/newsfirstlive-kannada/media/post_attachments/wp-content/uploads/2024/12/PRADEEP_ESHWAR_MAL.jpg)
ರಾಜ್ಯದಲ್ಲೇ ಭಿನ್ನ ವಿಭಿನ್ನ ಪ್ರಯೋಗಗಳ ಮೂಲಕ ಹೆಸರುವಾಸಿಯಾಗಿರುವ ಶಾಸಕ ಪ್ರದೀಪ್ ಈಶ್ವರ್. ಇದೀಗ ತಮ್ಮ ಕ್ಷೇತ್ರದಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಎನ್ನುವ ಹೆಸರಿನಲ್ಲಿ ಇಡೀ ಸರ್ಕಾರದ ಆಡಳಿತ ಯಂತ್ರಾಂಶವನ್ನು ಗ್ರಾಮಗಳಿಗೆ ಕರೆದೊಯ್ಯುತ್ತಿದ್ದಾರೆ. ಈ ಮೂಲಕ ಸ್ಥಳದಲ್ಲೇ ಸಮಸ್ಯೆಗಳನ್ನ ಪರಿಹರಿಸುವ ವಿನೂತನ ಹೆಜ್ಜೆ ಇಟ್ಟಿದ್ದಾರೆ.
ಇಡೀ ರಾಜ್ಯದಲ್ಲಿ ಭಿನ್ನ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದಾಗಿನಿಂದ ಒಂದಲ್ಲ ಒಂದು ಕಾರ್ಯಕ್ರಮ ಹಾಕಿಕೊಂಡು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಈಗ ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಹೆಸರಿನಲ್ಲಿ ಗ್ರಾಮ ಗ್ರಾಮಗಳಿಗೆ ಇಡೀ ತಾಲೂಕು ಆಡಳಿತವನ್ನೇ ಜೊತೆಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ತಾಲೂಕಿನ ಗುಯ್ಯಲಹಳ್ಳಿ. ಕಾಮಗಾನಹಳ್ಳಿ. ಸಾದೇನಹಳ್ಳಿ, ಶ್ಯಾಂಪುರ ಸೇರಿದಂತೆ ಹಲವು ಹಳ್ಳಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಗುಯ್ಯಲಹಳ್ಳಿ ಗ್ರಾಮದ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನ ಪ್ರದೀಪ್ ಈಶ್ವರ್ ಉದ್ಘಾಟಿಸಿದರು. ಈ ವೇಳೆ ಪ್ರದೀಪ್ ಈಶ್ವರ್‌ಗೆ ಹೂಮಳೆ ಸುರಿಸಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಜೈಭೀಮ್ ಘೋಷಣೆ ಕೂಗಿ ಅಂಬೇಡ್ಕರ್‌ಗೆ ಗೌರವ ಸೂಚಿಸಿದರು. ಇಷ್ಟೇ ಅಲ್ಲದೆ ಸಾದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿದ ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ವಿಜ್ಞಾನದ ಪಾಠ ಮಾಡುವ ಮೂಲಕ ಮೇಷ್ಟ್ರಾಗಿ ಕಾಣಿಸಿಕೊಂಡರು.
ನಮ್ಮ ಊರಿಗೆ ನಮ್ಮ ಶಾಸಕ ಪ್ರಾಜೆಕ್ಟ್ ಕಟ್ಟ ಕಡೆಯ ಜನರಿಗೂ ತಲುಪುತ್ತಿದ್ದು ಜನಸಾಮಾನ್ಯರಿಗೆ ಶಾಸಕ ಪ್ರದೀಪ್ ಈಶ್ವರ್ ತಮ್ಮ ಗ್ರಾಮಗಳಲ್ಲೇ ಸಿಗುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿನ ನಿವೇಶನ, ರಸ್ತೆ, ಸಾರಿಗೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುತ್ತಿರೋದ್ರಿಂದ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಎಂಎಲ್ಎ ಟೆಸ್ಟ್ ಸೀರಿಸ್ ಅಂತ 3 ಸಾವಿರ ಜನ ಪೇಪರ್ ರೆಡಿಯಾಗಿದೆ. ಪ್ರತಿ ಶಾಲೆಗೆ ಹೋಗುತ್ತದೆ. ಸಂಜೆ ಆ ಪೇಪರ್ ಅನ್ನು ಬಿಇಒ ಆಫೀಸ್ಗೆ ಕಳುಹಿಸಿ ಪ್ರತಿ ದಿನ ಟೆಸ್ಟ್ ಪೇಪರ್ ಅನ್ನು 3 ಸಾವಿರ ಜನರನ್ನ ಇಂಟರ್ ಸ್ಕೂಲ್ ವ್ಯಾಲೆವೇಟ್ ಮಾಡ್ತಾರೆ. ಇದು ಬಹಳ ಕಷ್ಟದ ಕೆಲಸ. ಆದರೂ ಮಾಡುತ್ತಿದ್ದೇವೆ.
ಸರ್ಕಾರಿ ಶಾಲೆಗಳು ಸೋರುತ್ತಿವೆ, ಜಮೀನು, ಸ್ಥಳ, ಊರಿನಲ್ಲಿ ಸ್ಮಶಾನ ಇಲ್ಲ. ನೀರಿನ ವ್ಯವಸ್ಥೆ ಮಾಡಿಕೊಡಿ, ಬಸ್ ವ್ಯವಸ್ಥೆ ಇಲ್ಲ ಎನ್ನುವ ಕೆಲವು ಸಮಸ್ಯೆಗಳು ಕೇಳಿ ಬರುತ್ತಿವೆ. ಶೇಕಡಾ 80 ರಷ್ಟು ಸಮಸ್ಯೆ ಪರಿಹಾರ ಕಾಣುತ್ತಿವೆ. ಆದರೆ ಕೋರ್ಟ್ಗಳಲ್ಲಿ ಇರುವಂತಹದ್ದನ್ನ ನಾವು ಏನು ಮಾಡೋಕೆ ಆಗಲ್ಲ.
ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ಶಾಸಕ
ಇದನ್ನೂ ಓದಿ:ಪುಷ್ಪ2 ರಿಲೀಸ್ ಆದ್ಮೇಲೆ ಅಲ್ಲು ಅರ್ಜುನ್ಗೆ ಸಂಕಷ್ಟ.. ಪೊಲೀಸರ ಮುಂದಿನ ತಯಾರಿ ಏನ್ ಗೊತ್ತಾ?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಮಿಂಚಿನಂತೆ ಸಂಚರಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ