/newsfirstlive-kannada/media/post_attachments/wp-content/uploads/2024/10/HSN_DC_MLA.jpg)
ಹಾಸನದ ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಈ ಮಧ್ಯೆ ನಿನ್ನೆ ದರ್ಶನದ ವಿಚಾರದಲ್ಲಿ ಬೇಲೂರು ಶಾಸಕ ಹೆಚ್​.ಕೆ ಸುರೇಶ್ ಹಾಗೂ ಹಾಸನ ಜಿಲ್ಲಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಪಿಎಯನ್ನು ಪೊಲೀಸರು ತಳ್ಳಿದ ಆರೋಪಕ್ಕೆ ಡಿಸಿ ಸತ್ಯಭಾಮ ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ.
/newsfirstlive-kannada/media/post_attachments/wp-content/uploads/2024/10/HSN_DC_MLA_2.jpg)
ಇದನ್ನೂ ಓದಿ: ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ; ಏನಿದರ ರಹಸ್ಯ?
ಹಾಸನಾಂಬೆ ದೇಗುಲದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಬೇಲೂರು ಶಾಸಕ ಹೆಚ್​.ಕೆ ಸುರೇಶ್ ನಡುವೆ ನಡೆದ ಮಾತಿನ ಚಕಮಕಿ ಹೇಗಿತ್ತು?.
ಸತ್ಯಭಾಮ: ಬೇರೆಯವರಿಗೆ ಡಿಸ್ಬರ್ಬ್​ ಆಗುತ್ತೆ
ಹೆಚ್​.ಕೆ ಸುರೇಶ್: ನಾನು ಡಿಸ್ಬರ್ಬ್ ಮಾಡೋಕೆ ಬಂದಿಲ್ಲ
ಸತ್ಯಭಾಮ: ನೋಡಿ, ಎಲ್ಲಾ ನೋಡಿ ಅಲ್ಲಿ
ಹೆಚ್​.ಕೆ ಸುರೇಶ್: ನಾನು ಡಿಸ್ಬರ್ಬ್​ ಮಾಡೋಕೆ ರೆಡಿ ಇಲ್ಲ, ನಾವು ಸಾರ್ವಜನಿಕ ಸೇವೆಗೆ ಇರೋದು
ಸತ್ಯಭಾಮ: ಆಯ್ತು.. ಹೋಗಿ ಸರ್..
ಹೆಚ್​.ಕೆ ಸುರೇಶ್: ಏ ಬಿಡಯ್ಯ ನೀನು, ಹೋಗಯ್ಯ ನೀನು
ಪ್ರೀತಂಗೌಡ: ಆಯಿತು ಹೋಗಣ್ಣ ನೀನು
ಹೆಚ್​.ಕೆ ಸುರೇಶ್: ಏಯ್ ಬಿಡಯ್ಯ ನೀನು, ಹೋಗು ನೀನು, ನಾನು ನೋಡ್ತಾ ಇದ್ದೀನಿ
ಸತ್ಯಭಾಮ: ಅಯ್ಯೋ ಬನ್ನಿ ಸಾರ್, ಪ್ಲೀಸ್, ಪ್ಲೀಸ್
ಹೆಚ್​.ಕೆ ಸುರೇಶ್: ನಾನು ಹೋಗೋದೇ ಇಲ್ಲ, ನನಗೆ ಬೇಕಾಗಿಲ್ಲ
ಸತ್ಯಭಾಮ: ಬೇಡ ಸರ್, ಬೇಡ ಸರ್
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುತ್ತಿದೆ. ವಿವಿಐಪಿಗಳು ಕೂಡ ಹಾಸನಾಂಬೆಯ ದರ್ಶನಕ್ಕೆ ದೌಡಾಯಿಸುತ್ತಿದ್ದಾರೆ, ಇದೀಗ ಇದೇ ವಿಚಾರ ಹಾಸನ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸರ ಮಧ್ಯೆ ವಾಗ್ವಾದಕ್ಕೆ ಸಾಕ್ಷಿಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೇವರ ದರ್ಶನಕ್ಕೆ ಬಂದಿದ್ದಾಗ ಅವರ ಹಿಂದೆಯೇ ಬೇಲೂರು ಶಾಸಕ ಹೆಚ್.ಕೆ ಸುರೇಶ್ ಬಂದಿದ್ದಾರೆ. ಆಗ ಡಿಸಿ ಸತ್ಯಭಾಮ ಬೇರೆಯವರಿಗೆ ಡಿಸ್ಟರ್ಬ್ ಆಗುತ್ತಿದೆ. ಬೇಗ ಬೇಗ ಹೋಗಿ ಸಾರ್ ಅಂತ ಹೇಳಿದ್ದಾರೆ. ಇದರಿಂದ ಕೆರಳಿದ ಶಾಸಕ ಹೆಚ್​.ಕೆ ಸುರೇಶ್, ಜಿಲ್ಲಾಧಿಕಾರಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಮಾಜಿ ಶಾಸಕ ಪ್ರೀತಮ್​ಗೌಡ ಸಮಾಧಾನ ಮಾಡಲು ಯತ್ನಿಸಿದ್ರೂ, ವಾಗ್ವಾದ ನಿಲ್ಲಲಿಲ್ಲ.
ಇದನ್ನೂ ಓದಿ: ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ
/newsfirstlive-kannada/media/post_attachments/wp-content/uploads/2024/10/HSN_DC_MLA_1.jpg)
ಜಿಲ್ಲಾಧಿಕಾರಿ-ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ
ಇದಷ್ಟೇ ಅಲ್ಲ.. ಪೊಲೀಸರು ಮತ್ತು ಜಿಲ್ಲಾಧಿಕಾರಿ ನಡಿವೆಯೂ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಧಿಕಾರಿಯ ಆಪ್ತ ಕಾರ್ಯದರ್ಶಿಯನ್ನು ತಳ್ಳಿದ ವಿಚಾರಕ್ಕೆ ಡಿಸಿ ಗರಂ ಆಗಿ ಪ್ರಶ್ನೆ ಮಾಡಿದ್ದಾರೆ. ಆಗ ಪೊಲೀಸರು ಪಿಎ ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಇನ್ನೊಂದೆಡೆ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ನಡುವೆಯೂ ಜಟಾಪಟಿ ನಡೆದಿದ್ದು ಸಸ್ಪೆಂಡ್ ಮಾಡೋದಾಗಿ ಡಿಸಿ ಸತ್ಯಭಾಮ ವಾರ್ನಿಂಗ್ ನೀಡಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಹಾಸನ ದೇವಾಲಯದ ಆವರಣ ಮಾತಿನ ಚಕಮಕಿ, ಜಟಾಪಟಿಗೆ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us