Advertisment

ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ

author-image
Bheemappa
Updated On
ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ
Advertisment
  • ಮರಳಿ ಗೂಡು ಸೇರಿಕೊಂಡ ಶಾಸಕ ಗಾಲಿ ಜನಾರ್ದನ ರೆಡ್ಡಿ
  • ಪಕ್ಷದ ಧ್ವಜ ಕೊಟ್ಟು, ಶಾಲು ಹಾಕಿ ಸ್ವಾಗತಿಸಿದ ವಿಜಯೇಂದ್ರ
  • ವಿಧಾನಸಭೆ ಎಲೆಕ್ಷನ್​ನಲ್ಲಿ ಗಂಗಾವತಿಯಿಂದ ಸ್ಪರ್ಧಿಸಿದ್ದ ರೆಡ್ಡಿ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರು ಮತ್ತೆ ಕಮಲವನ್ನು ಅಪ್ಪಿಕೊಂಡಿದ್ದಾರೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಜನಾರ್ದನ ರೆಡ್ಡಿಯವರು ಪಕ್ಷಕ್ಕೆ ಸೇರ್ಪಡೆಗೊಂಡರು.

Advertisment

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ಕೊಟ್ಟು, ಶಾಲು ಹಾಕುವ ಮೂಲಕ ಜನಾರ್ದನ ರೆಡ್ಡಿಯವರನ್ನ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಪಕ್ಷಕ್ಕೆ ಸ್ವಾಗತಿಸಿದರು. ಇದೇ ವೇಳೆ ರೆಡ್ಡಿಯವರ ಪತ್ನಿ ಅರುಣಾ ಲಕ್ಷ್ಮಿ ಕೂಡ ಸೇರ್ಪಡೆಗೊಂಡರು. ಈ ಮೂಲಕ ಜನಾರ್ದನ ರೆಡ್ಡಿಯವರು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದರು. ರೆಡ್ಡಿಯವರು ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಕೂಡ ಆಗಮಿಸಿದ್ದರು.

ಪಕ್ಷ ಸೇರಿಕೊಂಡ ಬಳಿಕ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ ಅವರು, ನಾನು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ವಿಸರ್ಜನೆ ಮಾಡಿದ್ದೇನೆ. ಬಿಜೆಪಿ ಜೊತೆಗೆ ಪಕ್ಷ ವಿಲೀನ ಮಾಡಿದ್ದೇನೆ. ಬಿ.ಎಸ್​ ಯಡಿಯೂರಪ್ಪರವರ ಆಶೀರ್ವಾದದಿಂದ, ವಿಜಯೇಂದ್ರರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಆಗಿದ್ದೇನೆ‌. ನನ್ನ ಆತ್ಮೀಯ ಗೆಳೆಯ ಶ್ರೀರಾಮುಲು ಅವರಿಗೆ ಧನ್ಯವಾದಗಳು ಎಂದು ರೆಡ್ಡಿ ಹೇಳಿದ್ದಾರೆ.

ಜನಾರ್ದನ ರೆಡ್ಡಿಯವರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸಿ ಜನಾರ್ದನ ರೆಡ್ಡಿ ಶಾಸಕರಾಗಿದ್ದಾರೆ. ನನಗೆ ಆತ್ಮೀಯರಾಗಿರುವ ಅವರು ಪಕ್ಷ ಸೇರಿಕೊಂಡಿರುವುದು ಬಹಳ ಸಂತೋಷವಾಗಿದೆ. ಅವರದ್ದೇ ಆದ ರೀತಿಯಲ್ಲಿ ಪಕ್ಷ ನಡೆಸಿಕೊಂಡು ಬಂದಿದ್ದರು. ಸದ್ಯ ಪಕ್ಷವನ್ನು ವಿಸರ್ಜನೆ ಮಾಡಿ, ಬಿಜೆಪಿ ಜೊತೆಗೆ ವಿಲೀನ ಮಾಡಿದ್ದಾರೆ. ಅವರ ಈ ನಡೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.

Advertisment

ರೆಡ್ಡಿಯವರು ಮೋದಿಯ ನಾಯಕತ್ವ ಒಪ್ಪಿ ಅವರನ್ನು ಪ್ರಧಾನಿ ಮಾಡಬೇಕೆಂದು ಪಕ್ಷಕ್ಕೆ ಬಂದಿದ್ದಾರೆ. ಅದಕ್ಕಾಗಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಸ್ಥಾನ ಗೆಲ್ಲಬೇಕಾಗಿದೆ. ಇದೊಂದೇ ವಿಚಾರ ಮುಂದಿಟ್ಟುಕೊಂಡು ಪಕ್ಷ ಸೇರ್ಪಡೆ ಆಗಿದ್ದಾರೆ. ಇಂದು ರಾಜ್ಯದಲ್ಲಿ ಬಿಜೆಪಿಯ ಪರವಾದ ವಾತಾವರಣ ಇದೆ. ಲೋಕಸಭಾ ಚುನಾವಣೆ ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದೆ. ಇದೇ ವೇಳೆ ಟಿ.ಜಾನ್ ಅವರ ಪುತ್ರ ಥಾಮಸ್ ಕೂಡ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದು ಹೇಳಿದರು.

ಬಿಜೆಪಿ ಸೇರ್ಪಡೆ ಹಿಂದೆ ಬೇರೆ ರಾಜಕೀಯ ಲೆಕ್ಕಚಾರ

ಜನಾರ್ದನ ರೆಡ್ಡಿಯವರು ಬಿಜೆಪಿ ಸೇರ್ಪಡೆಯ ಹಿಂದೆ ಬೇರೆ ರಾಜಕೀಯ ಲೆಕ್ಕಚಾರವೆ ಇದೆ. ರಾಜ್ಯದಲ್ಲಿ ಹಳೆ ಪಾರುಪತ್ಯದಿಂದ ಮತ್ತೊಮ್ಮೆ ಮಾಸ್ ಲೀಡರ್ ಆಗೋಕೆ ರೆಡ್ಡಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪಕ್ಷಕ್ಕೆ ಸೇರಿಕೊಂಡಿರುವ ರೆಡ್ಡಿಗೆ ಬಿಜೆಪಿ ದೊಡ್ಡ ಜವಾಬ್ದಾರಿ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇವರ ಮೂಲಕ ಕಾಂಗ್ರೆಸ್​​ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆರನ್ನ ಕಟ್ಟಿ ಹಾಕಲು ಪ್ಲಾನ್ ಮಾಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಕಲ್ಯಾಣ ಕರ್ನಾಟಕದ 5 ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ರೆಡ್ಡಿಯವರು ರಣತಂತ್ರ ಹೆಣೆಯಲಿದ್ದಾರೆ. ಇದೀಗ ಅಲ್ಲಿ ಬಿಜೆಪಿಗೆ ಶಕ್ತಿ ತುಂಬಲು ಅನಿವಾರ್ಯವಾಗಿದ್ದು ಈ ಮೂಲಕ ಬಳ್ಳಾರಿ, ವಿಜಯನಗರವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಅಲ್ಲದೇ ರೆಡ್ಡಿ ತನ್ನ ಪತ್ನಿಗೆ ರಾಜಕೀಯ ಭವಿಷ್ಯ ಕಟ್ಟಲು ಸದ್ಯ ಮರಳಿ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿಯಲ್ಲಿದ್ದರೆ ಮಾತ್ರ ತವರು ಜಿಲ್ಲೆ ಪ್ರವೇಶ ಹಾದಿ ಸುಗಮದ ಜೊತೆಗೆ ತನ್ನ ಸಹೋದರರಿಗೆ ಸ್ಥಾನಮಾನ ಕೊಡಿಸುವುದು ಕೂಡ ಸುಲಭವಾಗಲಿದೆ.

Advertisment

ರೆಡ್ಡಿಯಿಂದ ಬಿಜೆಪಿಗೆ ಏನೇನು ಪ್ಲಸ್​!

  • ರೆಡ್ಡಿ ಮೂಲಕ ಖರ್ಗೆ ರಾಜಕೀಯವಾಗಿ ಕಟ್ಟಿ ಹಾಕಲು ಪ್ಲಾನ್
  • ರೆಡ್ಡಿ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯಲು ಪ್ಲಾನ್​
  • ಕ.ಕರ್ನಾಟಕ 5 ಲೋಕಸಭಾ ಕ್ಷೇತ್ರಕ್ಕೆ ರೆಡ್ಡಿ ಬೂಸ್ಟರ್ ಡೋಸ್
  • ಮುಸ್ಲಿಂ ಸಮುದಾಯದ ಜೊತೆಗೆ ರೆಡ್ಡಿ ಉತ್ತಮವಾದ ಬಾಂಧವ್ಯ
  • ಕ.ಕರ್ನಾಟಕದ ರೆಡ್ಡಿ ಬೆಂಬಲಿಗರ ಪಡೆ ಎಲೆಕ್ಷನ್ ಬಳಕೆಗೆ ಪ್ಲಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment