ಕಾಂಗ್ರೆಸ್ ಶಾಸಕನಿಗೆ ಮುಳುವಾದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ
2009ರ ಕೇಸ್‌ನಲ್ಲಿ ತಗಲಾಕಿಕೊಂಡ ಶಾಸಕ ಸತೀಶ್ ಸೈಲ್
ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಸ್ವಾಮಿ ಸತೀಶ್ ಸೈಲ್
ಕಾರವಾರದ ಶಾಸಕ ಸತೀಶ್ ಸೈಲ್ಗೆ ಎದೆ ಬಡಿತ ಹೆಚ್ಚಾಗಿದೆ. ಬೇಲೇಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ರನ್ನು ದೋಷಿ ಆಗಿದ್ದು, ಶಾಸಕ ಸ್ಥಾನ ಕಳೆದುಕೊಳ್ಳು ಭೀತಿ ಎದುರಾಗಿದೆ. ಹೀಗಾಗಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ, ಆರೋಪಿಗಳು ಮನವಿ ಮಾಡಿದ್ದರು. ನಿನ್ನೆ ಈ ಕೇಸ್‌ನ ವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಇವತ್ತು ಶಿಕ್ಷೆಯ ಪ್ರಮಾಣವನ್ನ ಘೋಷಿಸಲಿದೆ.
ರಾಜ್ಯದಲ್ಲಿ ಈಗಾಗಲೇ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ. ಇದೀಗ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಆರೋಪ ಸಾಬೀತಾಗಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರ ಮೂಡಿಸಿದೆ.
ಇವತ್ತು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಶಿಕ್ಷೆ ಅವಧಿ ಪ್ರಕಟ!
2009ರ ಬೇಲೇಕೇರಿ ಅದಿರು ನಾಪತ್ತೆ ಕೇಸ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮೊನ್ನೆಯೇ ಶಾಸಕ ಸತೀಶ್ ಸೈಲ್ರನ್ನು ಐದು ಕೇಸ್ಗಳಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. 6ನೇ ಪ್ರಕರಣ ವಿಚಾರಣೆ ಬಾಕಿ ಇದ್ದ ಕಾರಣ, ನಿನ್ನೆಗೆ ತೀರ್ಪುವನ್ನು ಕಾಯ್ದಿರಿಸಿತ್ತು. ಕೋರ್ಟ್ನ ಸೂಚನೆಯಂತೆಯೇ ಮೊನ್ನೆ ರಾತ್ರಿಯೇ ಸಿಬಿಐ ಅಧಿಕಾರಿಗಳು ಕಾರವಾರ ಶಾಸಕ ಸತೀಶ್ ಸೈಲ್ರನ್ನು ಅರೆಸ್ಟ್ ಮಾಡಿದ್ದರು. ನಿನ್ನೆ ತೀರ್ಪು ಪ್ರಕಟ ಇದ್ದ ಕಾರಣ ಸತೀಶ್ ಸೈಲ್ರನ್ನು ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಸತೀಶ್ ಸೈಲ್ ಪರ ವಕೀಲರು ಸೇರಿದಂತೆ ಎಲ್ಲ ಆರೋಪಿಗಳು ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಸಿಬಿಐ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸುವಂತೆ ಪ್ರತಿವಾದ ಮಂಡಿಸಿದ್ರು.
ಕೆ.ಎಸ್.ಹೇಮಾ, ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್: ಸ್ವಾಮಿ ಆರೋಪಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಬೇಕು. ಯಾಕಂದ್ರೆ 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಿದ್ದಾರೆ. ಹೀಗಾಗಿ ಆರೋಪಿಗಳಿಗೆ ಶಿಕ್ಷೆ ಜೊತೆಗೆ ಗರಿಷ್ಠ ದಂಡವನ್ನೂ ವಿಧಿಸಬೇಕು
ಜಡ್ಜ್: ಶಿಕ್ಷೆ ಕಡಿಮೆ ಮಾಡಲು ಏನಾದರೂ ಕಾರಣ ಇದ್ಯಾ?
ಮೂರ್ತಿ ಡಿ ನಾಯ್ಕ್, ಸತೀಶ್ ಸೈಲ್ ಪರ ವಕೀಲರು: ಸ್ವಾಮಿ.. ಸತೀಶ್ ಸೈಲ್ಅವರಿಗೆ ಅನಾರೋಗ್ಯ ಸಮಸ್ಯೆ ಇದೆ. ಚಿಕಿತ್ಸೆ ಪಡೆಯುತ್ತಿದ್ದು, ಇದೇ ಆಧಾರದ ಮೇಲೆ ಬೇಲ್ ಪಡೆದಿದ್ದರು. ಪ್ರಕರಣದಲ್ಲಿ ವೈಯಕ್ತಿಕವಾಗಿ ಸತೀಶ್ ಸೈಲ್ರ ಯಾವ ಪಾತ್ರವೂ ಇಲ್ಲ. ಇಲ್ಲಿ ಕಂಪನಿಯ ಮೂಲಕ ಅದಿರು ಟ್ರಾನ್ಸ್ಪೋರ್ಟ್ ಆಗಿದೆ. ಕಳ್ಳತನವಾದ ಅದಿರಿನಲ್ಲಿ ಆರೋಪಿಗಳದ್ದು ಎಷ್ಟು ಅಂತ ಸಿಬಿಐ ಸ್ಪಷ್ಟ ಪಡಿಸಿಲ್ಲ.
ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪತಿ, ಅತ್ತೆ, ಮಾವ.. ಜಾತ್ರೆಯಲ್ಲಿ ಜೀವಂತವಾಗಿ ಸಿಕ್ಕ ಮಹಿಳೆ ಮನೆಮಂದಿ ಶಾಕ್
ಎರಡೂ ಕಡೆಯ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶಾಸಕ ಸತೀಶ್ ಸೈಲ್ರಿಗೆ. ನೀವೆನಾದ್ರೂ ಹೇಳೋದು ಇದೆಯಾ ಎಂದು ಪ್ರಶ್ನೆ ಮಾಡಿದ್ರು. ಆಗ ಸತೀಶ್ ಸೈಲ್ ಕಣ್ಣಲ್ಲಿ ನೀರು ತುಂಬಿಕೊಂಡು ಉತ್ತರ ನೀಡಿದ್ರು.
ಸತೀಶ್ ಸೈಲ್, ಶಾಸಕ: ಸ್ವಾಮಿ.. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಬೆಂಗಳೂರು, ಮತ್ತೊಬ್ಬಳು ವಿಜಯನಗರದಲ್ಲಿದ್ದಾಳೆ. ಪತ್ನಿಗೂ ಕೂಡ ಒತ್ತಡದ ಕಾಯಿಲೆಯಿಂದ ಬಳಲಿತ್ತಿದ್ದಾರೆ. ನಾನು ಕ್ರೋನಿಕಲ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಸ್ವಾಮಿ.
ಇನ್ನು ಮೊನ್ನೆಯೇ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ 5 ಕೇಸ್ಗಳಲ್ಲಿ ಕೈ ಶಾಸಕ ದೋಷಿ ಆಗಿದ್ರು. ನಿನ್ನೆ 6ನೇ ಪ್ರಕರಣದ ವಾದವವೂ ಮುಕ್ತಾಯವಾಗಿದೆ. ಆರು ಪ್ರಕರಣಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ವಾದ ಮಂಡಿಸಿದ್ದು, ಇದನ್ನು ಆಲಿಸಿದ ಕೋರ್ಟ್ ಶಾಸಕ ಸತೀಶ್ ಸೈಲ್ ಸೇರಿದಂತೆ 7 ಆರೋಪಿಗಳ ಶಿಕ್ಷೆ ಪ್ರಮಾಣದ ತೀರ್ಪನ್ನ ಇವತ್ತು ಪ್ರಕಟಿಸಲಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವರು, ಇದು 2009ರ ಕೇಸ್, ಈಗ ಅಂತಿಮ ತೀರ್ಮಾನ ಆಗಿದ್ದು, ಕಾನೂನಿನಲ್ಲಿ ಮುಂದೆ ಏನಾಗಲಿದೆ ನೋಡೋಣ ಎಂದಿದ್ದಾರೆ
ಒಟ್ಟಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದರ ಹಿಂದೆ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ವಾಲ್ಮೀಕಿ ಹಗರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಜೈಲಿಂದ ಹೊರ ಬಂದ ಕೆಲವೇ ದಿನದಲ್ಲಿ. ಕಾಂಗ್ರೆಸ್ನ ಮತ್ತೊಬ್ಬ ಶಾಸಕ ಜೈಲು ಪಾಲಾಗಿ ಶಿಕ್ಷೆ ಅನುಭವಿಸೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ