/newsfirstlive-kannada/media/post_attachments/wp-content/uploads/2025/02/COST-GOD-RAISEING-DAY.jpg)
ದೇಶದ ಸಮುದ್ರ ಗಡಿಯ ಪ್ರೆಹರಿಗಳಾದ ಭಾರತೀಯ ತಟರಕ್ಷಣಾ ಪಡೆ ಕೋಸ್ಟ್ ಗಾರ್ಡ್ ದಿನಚಾರಣೆಯನ್ನು ಮಂಗಳೂರಿನ ಕಡಲ ಕಿನಾರೆಯಿಂದ ದೂರ ಆಳ ಸಮುದ್ರದಲ್ಲಿ ಅದ್ದೂರಿಯಿಂದ ಆಚರಿಸಲಾಗಿದೆ. ಕೋಸ್ಟ್ ಗಾರ್ಡ್ ನ ರೈಸಿಂಗ್ ಕಾರ್ಯಕ್ರಮದ ಅಂಗವಾಗಿ ಕೋಸ್ಟ್ ಗಾರ್ಡ್ ಪಡೆ ನಡೆಸುವ ಅಪಾಯಕಾರಿ ಕಾರ್ಯಚರಣೆಗಳ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು . ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡು ಅಣಕು ಕಾರ್ಯಾಚರಣೆ ವೀಕ್ಷಿಸಿದರು.
ಆಳ ಸಮುದ್ರದಲ್ಲಿ ಹೆಲಿಕಾಪ್ಟರ್ಗಳ ಮೂಲಕ ಕಣ್ಗಾವಲು, ಭಾರತದ ಸಮುದ್ರ ಗಡಿಯೊಳಗೆ ನುಸುಳಲು ಯತ್ನಿಸುವ ನುಸುಳುಕೋರರ ಬೋಟ್ನ್ನು ಸ್ಪೀಡ್ ಬೋಟ್ಗಳು ಸುತ್ತುವರೆದು ಸೆರೆಹಿಡಿರುವ ಅಪಾಯಕಾರಿ ಸನ್ನಿವೇಶ.. ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸುವ ಉಗ್ರರನ್ನು 51 MM ಮೊರಾಟ್ ಫೈರ್ ಮಾಡಿ ಹಿಮ್ಮೆಟ್ಟಿಸುವುದು.. ಅಪಾಯದಲ್ಲಿದ್ದವರ ರಕ್ಷಣೆ.. ಈ ವೇಳೆ ಸಮುದ್ರಕ್ಕೆ ಬಿದ್ದವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ.. ಹೀಗೆ ತರಹೇವಾರಿ ಮೈ ಜುಮ್ ಎನಿಸುವಂತ ಸಾಹಸ ಸೇರಿದಂತೆ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಅಣಕು ಕಾರ್ಯಾಚರಣೆ ಕಡಲನಗರಿಯ ಕಡಲಾಳದಲ್ಲಿ ನಡೆಯಿತು.
ಇದನ್ನೂ ಓದಿ:ಹೊಸ ಜೀವನ ಆರಂಭ.. ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?
ಭಾರತೀಯ ತಡರಕ್ಷಣಾ ಪಡೆ ಸ್ಥಾಪನೆಗೊಂಡು 49 ವರ್ಷ ಪೂರ್ಣಗೊಂಡ ಹಿನ್ನೆಲೆ ಭಾರತೀಯ ಕೋಸ್ಟ್ ಗಾರ್ಡ್ ರೈಸಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡಿದ್ದರು. ಭಾರತೀಯ ಕರಾವಳಿ ಭದ್ರತಾ ಪಡೆ ಸಂಸ್ಥಾಪನಾ ದಿನಾಚರಣೆಯನ್ನು ಕಡಲಾಳದಲ್ಲಿ ಸಂಭ್ರಮ ಹಾಗೂ ಸಾಹಸದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಳ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಪಡೆ ನಡೆಸುವ ಅಪಾಯಕಾರಿ ಕಾರ್ಯಾಚರಣೆಗಳ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು. ಮಂಗಳೂರು ಕಡಲ ಕಿನಾರೆಯಿಂದ ದೂರದ ಆಳ ಸಮುದ್ರದಲ್ಲಿ 20 ನಾಟಿಕಲ್ ಮೈಲ್ಸ್ ದೂರದಲ್ಲಿ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಅಣಕು ಪ್ರದರ್ಶನಲ್ಲಿ ICGS ವರಾಹ ಮತ್ತು ICGS ಸಕ್ಷಮ್, ICGS ಅಮರ್ತ್ಯ, ICGS ಸಾವಿತ್ರಿಬಾಯಿ ಪುಲೆ ಕೋಸ್ಟ್ ಗಾರ್ಡ್ ಹಡಗುಗಳು, 2 ಇಂಟರ್ ಸೆಪ್ಟರ್ ಬೋಟ್ಗಳಾದ CG 448 , CG 420, ಸೇರಿದಂತೆ ಹೆಲಿಕಾಪ್ಟರ್ಗಳು ಭಾಗವಹಿಸಿದ್ದವು.
ಇದನ್ನೂ ಓದಿ: Basant Panchami: ಇಂದು ಮಹಾಕುಂಭಮೇಳದ ಕೊನೆಯ ಅಮೃತ ಸ್ನಾನ; ಮಹತ್ವದ ಬದಲಾವಣೆಗಳು!
ಭಾರತೀಯ ಕೋಸ್ಟ್ ಗಾರ್ಡ್, ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿದ್ದು, ಕಡಲ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಸುಮಾರು 7,500 ಕಿಲೋಮೀಟರ್ ಕಡಲ ಗಡಿಗಳ ರಕ್ಷಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊಂದಿದೆ. ಕಡಲ ತೀರ ಅಂತಾರಾಷ್ಟ್ರೀಯ ಸಮುದ್ರ ಗಡಿಭಾಗದಲ್ಲಿ ಕಣ್ಗಾವಲು, ಶೋಧ ಮತ್ತು ರಕ್ಷಣೆ ಹೊಣೆ ಹೊತ್ತಿರುವ ಕೋಸ್ಟ್‌ಗಾರ್ಡ್ ಯಾವುದೇ ಕಠಿಣ ಪರಿಸ್ಥಿತಿ ನಿಭಾಯಿಸಲು ಸದಾ ಸಿದ್ಧವಾಗಿರುತ್ತದೆ. ಈ ಸಂದೇಶ ಸಾರಲೆಂದೇ ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ವಿವಿಧ ಅಣಕು ಪ್ರದರ್ಶನ ಮೂಲಕ ತಮ್ಮ ಸಾಹಸ ಪ್ರದರ್ಶಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ