಪ್ರಿಯತೆ ನಟಿ ವೈಷ್ಣವಿ ಕನ್ನಡದಲ್ಲಿ ಮಾಡಿರೋದು ಒಂದೇ ಧಾರಾವಾಹಿ ಮಿಥುನ ರಾಶಿ. ಇದು ಇವ್ರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ನಂತರ ಮಿನಿ ಬಿಗ್ ಬಾಸ್ನಲ್ಲೂ ಕಾಣಿಸಿಕೊಂಡಿದ್ರು. ಅಲ್ಲಿಂದ ತೆಲುಗು, ತಮಿಳು ಹಾಗೂ ಮಲಯಾಳಂ ಕಡೆ ಮುಖ ಮಾಡಿದ್ರು ನಟಿ.
ಪರಭಾಷೆಯ ಆಫರ್ಗಳು ವೈಷ್ಣವಿ ಅವರನ್ನು ಅರಸಿ ಬಂದವು. ಸದ್ಯ ಹೈದ್ರಾಬಾದ್ನಲ್ಲೇ ಸೆಟಲ್ ಆಗಿರೋ ನಟಿ, ಶೂಟಿಂಗ್ ಗ್ಯಾಪ್ನಲ್ಲಿ ಬೆಂಗಳೂರಿಗೆ ಬರುತ್ತಾ ಇರುತ್ತಾರೆ. ಯಾವುದೇ ಕನ್ನಡದ ಪ್ರಾಜೆಕ್ಟ್ಗಳನ್ನ ಸದ್ಯ ಮಾಡ್ತಿಲ್ಲ. ಇನ್ನೂ ಇತ್ತೀಚೆಗೆ ಇವ್ರು ಮಾಡಿಸಿದ ಫೋಟೋಶೂಟ್ ಸದ್ದು ಮಾಡ್ತಿದೆ.
View this post on Instagram
ಸಂಪ್ರದಾಯಕ ಉಡುಗೆಯಲ್ಲಿ ಸಖತ್ ಬೋಲ್ಡ್ ಆಗಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ ನಟಿ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ.
ಮಿಥುನ ರಾಶಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದ ಕೋಳಿ ರಮ್ಯಾ, ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ನಲ್ಲಿ ಭಾಗಿಯಾಗಿದ್ದಾರೆ. ಇವ್ರು ಕೂಡ ಅಕ್ಕಪಕ್ಕದ ಭಾಷೆಯಲ್ಲಿ ಬ್ಯುಸಿಯಾಗಿದ್ದ ಕಲಾವಿದೆ. ಸದ್ಯ ಶೋ ಮೂಲಕ ವೀಕ್ಷಕರ ಮುಂದೆ ಬಂದಿದ್ದಾರೆ. ಶಿವರಾತ್ರಿ ಪ್ರಯುಕ್ತ ಕ್ಲಾಸಿಕಲ್ ಮ್ಯೂಸಿಕ್ಗೆ ಹೆಜ್ಜೆ ಹಾಕಿದ್ದಾರೆ.
View this post on Instagram
ನಮ್ಮ ನೆಲದ ಕಲಾವಿದರಿಗೆ ಅಕ್ಕಪಕ್ಕದ ರಾಜ್ಯದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇಲ್ಲಿ ಕಾಣಿಸ್ತಿಲ್ಲ ಅಂದ್ರೇ ಪಕ್ಕಾ ಪರಭಾಷೆಯಲ್ಲಿದ್ದಾರೆ ಅಂತಲೇ ಲೆಕ್ಕ. ಅದು ಏನೇ ಇರಲಿ ನಮ್ಮ ಭಾಷೆ ಕಲಾವಿದರು ಹೆಸರು ಜೊತೆಗೆ ಕೀರ್ತಿ ಸಂಪಾದನೆ ಮಾಡ್ತಿರೋದು ಹೆಮ್ಮೆ ಪಡಬೇಕಾಗಿರೋ ವಿಚಾರ ಅಲ್ವಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ