ಹನಿಟ್ರ್ಯಾಪ್ ಆಗಿಲ್ಲ, ಸುಪಾರಿ ಪಡೆದು ಕೊಲೆಯತ್ನ -ಪೆನ್​ಡ್ರೈ ಸಮೇತ ದೂರು ಕೊಟ್ಟ ರಾಜಣ್ಣ ಪುತ್ರ

author-image
Gopal Kulkarni
Updated On
ಬೆಲೆ ಏರಿಕೆ, ಗೊಂದಲ, ಗದ್ದಲದ ನಡುವೆ ದೆಹಲಿಗೆ ಫ್ಲೈಟ್ ಬುಕ್ ಮಾಡಿದ CM, DCM.. ಮುಂದೇನು..?
Advertisment
  • ಕೊಲೆ ಮಾಡಲು ಸುಪಾರಿ ಆರೋಪದ ಬಗ್ಗೆ ರಾಜೇಂದ್ರರಿಂದ ದೂರು
  • ಡಿಜಿ ಸಲಹೆಯಂತೆ ತುಮಕೂರು ಎಸ್​ಪಿಗೆ ದೂರು ನೀಡಿದ ಎಂಎಲ್​ಸಿ
  • ಹುಡುಗಿ-ಹುಡುಗ ಸಂಭಾಷಣೆಯಿರುವ ಪೆನ್​ಡ್ರೈವ್​ ಸಮೇತ ದೂರು

ಕಳೆದ ನವೆಂಬರ್​ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದ ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ ಎಂಎಲ್​ಸಿ ಸಿ ರಾಜೇಂದ್ರ ತುಮಕೂರು ಎಸ್​ಪಿಗೆ ದೂರು ನೀಡಿದ್ದಾರೆ. ದೂರು ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿ ರಾಜೇಂದ್ರ, ನಾನು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಗೆ ದೂರು ನೀಡಿದ್ದೇನೆ. ತುಮಕೂರು ಎಸ್​ಪಿಗೆ ದೂರು ನೀಡುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ಇವತ್ತು ದೂರು ತುಮಕೂರು ಎಸ್​​ಪಿಗೆ ದೂರು ಕೊಟ್ಟಿದ್ದೇನೆ. ನನ್ನ ಮಗಳ ಬರ್ತ್​​ಡೇ ದಿನದಂದು ನನ್ನ ಕೊಲೆಗೆ ಯತ್ನಿಸಿದ್ದರು. ಕೊಲೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಅದರಲ್ಲಿ ಐದು ಲಕ್ಷ ರೂಪಾಯಿ ಪಡೆದಿದ್ದಾರೆ. ಇದೆಲ್ಲಾ ಆಡಿಯೋ ನನ್ನ ಬಳಿ ಇದೆ. ಒಂದು ಹುಡುಗಿ ಹುಡುಗನ ನಡುವೆ ನಡೆದ ಸಂಭಾಷಣೆ ಆಡಿಯೋ ಇದೆ. ಹೀಗಾಗಿ ಭದ್ರತೆ ಕೊಡಿ ಎಂದು ಕೂಡ ಪೊಲೀಸ್ ಇಲಾಖೆಗೆ ಕೇಳಿದ್ದೇನೆ ಎಂದು ಸಿ ರಾಜೇಂದ್ರ ಹೇಳಿದ್ದಾರೆ.

ಇದನ್ನೂ ಓದಿ:CM ಸ್ಥಾನಕ್ಕಾಗಿ RAC ಟಿಕೆಟ್, ಟ್ರಾಫಿಕ್ ಜಾಮ್ ಆದ್ರೆ ನಂಗೂ ಸಿಗಬಹುದು- ದೆಹಲಿ ಭೇಟಿ ಬೆನ್ನಲ್ಲೇ ಸತೀಶ್ ನಿಗೂಢ ಹೇಳಿಕೆ

publive-image

ನಾನು, ನಾನಾಗಲಿ ನನ್ನ ಕೆಲಸ ಆಗಲಿ ಅಂತ ಇದ್ದೋನು. ನನ್ನ ಮುಗಿಸಲು ಸುಪಾರಿ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಸೋಮ ಮತ್ತು ಭರತ್ ಅನ್ನೋ ಹೆಸರು ಆಡಿಯೋದಲ್ಲಿದೆ. ಅವರಿಬ್ಬರು ಯಾರು ಅಂತ ಕೂಡ ನನಗೆ ಗೊತ್ತಿಲ್ಲ. ಲೇಡಿ ಮತ್ತು ಒಬ್ಬ ಹುಡುಗ ಮಾತಾಡಿರುವ ಆಡಿಯೋ ಅದು. 18 ನಿಮಿಷದ ಸಂಭಾಷಣೆ ಆಡಿಯೋದಲ್ಲಿದೆ. ಸುಪಾರಿ ಕೊಟ್ಟಿದ್ದಾರೆ ಹೊಡೆಯಬೇಕು ಅಂತ. ಇದರ ವಿಚಾರವೇನು ಎಂಬುದರ ಬಗ್ಗೆ ತನಿಖೆಯಾಗಬೇಕು. ಯಾವ ಕಾರಣಕ್ಕೆ ನನ್ನ ಮೇಲೆ ದ್ವೇಷ ಇದೆ ಎಂಬುದು ಗೊತ್ತಾಗಬೇಕು ಅಂತ ರಾಜೇಂದ್ರ ಹೇಳಿದ್ದಾರೆ.

ಇದನ್ನೂ ಓದಿ:ಹನಿಟ್ರ್ಯಾಪ್ ಕೇಸ್​ಗೆ CID ಎಂಟ್ರಿ; ಸಚಿವ ರಾಜಣ್ಣ ಮನೆಯಲ್ಲಿ ತಲಾಷ್, ಹೊಸ ತಿರುವು..!

ಈ ಬಗ್ಗೆ ಮತಷ್ಟು ಮಾಹಿತಿ ಹಂಚಿಕೊಂಡಿರುವ ಎಂಎಲ್​ಸಿ ರಾಜೇಂದ್ರ, ಜಿಪಿಎಸ್​ ಚಿಪ್ ನನ್ನ ಕಾರಿಗೆ ಅಳವಡಿಸಬೇಕು ಅಂತಾ ಇದ್ರಂತೆ. ಜನವರಿಯಲ್ಲಿ ನನ್ನ ಸರ್ಕಲ್​ನಲ್ಲಿ ಅದು ಸಿಕ್ತು. ನಾನು ತಮಾಷೆ ಅಂತ ಸುಮ್ಮನಾಗಿದ್ದೆ. ಆದ್ರೆ ಅದು ಗಂಭೀರ ವಿಷಯ ಎಂದು ಗೊತ್ತಾಗಿ ಈಗ ದೂರು ನೀಡಿದ್ದೇನೆ. ಹನಿಟ್ರ್ಯಾಪ್ ವಿಚಾರಾಗಿ ಸಿಐಡಿ ತನಿಖೆ ನಡೆಸುತ್ತಿದೆ. ಅವರು ನಿನ್ನೆ ಬೆಂಗಳೂರಿನ ಮನೆ ಹತ್ತಿರ ಬಂದಿದ್ದಾರೆ, ತನಿಖೆ ನಡೆಸುತ್ತಾರೆ. ಶಾಮಿಯಾನ ಹಾಕೋರು ನನ್ನ ಸ್ನೇಹಿತರೇ ಇದ್ದಾರೆ. ಸುಮ್ಮನೆ ಅವರನ್ನು ಎಳೆಯೋಕೆ ಇಷ್ಟವಿಲ್ಲ ಎಂದು ರಾಜೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment