/newsfirstlive-kannada/media/post_attachments/wp-content/uploads/2024/09/MLA-Munirathna-Arrest.jpg)
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಚಿವ ಮುನಿರತ್ನ ವಿರುದ್ಧ ಗುತ್ತಿಗೆದಾರ ಚೆಲುವರಾಜು ಎಂಬುವವರು ಜೀವ ಬೆದರಿಕೆ ಆರೋಪ ಮಾಡಿ ದೂರು ನೀಡಿದ್ದರು. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ನಾಗಮಂಗಲದಲ್ಲಿ ಅಮಾಯಕರನ್ನು ಬಂಧಿಸಿದ್ದಕ್ಕೂ ಕಾರಣ ಇದೆ.. ಸಚಿವ ಚೆಲುವರಾಯಸ್ವಾಮಿ ಶಾಕಿಂಗ್ ಉತ್ತರ!
ಜೀವ ಬೆದರಿಕೆ ಆರೋಪದ ಜೊತೆಗೆ ಶಾಸಕ ಮುನಿರತ್ನ ವಿರುದ್ಧ ವೇಲು ನಾಯ್ಕರ್ರಿಂದ ಜಾತಿ ನಿಂದನೆ ಆರೋಪ ಕೇಳಿ ಬಂದಿತ್ತು. ಜಾತಿ ನಿಂದನೆ ಆರೋಪದಲ್ಲೂ ಮತ್ತೊಂದು ಕೇಸ್ ದಾಖಲಾಗಿದೆ. ಶಾಸಕ ಮುನಿರತ್ನ ವಿರುದ್ಧ ಜೀವ ಬೆದರಿಕೆ ಆರೋಪದಲ್ಲಿ ಗುತ್ತಿಗೆದಾರ ಚೆಲುವರಾಜು ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿತ್ತು. ಜೀವ ಬೆದರಿಕೆ ಕೇಸ್ನಲ್ಲಿ ಎ1 - ಮುನಿರತ್ನ, ಮಾಜಿ ಸಚಿವ, ಎ2 - ವಿ.ಜಿ. ಕುಮಾರ್, ಆಪ್ತ ಸಹಾಯಕ, ಎ3 - ಅಭಿಷೇಕ್, ಸೆಕ್ಯೂರಿಟಿ, ಎ4 - ವಸಂತ್ ಕುಮಾರ್ ವಿರುದ್ಧ ಕೇಸ್ ಹಾಕಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ