SSLC, PUC ಸೇರಿ ಪದವೀಧರರಿಗೆ ಸ್ಕಾಲರ್ ​ಶಿಪ್​.. ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ, ತಕ್ಷಣ ಅಪ್ಲೇ ಮಾಡಿ

author-image
Bheemappa
Updated On
SSLC, PUC ಸೇರಿ ಪದವೀಧರರಿಗೆ ಸ್ಕಾಲರ್ ​ಶಿಪ್​.. ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ, ತಕ್ಷಣ ಅಪ್ಲೇ ಮಾಡಿ
Advertisment
  • ಎಂಬಿಬಿಎಸ್​, ಡೆಂಟಲ್​, ಬಿಇ ವಿದ್ಯಾರ್ಥಿಗಳಿಗೂ ಅವಕಾಶ
  • 10ನೇ ತರಗತಿ ವಿದ್ಯಾರ್ಥಿಗಳಿಗೆ ಎಷ್ಟು ಸಿಗುತ್ತದೆ ಸ್ಕಾಲರ್​ಶಿಪ್?
  • ವಿದ್ಯಾರ್ಥಿವೇತನಕ್ಕೆ ಒಟ್ಟು ₹5 ಕೋಟಿ ವೆಚ್ಚವಾಗುವ ನಿರೀಕ್ಷೆ

ಚಿಕ್ಕಬಳ್ಳಾಪುರ: ಕಾಂಗ್ರೆಸ್​ ಎಂಎಲ್​ಎ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಣೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಕಂದವಾರದ ಬಳಿಯ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಶಾಸಕ ಪ್ರದೀಪ್ ಈಶ್ವರ್ ಅವರು ಸ್ಕಾಲರ್​ಶಿಪ್ ಅನ್ನು ಅನೌನ್ಸ್​ ಮಾಡಿದ್ದಾರೆ. ಪ್ರದೀಪ್ ಈಶ್ವರ್ ಎಂಎಲ್​ಎ ವೆಬ್​​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಒಟ್ಟು 5 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಆಗುವ ನಿರೀಕ್ಷೆ.

ಇದನ್ನೂ ಓದಿ: ಕರ್ನಾಟಕ ವಿದ್ಯುತ್ ಇಲಾಖೆಯಿಂದ ಕಾಲ್​ಫಾರ್ಮ್​.. 500, ಸಾವಿರ ಅಲ್ಲ 2 ಸಾವಿರಕ್ಕೂ ಹೆಚ್ಚು ಹುದ್ದೆಗಳು

publive-image

ಯಾವ್ಯಾವ ವಿದ್ಯಾರ್ಥಿಗಳಿಗೆ ಎಷ್ಟೇಷ್ಟು ಹಣ..?

  • 10ನೇ ತರಗತಿ- ₹1,000
    ಐಟಿಐ, ಡಿಪ್ಲೋಮಾ- ₹1,500
  • ಸೆಕೆಂಡ್ ಪಿಯುಸಿ- ₹2,000
    (ಆರ್ಟ್ಸ್​, ಕಾಮರ್ಸ್, ಸೈನ್ಸ್​)
  • ಫೈನಲ್ ಇಯರ್ ಡಿಗ್ರಿ- ₹2,000
    (ಬಿಎ. ಬಿಕಾಮ್, ಬಿಎಸ್​​ಸಿ, ಬಿಬಿಎ, ವಿ​​ಸಿಎ, ಬಿಎಸ್​ಡಬ್ಲು, ಎಲ್​ಎಲ್​ಬಿ)
  • ಸ್ನಾತಕೋತ್ತರ ಫೈನಲ್ ಇಯರ್
    (ಎಂಬಿಬಿಎಸ್, ಬಿಇ, ಎಂಎಸ್​ಸಿ, ಎಂಎ, ಎಂಕಾಮ್, ಎಂಬಿಎ, ಎಂಎಸ್​ಡಬ್ಲು, ಬಿಎಎಂಎಸ್, ಡೆಂಟಲ್)

ಅಪ್ಲೇ ಮಾಡಲು ಕೊನೆಯ ದಿನಾಂಕ- 15 ನವೆಂಬರ್ 2024

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಐಡೇಡ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಅಪ್ಲೇ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಸಂಬಪರ್ಕಿಸಿ- 080-24413333, ಸ್ವಾಮ್ಯ- 90084 95576, ಹರೀಶ್- 97430 64840 ವೆಬ್​ಸೈಟ್​- www.pradeepeshwarmla.com

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment