/newsfirstlive-kannada/media/post_attachments/wp-content/uploads/2025/02/MND-BHURKHA-LADY.jpg)
ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡು ಎಂದು ಹಿರಿಯರು ಹೇಳಿರುತ್ತಾರೆ. ಆದ್ರೆ ಎಷ್ಟೋ ಬಾರಿ ದುಡುಕಿನ ನಿರ್ಧಾರದಿಂದ ಏನೇನೋ ಮಾಡುತ್ತೇವೆ. ಅದೇ ರೀತಿ ಇಲ್ಲಿಯೂ ನಡೆದೇ ಹೋಯ್ತು. ಮಕ್ಕಳಿಗಾಗಿ ತಾಯಿ ಮಾಡಿದ ತ್ಯಾಗಕ್ಕೆ ಜನ ಕೊಟ್ಟ ಪಟ್ಟ ಕಳ್ಳಿ.. ಆದ್ರೆ ಪೊಲೀಸ್ ವಿಚಾರಣೆ ಬಳಿಕ ಗೊತ್ತಾಗಿದ್ದು ಆಕೆ ಕಳ್ಳಿ ಅಲ್ಲ ಮಹಾತಾಯಿ ಅಂತ.
ಹಿಜಾಬು, ನಕಾಬು ಅಂತಾ ಬಿಜೆಪಿಯವರು ವಿರೋಧ ಮಾಡ್ತಾರೆ.. ಇವ್ರು ಅನ್ಯ ಧರ್ಮದವರು ಶೋಭಾ ಬುರ್ಖಾ ಹಾಕಿಕೊಂಡು ಮಕ್ಕಳನ್ನ ಹಿಡೀತಿದ್ದಾರೆ ನೀವು ಮಂಡ್ಯದವ್ರು.. ಆಧಾರ್ ಕಾರ್ಡ್ನಲ್ಲಿ ಶೋಭಾ ಅಂತ ಇದೆ ಹೀಗೆ ಸ್ಥಳೀಯರು ಹಿಡಿದು ಮಹಿಳೆಯನ್ನ ವಿಚಾರಣೆ ನಡೆಸಿರೋದು ಬೆಂಗಳೂರಿನಲ್ಲಿ.
ನಿನ್ನೆ ಬೆಳಿಗ್ಗೆಯಿಂದ ಭಾರೀ ಚರ್ಚೆಯಲ್ಲಿದ್ದ ಶೋಭಾ ಎಂಬ ಮಹಿಳೆಯ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಚಂದ್ರಾಲೇಔಟ್ ಬಳಿ ನಿನ್ನೆ ಬೆಳಗ್ಗೆಯಿಂದ ಶೋಭಾ ಎಂಬ ಮಹಿಳೆಯೊಬ್ಬಳು ಬುರ್ಖಾ ಧರಸಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಳು ಎಂದು ಸ್ಥಳೀಯರು ಆಕೆಯನ್ನ ಮಕ್ಕಳ ಕಳ್ಳಿ ಎಂದೇ ಅಂದುಕೊಂಡಿದ್ದರು. ಅಲ್ಲದೇ ಈಕೆ ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಮುಂದಾಗಿದ್ದಾಳೆಂದು ಸ್ಥಳೀಯರು ಹಲ್ಲೆ ಕೂಡಾ ಮಾಡಿ, ಚಂದ್ರಾಲೇಔಟ್ ಠಾಣಾ ಪೊಲೀಸರಿಗೂ ಒಪ್ಪಿಸಿದ್ದಾರೆ. ಆದರೆ ತನಿಖೆ ವೇಳೆ ಈಕೆ ಮಕ್ಕಳ ಕಳ್ಳಿಯಲ್ಲ, ಮಗುವಿನ ಚಿಕಿತ್ಸೆಗಾಗಿ ಈ ರೀತಿ ವೇಷ ಧರಿಸಿರುವುದಾಗಿ ಬಹಿರಂಗವಾಗಿದೆ.
ಇದನ್ನೂ ಓದಿ: ಯದುವೀರ್ 2ನೇ ಪುತ್ರನ ನಾಮಕಾರಣ; ಯುಗಾಧ್ಯಕ್ಷ ಕೃಷ್ಣದತ್ತ ಚಾಮರಾಜ ಒಡೆಯರ್ ಫೋಟೋ ಇಲ್ಲಿವೆ!
ಮೂಲತಃ ಮಂಡ್ಯ ಜಿಲ್ಲೆಯವರಾದ ಶೋಭಾಗೆ 6 ಮತ್ತು 4 ವರ್ಷದ ಇಬ್ಬರು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದ್ರೆ ದುರಾದೃಷ್ಟವೆಂಬಂತೆ ಎರಡನೇ ಮಗು ಜಾಂಡೀಸ್ ಕಾಯಿಲೆಯಿಂದಾಗಿ ಬಳಲುತ್ತಿದೆ. ಎರಡು ದಿನಗಳ ಹಿಂದಷ್ಟೇ ಮಗುವನ್ನ ಆಸ್ಪತ್ರೆಯಿಂಡ ಡಿಸ್ಚಾರ್ಜ್ ಮಾಡಿಸಿದ್ದಾಳೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಶೋಭಾಗೆ ಮುಂದಿನ ದಾರಿ ತೋಚದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಗುವಿನ ಚಿಕಿತ್ಸೆ ಗಾಗಿ ಬುರ್ಖಾ ಧರಿಸಿ ಭಿಕ್ಷೆ ಬೇಡಲು ಈ ಮಹಾತಾಯಿ ಮುಂದಾಗಿದ್ದಾಳೆ. ರಂಜಾನ್ ಟೈಮಲ್ಲಿ ಬುರ್ಖಾ ಹಾಕಿಕೊಂಡು ಭಿಕ್ಷೆ ಬೇಡಿದ್ರೆ ಹಣ ಸಿಗುತ್ತೆ ಅನ್ನೋದು ಈಕೆಯ ನಂಬಿಕೆ. ಇದೇ ಕಾರಣದಿಂದ ಬುರ್ಖಾ ಧರಸಿಲು ಶೋಭಾ ನಿರ್ಧರಿಸಿದ್ದಾಳೆ.
ಇದನ್ನೂ ಓದಿ: ಶಿವರಾತ್ರಿ ಜಾಗರಣೆಗೆ ದೇವಾಲಯಕ್ಕೆ ಹೋಗ್ತಿದ್ದ 30 ಭಕ್ತರ ಮೇಲೆ ಆನೆ ಹಿಂಡು ದಾಳಿ
ಆದರೆ ಶೋಭಾಳನ್ನ ಕಂಡ ಸ್ಥಳೀಯರು ಮಕ್ಕಳ ಕಳ್ಳಿ ಅಂತಾ ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚಂದ್ರಾಲೇಔಟ್ ಪೊಲೀಸರು, ಶೋಭಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶೋಭಾಳ ಹೃದಯವಿದ್ರಾವಕ ಕಥೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಪೊಲೀಸರು ಶೋಭಾಳನ್ನ ಸಂತೈಸಿ ಠಾಣೆಯಲ್ಲಿ ಬುದ್ದಿ ಹೇಳಿ ಕಳುಹಿಸಿಕೊಟ್ಟಿದ್ದಾರೆ. ಅದ್ಹೇನೆ ಇರಲಿ ಮಕ್ಕಳಿಗಾಗಿ ಈ ಮಹಾತಾಯಿ ಕಷ್ಟವನ್ನ ಮೆಚ್ಚಲೇ ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ