ಟಿಕೆಟ್ಗಾಗಿ ಶತಾಯ ಗತಾಯ ಪ್ರಯತ್ನಿಸುತ್ತಿರುವ ಸೈನಿಕ
ಹೈಕಮಾಂಡ್ ನಾಯಕರಿಗೆ ಮತ್ತೊಂದು ಎಚ್ಚರಿಕೆ ಸಂದೇಶ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸೈನಿಕ
ಚನ್ನಪಟ್ಟಣ ಬೈ ಎಲೆಕ್ಷನ್ ಮೈತ್ರಿ ಟಿಕೆಟ್ ವಿಚಾರ ಇನ್ನೂ ಬಗೆಹರಿದಿಲ್ಲ.. ಸಿಪಿ ಯೋಗೇಶ್ವರ್ -ಜೆಡಿಎಸ್ ನಡುವೆ ತಿಕ್ಕಾಟ ನಡೀತಿದೆ. ಈ ಹಿಂದೆಡೆ ಬಂಡಾಯದ ಬಾಂಬ್ ಸಿಡಿಸಿದ್ದ ಬಿಜೆಪಿ ಸೈನಿಕ, ಇದೀಗ ಹೈಕಮಾಂಡ್ ನಾಯಕರಿಗೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಅದೇನು ಗೊತ್ತಾ?.
ಚನ್ನಪಟ್ಟಣ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಸೇರ್ತಾರಾ ಸಿಪಿವೈ?
ಚನ್ನಪಟ್ಟಣ ಬೈ ಎಲೆಕ್ಷನ್ ಮೈತ್ರಿ ಟಿಕೆಟ್ ವಿಚಾರ ಇನ್ನೂ ಬಗೆಹರಿದಿಲ್ಲ.. ಚನ್ನಪಟ್ಟಣ ಟಿಕೆಟ್ ಗಿಟ್ಟಿಸಿಕೊಳ್ಳಬೇಕೆಂದು ಸಿ.ಪಿ ಯೋಗೇಶ್ವರ್ ಶತಾಯ ಗತಾಯ ಪ್ರಯತ್ನ ಮಾಡ್ತಿದ್ದಾರೆ. ಈ ಹಿಂದೆ ಟಿಕೆಟ್ ಸಿಗದಿದ್ದರೆ ಬಂಡಾಯದ ಬಾಂಬ್ ಅನ್ನು ಸೈನಿಕ ಸಿಡಿಸಿದ್ದರು. ಇದೀಗ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಮೈತ್ರಿ ನಾಯಕರಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ಮಳೆ ಆರ್ಭಟ.. 170ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, 64 ಮಂದಿ ನಾಪತ್ತೆ
ಚನ್ನಪಟ್ಟಣದ ಬೈ ಎಲೆಕ್ಷನ್ ವಿಚಾರದಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಮೈತ್ರಿ ಟಿಕೆಟ್ ವಿಚಾರ ಕಗ್ಗಂಟಾಗಿದ್ದು, ಟಿಕೆಟ್ ಯಾರ ಪಾಲಾಗುತ್ತಲ್ಲೇ ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ. ಜೆಡಿಎಸ್ ಮತ್ತು ಬಿಜೆಪಿಯ ನಾಯಕರು ತಮಗೆ ಟಿಕೆಟ್ ಸಿಗಬಹುದೆಂದು ಈಗಾಗಲೇ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಇದರ ನಡುವೆ ಮೈತ್ರಿ ಟಿಕೆಟ್ ಕೈ ತಪ್ಪಿದ್ರೆ, ಕಾಂಗ್ರೆಸ್ ಸೇರ್ಪಡೆ ಆಗ್ತೀರಾ ಎಂಬ ಪ್ರಶ್ನೆಗೆ ಬಿಜೆಪಿಯ ಸೈನಿಕ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು, ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನಾನು ಇದುವರೆಗೂ ಆ ತರ ಯೋಚನೆ ಮಾಡಿಲ್ಲ. ಆದರೆ ರಾಜಕಾರಣದಲ್ಲಿ ಏನೂ ಹೇಳುವುದಕ್ಕೆ ಆಗಲ್ಲ. ಕಾಂಗ್ರೆಸ್ನಿಂದ ಯಾರೂ ಏನು ಚರ್ಚೆ ಮಾಡಿಲ್ಲ. ಸ್ಪರ್ಧೆ ಮಾಡಬೇಕು ಅಂತ ಬಹಳ ಒತ್ತಡ ಇದೆ. ಮುಂದೆ ನೋಡುತ್ತೇನೆ. ಪಕ್ಷಂತಾರ ಮಾಡಬೇಕಂತ ಯೋಚನೆ ಇಲ್ಲ. ರಾಜ್ಯದ ಇವತ್ತಿನ ಪರಿಸ್ಥಿತಿ ನೋಡಿದರೆ ಯಾರೂ ಊಹೆ ಮಾಡದ ರೀತಿ ಘಟನೆ ನಡೀತ್ತಿವೆ. ರಾಜಕರಾಣದಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಇವೆಲ್ಲ ಸಾಕ್ಷಿ ಅಷ್ಟೇ.
ಸಿ.ಪಿ.ಯೋಗೇಶ್ವರ್, ಎಂಎಲ್ಸಿ
ಬಿಜೆಪಿ ವರಿಷ್ಠರ ತೀರ್ಮಾನದ ಮೇಲೆ ಸಿಪಿವೈ ನಡೆ
ದಳಪತಿ ಮತ್ತು ಸೈನಿಕನ ನಡುವೆ ಟಿಕೆಟ್ ವಿಚಾರವಾಗಿ ಹಗ್ಗಜಗ್ಗಾಟ ನಡೀತ್ತಿದ್ದು. ಇದು ಹೈಕಮಾಂಡ್ ಅಂಗಳವನ್ನೂ ತಲುಪಿತ್ತು. ಸದ್ಯ ಬಿಜೆಪಿ ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡ ಕಾರಣ, ಹೈಕಮಾಂಡ್ ತೀರ್ಮಾನ ಕಾದು ನೋಡೋಣ ಎಂದಿದ್ದಾರೆ.
‘ವರಿಷ್ಠರ ತೀರ್ಮಾನ ಬದ್ಧವಾಗಿರಬೇಕು’
ಮುಂದಿನ ತಿಂಗಳು 10ನೇ ತಾರೀಖು ಆಗತ್ತದೆಂದು ಎಲ್ಲರೂ ಮಾತನಾಡುತ್ತಿದ್ದಾರೆ. ಚುನಾವಣೆ ಘೋಷಣೆ ಆದ ಮೇಲೆ 2 ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ಬದ್ಧವಾಗಿ ಇರಬೇಕಾಗುತ್ತದೆ. ಚುನಾವಣೆ ಕಣದಲ್ಲಿ ನೀವು ಇರಬೇಕಂತ ಜನರ ಒತ್ತಾಯ ಇದೆ. ಪಕ್ಷದ ಕಾರ್ಯಕರ್ತನಾಗಿದ್ದರಿಂದ ಪಕ್ಷದ ಮಾತು ಕೇಳಬೇಕಾಗುತ್ತದೆ. ಸಮಯ ಬರಲಿ ನೋಡೋಣ.
ಸಿ.ಪಿ.ಯೋಗೇಶ್ವರ್, ಎಂಎಲ್ಸಿ
ಚನ್ನಪಟ್ಟಣ ಉಪಕದನ ಕಾಂಗ್ರೆಸ್ ಮತ್ತು ಮೈತ್ರಿ ಪಡೆಗೆ ಪ್ರತಿಷ್ಟೆಯ ಕದನವಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಠಕ್ಕರ್ ಕೊಟ್ಟಿರುವ ಸೈನಿಕ, ಚುನಾವಣೆ ವೇಳೆ ಇದೆಲ್ಲ ಕಾಮನ್ ಅಂದಿದ್ದಾರೆ.
ಇದನ್ನೂ ಓದಿ: RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?
ಉಪ ಚುನಾವಣೆ ಬಂದಾಗ ಎಲ್ಲ ರಾಜ್ಯ ಸರ್ಕಾರಗಳು ಈ ರೀತಿ ಮಾಡುತ್ತಾರೆ. ಮಂಡ್ಯದಲ್ಲಿ ಬೈಎಲೆಕ್ಷನ್ ಬಂದಾಗ ಈ ರೀತಿ ಹಲವಾರು ಘೋಷಣೆ ಮಾಡಿದ್ದರು. ಚುನಾವಣೆ ಉದ್ದೇಶದಿಂದ ಘೋಷಣೆ ಮಾಡುವ ಕಾರ್ಯಕ್ರಮಕ್ಕೂ ಬಜೆಟ್ನಲ್ಲಿ ಘೋಷಣೆ ಮಾಡಿ ಅದನ್ನು ಅನುಷ್ಠಾನ ಮಾಡುವುದಕ್ಕೂ ವ್ಯತ್ಯಾಸ ಇದೆ. ಚುನಾವಣೆಯಲ್ಲಿ ಘೋಷಣೆಯಾದ ಮೇಲೆ ಯೋಜನೆಗಳಿಗೆ ಮಹತ್ವ ಇರಲ್ಲ.
ಸಿ.ಪಿ.ಯೋಗೇಶ್ವರ್, ಎಂಎಲ್ಸಿ
ಬೊಂಬೆನಾಡಿನ ಉಪ ಚುನಾವಣೆ ಮೈತ್ರಿ ಪಡೆಗೆ ಬಿಸಿ ತುಪ್ಪವಾಗಿದೆ. ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ