Elections; ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ.. ₹500 ಕೋಟಿ ಇದ್ದ ಆಸ್ತಿ 5 ವರ್ಷದಲ್ಲಿ 3,000 ಕೋಟಿಗೂ ಹೆಚ್ಚು!

author-image
Bheemappa
Updated On
Elections; ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ.. ₹500 ಕೋಟಿ ಇದ್ದ ಆಸ್ತಿ 5 ವರ್ಷದಲ್ಲಿ 3,000 ಕೋಟಿಗೂ ಹೆಚ್ಚು!
Advertisment
  • ಈ ಅಭ್ಯರ್ಥಿ ಹೆಂಡತಿಯ ಆಸ್ತಿಯೇ ಸಾವಿರ ಕೋಟಿಗೂ ಹೆಚ್ಚು
  • ವಿಧಾನಸಭಾ ಚುನಾವಣೆಯಲ್ಲೇ ಅತ್ಯಂತ ಶ್ರಿಮಂತ ಅಭ್ಯರ್ಥಿ
  • ಕೇವಲ 5 ವರ್ಷದಲ್ಲಿ ಎಷ್ಟು ಸಾವಿರ ಕೋಟಿ ಗಳಿಸಿದರು ಇವರು?

ಮುಂಬೈ: ಸದ್ಯ ಇಡೀ ದೇಶದಲ್ಲೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಅಭ್ಯರ್ಥಿಗಳು ಗೆಲ್ಲಲು ಸಾಕಷ್ಟು ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮತದಾರರನ್ನ ತಮ್ಮತ್ತ ಸೆಳೆಯಲು ನಿತ್ಯ ಮನೆ ಮನೆಗೆ ಭೇಟಿ ಕೊಡುತ್ತಿದ್ದಾರೆ. ಇದರ ಮಧ್ಯೆ ಮಹಾರಾಷ್ಟ್ರ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿ, ಪ್ರಸ್ತುತದ ಶಾಸಕರು ಎನ್ನುವುದು ವಿಶೇಷ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು ತಮ್ಮ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಈ ಚುನಾವಣೆಯಲ್ಲಿ ಬಿಜೆಪಿ ಶಾಸಕ ಹಾಗೂ ಘಾಟ್ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರಾಗ್ ಶಾ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದು ತಿಳಿದು ಬಂದಿದೆ. 500 ಕೋಟಿ ರೂಪಾಯಿಗಳನ್ನು ಹೊಂದಿದ್ದ ಇವರು ಶಾಸಕರಾದ ಮೇಲೆ ಆಸ್ತಿ 6 ಪಟ್ಟು ದುಪ್ಪಟ್ಟು ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:50 ಶಾಸಕರಿಗೆ ತಲಾ ₹50 ಕೋಟಿ- ಸಿಎಂ ಸಿದ್ದರಾಮಯ್ಯ ಗುರಿಯಿಟ್ಟು ಹೇಳಿದ್ದು ಯಾರಿಗೆ, BJPಗೆ ಅಲ್ವಾ?

publive-image

ಘಾಟ್ಕೋಪರ್ ಕ್ಷೇತ್ರಕ್ಕೆ ಪರಾಗ್ ಶಾ ಅವರನ್ನು 2ನೇ ಬಾರಿಗೆ ಬಿಜೆಪಿ ಕಣಕ್ಕೆ ಇಳಿಸಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರ ಆಸ್ತಿ ಒಟ್ಟು 3,382 ಕೋಟಿ ರೂಪಾಯಿ ಇದೆ ಎಂದು ಅನೌನ್ಸ್​ ಮಾಡಿದ್ದಾರೆ. ಇದರಲ್ಲಿ ₹ 3,315 ಕೋಟಿ ಚರಾಸ್ತಿ ಮತ್ತು ₹ 67 ಕೋಟಿ ಸ್ಥಿರಾಸ್ತಿ ಇದೆ. ಈ ₹ 3,315 ಕೋಟಿ ಚರಾಸ್ತಿಯಲ್ಲಿ ಪರಾಗ್ ಶಾ ಅವರ ಹೆಸರಲ್ಲಿ ₹ 2,179 ಕೋಟಿ ಇದೆ. ಉಳಿದ ₹ 1,136 ಕೋಟಿ ಆಸ್ತಿ ಹೆಂಡತಿ ಹೆಸರಿನಲ್ಲಿದೆ. ಇದರ ಜೊತೆಗೆ ಕಾರು ಬಂಗಲೆ, ಚಿನ್ನ, ಬೆಳ್ಳಿ ಹಾಗೂ ಡೈಮಂಡ್ ಕೂಡ ಸೇರಿವೆ ಎಂದು ನಾಮಿನೇಷನ್ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಪರಾಗ್ ಶಾ ಅವರು ರಿಯಲ್ ಎಸ್ಟೇಟ್ ಬ್ಯುಸಿನೆಸ್​ಮ್ಯಾನ್ ಆಗಿದ್ದು ಮ್ಯಾನ್ ಇನ್‌ಫ್ರಾ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕನ್​ಸ್ಟ್ರಕ್ಷನ್ ಕಂಪನಿಯನ್ನು ಹೊಂದಿದ್ದಾರೆ. ಶಾ ಅವರು 2019 ರಲ್ಲಿ ₹ 500 ಕೋಟಿ ನಿವ್ವಳ ಮೌಲ್ಯ ಮಾತ್ರ ಹೊಂದಿರುವುದಾಗಿ ಘೋಷಿಸಿದ್ದರು. ಆದರೆ ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ ಸುಮಾರು 6 ಪಟ್ಟು ಹೆಚ್ಚಾಗಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment