ನ್ಯಾಯಾಧೀಶರ ಮುಂದ್ರೆ ಏನಂದ್ರು ಗೊತ್ತಾ ಮುನಿರತ್ನ?
ಎರಡು ದಿನಗಳ ಕಾಲ ಮುನಿರತ್ನ ಪೊಲೀಸ್ ಕಸ್ಟಡಿಗೆ
ಬೆಳಿಗ್ಗೆ 10 ಗಂಟೆ ನಂತರ ಶಾಸಕ ಮುನಿರತ್ನ ವಿಚಾರಣೆ
ಜೀವ ಬೆದರಿಕೆ ಮತ್ತು ಜಾತಿನಿಂದನೆ ದೂರಿನಡಿಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ನ್ಯಾಯಾಧೀಶರ ಮುಂದೆ ಮುನಿರತ್ನರನ್ನು ಹಾಜರು ಪಡಿಸಿದ್ದಾರೆ. ಈ ವೇಳೆ ಪೊಲೀಸರು ಒಂದು ವಾರಗಳ ಕಾಲ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಆದೇಶ ನೀಡಿದ್ದಾರೆ.
ನ್ಯಾಯಾಧೀಶರ ನಿವಾಸದಿಂದ ಅಶೋಕನಗರ ಠಾಣೆಗೆ ಮುನಿರತ್ನರನ್ನು ಪೊಲೀಸರು ಕರೆತಂದಿದ್ದಾರೆ. ಪೊಲೀಸರ ಬಂಧನದ ಬೆನ್ನಲ್ಲೇ ಶಾಸಕ ಮುನಿರತ್ನ ಮಂಕಾಗಿದ್ದಾರೆ. ನಿನ್ನೆ ಸಂಜೆಯಿಂದ ಮಾತಿಲ್ಲ-ಕತೆಯಿಲ್ಲ ಬರೀ ಮೌನದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಕೋಲಾರದಲ್ಲಿ ಮುನಿರತ್ನರನ್ನು ವಶಕ್ಕೆ ಪಡೆದ ಪೊಲೀಸರು ಅಶೋಕ್ ನಗರ ಠಾಣೆಗೆ ಕರೆತಂದು ರಾತ್ರಿ ವಿಚಾರಣೆ ನಡೆಸಿದ್ದಾರೆ. ರಾತ್ರಿ 10.30ರಿಂದ 1.30ರ ವರೆಗೆ ಸತತ 3 ಗಂಟೆ ಪೊಲೀಸರು ವಿಚಾರಣೆ ಮಾಡಿದ್ದಾರೆ. ತನಿಖಾಧಿಕಾರಿ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ರಿಂದ ಶಾಸಕ ಮುನಿರತ್ನ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಜೀವಬೆದರಿಕೆ, ಜಾತಿನಿಂದನೆ? 36 ಲಕ್ಷ ಹಣಕ್ಕೆ ಬೇಡಿಕೆ? ಮುನಿರತ್ನಗೆ ಮುಕ್ತಿ ಸಿಗೋದು ಕಷ್ಟವೇ?
ಮುನಿರತ್ನ ವಿರುದ್ಧ ದಾಖಲಾದ ಎರಡು ಎಫ್.ಐ.ಆರ್ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಶಾಸಕ ಮುನಿರತ್ನ ಮೌನಕ್ಕೆ ಶರಣಾಗಿದ್ದಾರೆ. ತನಿಖಾಧಿಕಾರಿಗಳ ಪ್ರಶ್ನೆಗೆ ನಾನೇನು ಮಾಡಿಲ್ಲ. ಷಡ್ಯಂತ್ರ ಅಂತ ಉತ್ತರ ನೀಡಿದ್ದಾರಂತೆ.
ತಡರಾತ್ರಿ ಜಡ್ಜ್ ಮನೆ ಮುಂದೆ ಕರೆದೊಯ್ಯುವಾಗಲು ಮುನಿರತ್ನ ಮಂಕಾಗಿದ್ದಾರೆ. ಪೊಲೀಸ್ ಜೀಪ್ ನಲ್ಲಿ ಹೋಗುವಾಗ ಮೌನಕ್ಕೆ ಶರಣಾಗಿದ್ದಾರೆ. ಸೈಲೆಂಟ್ ಆಗಿ ಪೊಲೀಸರ ಜೊತೆ ಯಾವುದೇ ಮಾತನಾಡದೆ ಕುಳಿತಿದ್ದಾರೆ. ನ್ಯಾಯಧೀಶರ ಮುಂದೆಯೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ವಾಪಸ್ ನ್ಯಾಯಧೀಶರ ಮನೆಯಿಂದ ಠಾಣೆಗೆ ಬಂದಾಗಲೂ ಮೌನಕ್ಕೆ ಜಾರಿದ್ದಾರೆ.
ಇದನ್ನೂ ಓದಿ: ಬಸವಣ್ಣನ ನಾಡಲ್ಲೇ ಅಸ್ಪೃಶ್ಯತೆ ಜೀವಂತ! ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ
ನಾಲ್ಕು ಗಂಟೆಗೆ ಜಡ್ಜ್ ಮನೆಯಿಂದ ಬಂದ ನಂತರ ಮುನಿರತ್ನ ಅವರನ್ನು ಪೊಲೀಸರು ರೆಸ್ಟ್ ಮಾಡಲು ಬಿಟ್ಟಿದ್ದಾರೆ. ಸರಿಯಾಗಿ ನಿದ್ರೆ ಮಾಡದೇ ಗಾಢ ಯೋಚನೆಗೆ ಜಾರಿರುವ ಮಾಜಿ ಸಚಿವರು ಜಾರಿದ್ದಾರೆ. ಸದ್ಯ ಎರಡು ದಿನದ ಕಸ್ಟಡಿಗೆ ಮುನಿರತ್ನ ಅವರನ್ನು ಒಪ್ಪಿಸಿದ್ದಾರೆ
ಬೆಳಿಗ್ಗೆ 10 ಗಂಟೆ ನಂತರ ಶಾಸಕ ಮುನಿರತ್ನ ವಿಚಾರಣೆ ನಡೆಯಲಿಕ್ಕಿದೆ. ಜೀವ ಬೆದರಿಕೆ ಹಾಗೂ ಅಟ್ರಾಸಿಟಿ ಕೇಸ್ ಸಂಬಂಧ ತನಿಖಾಧಿಕಾರಿಗಳ ಪ್ರಶ್ನೆ ಮಾಡಲಿದ್ದಾರೆ. ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ಮಾಡಲಾಗಿದ್ದಾರೆ.
ಈಗಾಗಲೇ ತನಿಖಾಧಿಕಾರಿಗಳು ದೂರುದಾರರ ಬಳಿ ಆಡಿಯೋದ ಮದರ್ ಡಿವೈಸ್ ಕೇಳಿದ್ದಾರೆ. ಇವತ್ತು ಪೊಲೀಸರಿಗೆ ದೂರುದಾರರು ಮದರ್ ಡಿವೈಸ್ ತಲುಪಿಸಲಿದ್ದಾರೆ. ಮುನಿರತ್ನ ಆಡಿಯೋ ಸ್ಯಾಂಪಲ್ ಕೂಡ ಪೊಲೀಸರು ಪಡೆಯಲಿದ್ದಾರೆ. ಜೊತೆಗೆ ದೂರುದಾರ ಚೆಲುವರಾಜು ಆಡಿಯೋ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡಲಿದ್ದಾರೆ.
ಇದನ್ನೂ ಓದಿ: ನಟಿ ಅಮೂಲ್ಯ ಮೇಲೆ ಹೂವಿನ ಸುರಿಮಳೆಗೈದ ಅವಳಿ ಮಕ್ಕಳು; ಕಾರಣ ಕೇಳಿದ್ರೆ ಖುಷಿ ಪಡ್ತೀರಾ.. ಏನದು?
ಇಬ್ಬರ ಆಡಿಯೋ ಸ್ಯಾಂಪಲ್ ಹಾಗೂ ಮದರ್ ಡಿವೈಸ್ ಅನ್ನು ಎಫ್.ಎಸ್.ಎಲ್ ಗೆ ರವಾನಿಸಲಿದ್ದಾರೆ. ಇದರ ಜೊತೆಗೆ ಆಡಿಯೋ ಸಂಬಂಧ ಮುನಿರತ್ನಗೆ ಸಾಲು ಸಾಲು ಪ್ರಶ್ನೆ ಕೇಳಲಿದ್ದಾರೆ. ಮತ್ತೊಂದು ಎಫ್.ಐ.ಆರ್ ಬಗ್ಗೆ ಕೂಡ ವಿಚಾರಣೆ ನಡೆಸಲಿದ್ದಾರೆ. ಬೆದರಿಕೆ ಹಾಕಿದ್ದು ಹೌದಾ? ಯಾವ ವಿಚಾರಕ್ಕೆ ನೀವು ಬೆದರಿಕೆ ಹಾಕಿದ್ದು? ಯಾವಾಗ ರೆಕಾರ್ಡ್ ಮಾಡಿದ ಆಡಿಯೋ? ಎಷ್ಟು ವರ್ಷದಿಂದ ದೂರುದಾರ ಪರಿಚಯ?. ಆಡಿಯೋ ಬಹಿರಂಗ ಆಗುವ ಮುನ್ನ ದೂರುದಾರರು ನಿಮ್ಮನ್ನ ಸಂಪರ್ಕಿಸಿದ್ರಾ?. ದೂರುದಾರ ಹಾಗೂ ನಿಮಗೆ ಹೇಗೆ ಪರಿಚಯ? ನಿಮ್ಮ ನಡುವೆ ಏನಾದ್ರು ವ್ಯವಹಾರ ಆಗಿತ್ತಾ?
ಇಬ್ಬರ ನಡುವೆ ಫೋನ್ ಸಂಪರ್ಕ ಇತ್ತಾ? ಕೊನೆಯ ಸಲ ಭೇಟಿ ಯಾಗಿದ್ದು ಯಾವಾಗ? ಹೀಗೆ ಮುನಿರತ್ನ ಬಳಿ ಹತ್ತು ಹಲವು ಪ್ರಶ್ನೆಯನ್ನ ಪೊಲೀಸರು ಕೇಳಲಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ