/newsfirstlive-kannada/media/post_attachments/wp-content/uploads/2025/05/Kothur_Manjunath_MLA.jpg)
ಕೋಲಾರ: ಬೂಟಾಟಿಕೆಗೆ 4 ಫ್ಲೈಟ್ಗಳನ್ನು ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ. 26 ಜನ ಸಾವನ್ನಪ್ಪಿದರಲ್ಲ, ಆ ಮಹಿಳೆಯರಿಗೆ ಪರಿಹಾರ, ಗೌರವ ಕೊಡುವುದು ಇದೇನಾ ಎಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡುವುದನ್ನು ನಾವು ವಿರೋಧ ಮಾಡುತ್ತೇವೆ. ಭಾರತ, ಬಾಂಗ್ಲಾ, ಪಾಕಿಸ್ತಾನ, ಕರ್ನಾಟಕ, ಚೀನಾ ಯಾವುದೇ ದೇಶದ ಸಾಮಾನ್ಯ ಜನರ ಮೇಲೆ ಯುದ್ಧ ಮಾಡಿದರೆ ಅದಕ್ಕೆ ವಿರೋಧ ಮಾಡುತ್ತೇವೆ. ಅಷ್ಟೊಂದು ಈಜಿಯಾಗಿ ನಮ್ಮ ಗಡಿಯೊಳಗೆ ಬಂದು 3 ದಿನದಿಂದ ಅಲ್ಲೇ ಓಡಾಡಿಕೊಂಡು ಇದ್ದು ಕೃತ್ಯ ಎಸಗಿದ್ದಾರೆ ಎಂದರೆ ಯಾರಾದರೂ ತಡೆದುಕೊಳ್ಳಲು ಆಗುತ್ತಾ ಎಂದು ಕೇಳಿದ್ದಾರೆ.
ನಮ್ಮ ದೇಶದೊಳಗೆ ಬಂದು ಪತ್ನಿ, ಮಕ್ಕಳ ಮುಂದೆ ಪುರುಷರನ್ನು ಹೊಡೆದ್ರೆ ಹೇಗೆ?. ಕಣ್ಣು ಮುಂದೆ ಆ ಘಟನೆ ನೋಡಿದಾಗ ಆ ಹೆಣ್ಣು ಮಕ್ಕಳು ಗಟ್ಟಿಯಾಗಿ ಇರೋದರಿಂದ ಬಂದಿದ್ದಾರೆ. ಇಲ್ಲಾ ಅಂದರೆ ಹಾರ್ಟ್ಅಟ್ಯಾಕ್ ಆಗಿ ಸಾಯಬೇಕಿತ್ತು. ಇಂತದ್ದಕ್ಕೆಲ್ಲಾ ಪರಿಹಾರ ಇದು ಅಲ್ಲ. ಉಗ್ರರ ಬೇರಿಂದ ಕೊಂಬೆ ತನಕ ಹೊಡಿಯಬೇಕು. ಒಳ್ಳೆಯ ಅವಕಾಶ ಇತ್ತು, ಆದರೆ ಏನೂ ಮಾಡಿಲ್ಲ ಅನ್ನೋದು ಬೇಸರ ಎಂದು ಹೇಳಿದ್ದಾರೆ.
ಕನ್ಫರ್ಮ್ ಆಗಿ 100 ಜನರನ್ನು ಹೊಡೆದಿದ್ದಾರೆ ಎಂದು ಯಾರದರೂ ಹೇಳಿದ್ರಾ?. ಎಲ್ಲೂ ಹೇಳಿಲ್ಲ. ಪಹಲ್ಗಾಮ್ ಗಡಿಯಲ್ಲಿ ಬಂದ ಉಗ್ರರು ಎಲ್ಲಿ, ಎಲ್ಲಿ ಹೋಗಿದ್ದಾರೆ, ಅವರು ಯಾರು. ಅವರು ಹೇಗೆ ತಪ್ಪಿಸಿಕೊಂಡು ಹೋದರು. ಗಡಿಯಲ್ಲಿ ನಮ್ಮವರು ಯಾರು ಇಲ್ವಾ?. ಇವರೆ ಏನಾದರೂ ಪ್ಲಾನ್ ಮಾಡಿ ಅವರನ್ನು ಒಳಗೆ ಕರೆಸಿಕೊಂಡ್ರಾ?. ಯಾಕೆ, ಇದು ಹೀಗೆ ಆಯಿತು ಎನ್ನುವುದಕ್ಕೆ ಚರ್ಚೆ ಆಗಬೇಕಲ್ವಾ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಅಕ್ರಮ ಐಷಾರಾಮಿ ಕಾರುಗಳ ಆಮದು.. 100 ರೂ ಕೋಟಿ ಹಗರಣ, ಶೋ ರೂಂ ಮಾಲೀಕ ಅರೆಸ್ಟ್
ಭಯೋತ್ಪಾದಕರನ್ನು ಹೊಡೆದು ಹಾಕಲು ಒಳ್ಳೆಯ ಚಾನ್ಸ್ ಸಿಕ್ಕಿತ್ತು. ಅದನ್ನು ಹಾಳು ಮಾಡಿಕೊಂಡರು. ಇದು ಸಮಾಧಾನಕರ ಕ್ರಮ ಅಲ್ಲ. ಉಗ್ರರನ್ನು ಬೇರು ಸಮೇತ ಕಿತ್ತು ಹಾಕುವ ಅವಕಾಶ ಹುಸಿಯಾಗಿದೆ. ನಮ್ಮ ನಿರೀಕ್ಷೆ ಏನಾಗಿತ್ತು ಎಂದರೆ ಗುಂಡಿನ ದಾಳಿ ಮಾಡಿದ ಆ ಉಗ್ರರನ್ನು ಹಿಡಿದುಕೊಂಡು ಬಂದು ಆ ಮಹಿಳೆಯರ ಕೈಯಿಂದ ಶಿಕ್ಷೆ ಕೊಡಿಸುತ್ತಾರೆ ಅಂದುಕೊಂಡಿದ್ವಿ. ಆದರೆ ಅದು ಆಗಿಲ್ಲ ಎಂದು ಹೇಳಿದರು.
ಆರಂಭ ಮಾಡಿ ಮೇಲೆ ಎಲ್ಲಾ ಸುತ್ತಾಡಿ ಈಗ ಕದನ ವಿರಾಮ ಹೇಳಿದ್ದಾರೆ. ಭಾರತ ಕದನ ವಿರಾಮ ಹೇಳುವುದು ಇಸ್ರೇಲ್ ನೋಡಿ ಕಲಿಯಬೇಕು. ಇಸ್ರೇಲ್ ಯಾರ ಮಾತು ಕೇಳಿಲ್ಲ, ಎಲ್ಲ ಹೊಡೆದು ಸರ್ವನಾಶ ಮಾಡಿಬಿಟ್ಟರು. ರಷ್ಯಾದವರು ಉಕ್ರೇನ್ ಅವರಿಗೆ ಹೆಂಗೆ ಹೊಡೆದರು. ಉಕ್ರೇನ್ಗೆ ಈಗ ಏನು ಗತಿ ಬಂದಿದೆ. ಅಂದರೆ ನಮ್ಮ ಭಾರತದ ಮಹಿಳೆಯರು ಎಂದರೆ ಅವರಿಗೆ ಗೌರವ ಇಲ್ವಾ?. ಭಾರತದ ಪುರುಷರ ಪ್ರಾಣಗಳಿಗೆ ಬೆಲೆ ಇಲ್ವಾ?. 26 ಮಹಿಳೆಯರ ಅರಿಶಿಣ, ಕುಂಕುಮಕ್ಕೆ ಬೆಲೆ ಇಲ್ವಾ?. ಅಮೆರಿಕ ಪ್ರಜೆಗಳನ್ನ ಒಬ್ಬರು ಮುಟ್ಟೋಕೆ ನೋಡಿ. ಅವರನ್ನು ಸರ್ವನಾಶ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ