ಬಸ್​ ಫ್ರೀ ಅಂತಾ ವಾರಗಟ್ಟಲೆ ಓಡಾಡಬೇಡಿ, ನಿಮ್ಮ ಗಂಡಂದಿರು ತಪ್ಪು ದಾರಿ ಹಿಡಿತಾರೆ; ಮಹಿಳೆಯರಿಗೆ ಕಾಂಗ್ರೆಸ್ ಶಾಸಕರ ಕಿವಿಮಾತು

author-image
Harshith AS
Updated On
ಬಸ್​ ಫ್ರೀ ಅಂತಾ ವಾರಗಟ್ಟಲೆ ಓಡಾಡಬೇಡಿ, ನಿಮ್ಮ ಗಂಡಂದಿರು ತಪ್ಪು ದಾರಿ ಹಿಡಿತಾರೆ; ಮಹಿಳೆಯರಿಗೆ ಕಾಂಗ್ರೆಸ್ ಶಾಸಕರ ಕಿವಿಮಾತು
Advertisment
  • ಶಾಸಕರಿಂದ ಮಹಿಳೆಯರಿಗೆ ಕಿವಿ ಮಾತು
  • ಉಚಿತ ಅಂತಾ ಸುಮ್ನೆ ಓಡಾಡಬೇಡಿ
  • ಗಂಡಂದಿರ ಬಗ್ಗೆಯೂ ಕಾಳಜಿ ಇರಲಿ

ದಾವಣಗೆರೆ: ಬಸ್ ಫ್ರೀ ಇದೆ ಎಂದು ಬೇರೆ ಕಡೆ ವಾರಗಟ್ಟಲೆ ತೆರಳ ಬೇಡಿ. ಆ ತರಾ ಮಾಡಿದ್ರೆ ನಿಮ್ಮ ಗಂಡಂದಿರು ತಪ್ಪು ದಾರಿ ಹಿಡಿಯುತ್ತಾರೆ ಎಂದು ಮಾಯಕೊಂಡ ಕಾಂಗ್ರೆಸ್ ಶಾಸಕ ಬಸವಂತಪ್ಪ ಕಿವಿಮಾತು ಹೇಲಿದ್ದಾರೆ.

ಉಚಿತ ಬಸ್‌ಗೆ ಚಾಲನೆ ನೀಡಿ ಮಹಿಳೆಯರಿಗೆ ಕಿವಿಮಾತು ಹೇಳಿದ ಮಾಯಕೊಂಡ ಶಾಸಕ ಬಸವಂತಪ್ಪ ಅವರು, ಉಚಿತ ಬಸ್​ ಎಂದು ತೆರಳಿದರೆ ನಿಮ್ಮ ಗಂಡಂದಿರಿಗೆ ಅಡುಗೆ ಮಾಡಿ ಹಾಕುವವರು ಯಾರು?. ಏನೇ ಕೆಲಸ ಇದ್ದರು ಎರಡು ದಿನದಲ್ಲಿ ಮುಗಿಸಿಕೊಂಡು ಬನ್ನಿ. ಇಲ್ಲ ನಿಮ್ಮ ಗಂಡಂದಿರು ಬೇರೆ ದಾರಿ ಹಿಡಿಯುತ್ತಾರೆ ಎಂದು ಹೇಳಿದ್ದಾರೆ.

ಫ್ರೀ ಇದೆ ಅಂತ ಪದೇ ಪದೇ ಓಡಾಡೋಕೆ ಹೋಗಬೇಡಿ. ಆಸ್ಪತ್ರೆ, ದೇವಸ್ಥಾನ, ನಿಮ್ಮ ಸಂಬಂಧಿಕರ ಮನೆಗೆ ಅವಶ್ಯಕತೆ ಇದ್ದಾಗ ಹೋಗಿ ಬನ್ನಿ ಎಂದು ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಬಸವಂತಪ್ಪ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment