ಒಕ್ಕಲಿಗ ಸಮುದಾಯದ ವಿರುದ್ಧ ಮುನಿರತ್ನರನ್ನು ಎತ್ತಿ ಕಟ್ಟಲು ಪ್ಲಾನ್ ಆಗಿತ್ತಾ?
ವಿಡಿಯೋದಲ್ಲಿ ಡಿ.ಕೆ.ಸುರೇಶ್ ವಿರುದ್ಧ ಮುನಿರತ್ನ ಮಾಡಿರುವ ಆರೋಪಗಳೇನು ?
ದೂರು ಕೊಟ್ಟ ವ್ಯಕ್ತಿ ಈ ಹಿಂದೆ 20 ಒಕ್ಕಲಿಗರ ಮೇಲೆ ಜಾತಿ ನಿಂದನೆ ಕೇಸ್ ಹಾಕಿದ್ನಾ?
ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧನ ಮಾಡಲಾಗಿದೆ. ಅರೆಸ್ಟ್ ಆಗುವ ಸುಳಿವು ಸಿಕ್ಕಿದ್ದ ಮುನಿರತ್ನ ಅವರು ಮೊದಲೇ ವಿಡಿಯೋ ಬಿಡುಗಡೆ ಮಾಡಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋಗೆ ಸಂಬಂಧಪಟ್ಟಂತೆ ಮಾತನಾಡಿರುವ ಮುನಿರತ್ನ ಅವರು ಸುಮಾರು 20 ಜನ ಒಕ್ಕಲಿಗರ ಮೇಲೆ ಜಾತಿ ನಿಂದನೆ ದೂರು ಕೊಟ್ಟ ವ್ಯಕ್ತಿ ಈಗ ನನ್ನ ವಿರುದ್ಧ ದೂರು ಕೊಟ್ಟಿದ್ದಾನೆ. ಒಕ್ಕಲಿಗ ಸಮಾಜವನ್ನು ಬೈಯ್ಯುವ ಕೆಟ್ಟ ಮನಸ್ಥಿತಿ ನನಗಿಲ್ಲ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹೇಳಿದ್ದಾರೆ. ಜಾತಿನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಬಂಧನವಾಗಿರುವ ಮುನಿರತ್ನ ಅಜ್ಞಾತ ಸ್ಥಳದಿಂದ ಮಾಡಿದ ವಿಡಿಯೋದಲ್ಲಿ ಈ ವಿಷಯವನ್ನು ಹೇಳಿದ್ದಾರೆ.
ಇದನ್ನೂ ಓದಿ: ನಾಗಮಂಗಲದಲ್ಲಿ ಅಮಾಯಕರನ್ನು ಬಂಧಿಸಿದ್ದಕ್ಕೂ ಕಾರಣ ಇದೆ.. ಸಚಿವ ಚೆಲುವರಾಯಸ್ವಾಮಿ ಶಾಕಿಂಗ್ ಉತ್ತರ!
ಯಶವಂತಪುರದಲ್ಲಿ ಕೊಲೆ ಕೇಸ್ ಇರುವ ವ್ಯಕ್ತಿ ನನ್ನ ಮೇಲೆ ದೂರು ಕೊಟ್ಟಿರೋದು. ಒಕ್ಕಲಿಗರನ್ನು ಬೈಯ್ಯುವ ಮನಸ್ಥಿತಿ ನನಗಿಲ್ಲ. ಒಕ್ಕಲಿಗ ದಲಿತ ಸಮಾಜದ ವಿರುದ್ಧ ನಾನು ದೂರು ಕೊಟ್ಟಿದ್ದಿಲ್ಲ. ಇದೇ ಚೆಲುವರಾಜ್ ಬಂದು ನನ್ನ ಬಳಿ ದೂರು ಕೊಟ್ಟು ವ್ಯಕ್ತಿ ಹೊಡೆಸಿದ್ದಾರೆ ಹಲ್ಲೆ ಮಾಡಿದ್ದಾರೆ ಎಂದು ನಂದಿನಿ ಲೇಔಟ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್.. ದೂರು ಕೊಟ್ಟ ಗುತ್ತಿಗೆದಾರ ಚೆಲುವರಾಜು ಏನಂದ್ರು?
ಹೊಡೆದವರು ಹೊಡೆಸಿಕೊಂಡವರು ಈಗ ಒಂದಾಗಿದ್ದಾರೆ. 2018/19ರಲ್ಲಿ ಸೋತ ಹೆಣ್ಣು ಮಗಳು, ಅವರ ಜನಗಳು ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತ ಸುರೇಶ್ ನನ್ನನ್ನು ಒಕ್ಕಲಿಗ ಸಮಾಜದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಡಿ.ಕೆ. ಸುರೇಶ್ ದೊಡ್ಡ ಸ್ಥಾನದಲ್ಲಿದ್ದ ವ್ಯಕ್ತಿ, ಈ ಹಿಂದೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಡಾ ಮಂಜುನಾಥ್ರನ್ನ ಕರೆದುಕೊಂಡು ಬಂದಿದ್ದು ಮುನಿರತ್ನ, ಆರ್ ಆರ್ ನಗರದಲ್ಲಿ ಒಂದು ಲಕ್ಷ ಮತ ಹೆಚ್ಚಿಗೆ ಬರಲು ಮುನಿರತ್ನ ಕಾರಣ ಅಂತೆಲ್ಲಾ ಮಾತನಾಡಿದ್ದರು. ಈ ದೂರಿನ ಹಿಂದೆ ಸದ್ಯ ಅವರದೇ ಷಡ್ಯಂತ್ರವಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ.
ಕೋಲಾರದ ಮುಳಬಾಗಿಲು ಬಳಿ ಶಾಸಕ ಮುನಿರತ್ನ ಅವರನ್ನ ಬಂಧಿಸಲಾಗಿದ್ದು, ವೈಯಲಿಕಾವಲ್ ಪೊಲೀಸ್ ಠಾಣೆಗೆ ಕರೆತರಲಾಗುತ್ತಿದೆ. ಮುನಿರತ್ನ ಅವರ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸೇನೆ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ