ಪ್ಲೀಸ್ ನನ್ನ ಬಂಧಿಸಿ.. ED ಕಣ್ತಪ್ಪಿಸಿ SITಗೆ ಓಡೋಡಿ ಬಂದ ಶಾಸಕ ಬಸನಗೌಡ ದದ್ದಲ್; ಅಸಲಿ ಕಾರಣವೇನು?

author-image
admin
Updated On
ಪ್ಲೀಸ್ ನನ್ನ ಬಂಧಿಸಿ.. ED ಕಣ್ತಪ್ಪಿಸಿ SITಗೆ ಓಡೋಡಿ ಬಂದ ಶಾಸಕ ಬಸನಗೌಡ ದದ್ದಲ್; ಅಸಲಿ ಕಾರಣವೇನು?
Advertisment
  • ನಾಗೇಂದ್ರ ಇ.ಡಿ ವಶಕ್ಕೆ ಹೋಗುತ್ತಿದ್ದಂತೆ ಶಾಸಕ ದದ್ದಲ್​ಗೂ ಆತಂಕ
  • ED ಕಣ್ತಪ್ಪಿಸಿ ಎಸ್ಐಟಿ ಮುಂದೆ ಶಾಸಕ ಬಸನಗೌಡ ದದ್ದಲ್ ಹಾಜರ್
  • ದಯವಿಟ್ಟು ನೀವೇ ಬಂಧನ ಮಾಡಿ ಎಂದು ದದ್ದಲ್ ಮನವಿ ಯಾಕೆ?

ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರನ್ನ ಇಡಿ ವಶಕ್ಕೆ ಪಡೆಯುತ್ತಿದ್ದಂತೆಯೇ ಶಾಸಕ ಬಸನಗೌಡ ದದ್ದಲ್​ ಅವರು ಇ.ಡಿ ಕಣ್ತಪ್ಪಿಸಿ ಎಸ್​ಐಟಿ ಮುಂದೆ ಹಾಜರಾಗಿದ್ದಾರೆ. ಇಡಿ ಬಂಧಿಸುವ ಸಾಧ್ಯತೆ ಹಿನ್ನೆಲೆ ನೀವೇ ಅರೆಸ್ಟ್‌ ಮಾಡಿ ಎಂದು ಎಸ್‌ಐಟಿ ಮುಂದೆ ದದ್ದಲ್​ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ. ಕಾ‌ಂಗ್ರೆಸ್​ ಹಿರಿಯ ನಾಯಕರ ಮೂಲಕ ಕರೆ ಮಾಡಿಸಿ ಒತ್ತಡ ಹಾಕಿದ್ದು, ನೀವು ಬಂಧಿಸದಿದ್ದರೆ ನಾನು ಎಸ್ಐಟಿ ಬಿಟ್ಟು ಹೋಗಲ್ಲ ಅಂತ ದದ್ದಲ್​ ಪಟ್ಟು ಹಿಡಿದ್ದಾರಂತೆ.

publive-image

ಬಿ.ನಾಗೇಂದ್ರ ಇ.ಡಿ ವಶಕ್ಕೆ.. ಶಾಸಕ ದದ್ದಲ್​ಗೂ ಆತಂಕ ಶುರು
‘ಇ.ಡಿ’ತದಿಂದ ತಪ್ಪಿಸಿಕೊಳ್ಳಲು ಎಸ್​ಐಟಿ ಮುಂದೆ ಶರಣಾದ್ರಾ?
ವಾಲ್ಮೀಕಿ ಅಭಿವೃದ್ಧ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ತನಿಖೆಗೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದ್ದು, ಭರ್ಜರಿ ಬೇಟೆಯಾಡಿದೆ. ಕಳೆದ ಎರಡು ದಿನದಿಂದ ಮಾಜಿ ಸಚಿವ ಬಿ.ನಾಗೇಂದ್ರ ಮನೆಯಲ್ಲಿ ಶೋಧ ನಡೆಸಿದ ಇ.ಡಿ ಅಧಿಕಾರಿಗಳು ಅಂತಿಮವಾಗಿ, ಬಿ.ನಾಗೇಂದ್ರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ಗೂ ಟೆನ್ಷನ್​ ಶುರುವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಇಡಿತದಿಂದ ತಪ್ಪಿಸಿಕೊಳ್ಳಲು ದದ್ದಲ್​ ಎಸ್​ಐಟಿ ಬಳಿ ಹೋಗಿದ್ದಾರೆ.

publive-image

ED ಕಣ್ತಪ್ಪಿಸಿ ಎಸ್ಐಟಿ ಮುಂದೆ ಬಸನಗೌಡ ದದ್ದಲ್ ಹಾಜರ್
ವಾಲ್ಮೀಕಿ ಹಗರಣ ಸಂಬಂಧ ಬಸನಗೌಡ ದದ್ದಲ್​ ನಿವಾಸದ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸುಮಾರು 37 ಗಂಟೆಗಳ ಕಾಲ ಶೋಧ ನಡೆಸಿ, ಮನೆಯಲ್ಲಿ ಸಿಕ್ಕ ದಾಖಲೆ ಪತ್ರಗಳನ್ನು ಪರಿಶೀಲಿಸಿ, ತಮ್ಮ ಜೊತೆ ತೆಗೆದುಕೊಂಡು ಹೋಗಿದ್ರು. ಮತ್ತೊಂದೆಡೆ ಮಾಜಿ ಸಚಿವ ನಾಗೇಂದ್ರರನ್ನು ಇ.ಡಿ ವಶಕ್ಕೆ ಪಡೆದಿದ್ದು, ದದ್ದಲ್​ರನ್ನು ಕಂಗಾಲಾಗಿಸಿತ್ತು. ಎಲ್ಲಿ ನನ್ನನ್ನೂ ವಶಕ್ಕೆ ಪಡೆದು ಬಿಡ್ತಾರೋ ಎಂದು ಬೆಳ್​ ಬೆಳಗ್ಗೆಯೇ ಮನೆಗೆ ಬೀಗ ಹಾಕಿ ಪತ್ನಿ ಸಮೇತ ಶಾಸಕ ದದ್ದಲ್​ ಮನೆಯಿಂದ ಹೊರ ಹೋಗಿದ್ರು. ಇನ್ನು ಇ.ಡಿ ಅಧಿಕಾರಿಗಳು ದದ್ದಲ್​ಗಾಗಿ ಬೆಳಗ್ಗೆಯೇ ಶಾಸಕರ ಕಚೇರಿ, ದದ್ದಲ್​ ನಿವಾಸ ಸೇರಿ ಹಲವಡೆ ಹುಡುಕಾಡಿದ್ದರು. ಆದ್ರೆ, ಶಾಸಕ ದದ್ದಲ್​ ಇ.ಡಿ ಕಣ್ತಪ್ಪಿಸಿ ಎಸ್​ಐಟಿ ಮುಂದೆ ಪ್ರತ್ಯಕ್ಷರಾಗಿದ್ದಾರೆ.

publive-image

ಪ್ಲೀಸ್ ನೀವೇ ನನ್ನ ಬಂಧಿಸಿ.. ಐಒಗೆ ಶಾಸಕ ದದ್ದಲ್ ಬೇಡಿಕೆ
ಹೊರಗೆ ಇದ್ರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಲ್ಲಿ ನನ್ನನ್ನೂ ವಶಕ್ಕೆ ಪಡೀತಾರೋ ಅನ್ನೋ ಭಯದಿಂದಲೋ ಏನೋ.. ದದ್ದಲ್​ ಎಸ್​ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಪ್ಲೀಸ್ ನನ್ನ ಬಂಧಿಸಿ ಅಂತ ಎಸ್​ಐಟಿ ಮುಂದೆ ಶಾಸಕ ದದ್ದಲ್ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.

‘ಪ್ಲೀಸ್ ನನ್ನ ಬಂಧಿಸಿ’
ತನಿಖಾ ಅಧಿಕಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಬೇಡಿಕೆ
ದಯವಿಟ್ಟು ನೀವೇ ಬಂಧನ ಮಾಡಿ ಎಂದು ದದ್ದಲ್ ಮನವಿ
ನೀವು ಬಂಧನ ಮಾಡಿದ್ರೆ ಮುಂದೆ ಬೇಲ್ ಪಡೆಯಬಹುದು
ಇ.ಡಿ ‌ಅಧಿಕಾರಿಗಳು ಬಂಧಿಸಿದ್ರೆ ಬೇಲ್ ಪಡೆಯಲು ಕಷ್ಟ
ತನಿಖಾಧಿಕಾರಿ ಡಿವೈಎಸ್ಪಿ ಬಿ.ಎಸ್.ಶ್ರೀನಿವಾಸ್ ಬಳಿ ಮನವಿ
ಆದರೆ ನಮಗೆ ಬಂಧಿಸಲು ಅಗತ್ಯವಿಲ್ಲ ಎಂದಿರುವ ಐಒ
ಆದರೆ ನಾನು SIT ಬಿಟ್ಟು ಹೋಗಲ್ಲ ಅಂತ ದದ್ದಲ್ ಪಟ್ಟು

ಶಾಸಕ ದದ್ದಲ್ ವಶಕ್ಕೆ ಪಡೆಯಲು ಇ.ಡಿ ಟೀಂ ಸಜ್ಜು
ಇ.ಡಿ ಬಂಧನದಿಂದ ತಪ್ಪಿಸಿಕೊಳ್ಳಲು, ವಿಚಾರಣೆ ನೆಪದಲ್ಲಿ ಶಾಸಕ ಬಸನಗೌಡ ದದ್ದಲ್​ ಎಸ್​ಐಟಿ ಕಚೇರಿ ಸೇರಿದ್ದಾರೆ. ಹೊರಗೆ ಹೋದ್ರೆ ಎಲ್ಲಿ ನನ್ನನ್ನು ಇ.ಡಿ ವಶಕ್ಕೆ ಪಡೀತಾರೋ ಅನ್ನೋ ಟೆನ್ಷನ್​, ಹಿರಿಯ ಶಾಸಕರ ಮೂಲಕ ಎಸ್​ಐಟಿ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ.. ಇತ್ತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದದ್ದಲ್​ ಚಲನವಲನದ ಮೇಲೆ ಕಣ್ಣಿಟ್ಟಿದ್ದು, ದದ್ದಲ್​ ಹೊರಗೆ ಬರೋದನ್ನೇ ಕಾದು ಕುಳಿತಿದ್ದಾರೆ. ಹೀಗಾಗಿ ಯಾವ ಕ್ಷಣದಲ್ಲೇ ಹೊರಗೆ ಬಂದ್ರು ವಶಕ್ಕೆ ಪಡೆಯಲು ಇ.ಡಿ. ಅಧಿಕಾರಿಗಳ ತಂಡ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment