/newsfirstlive-kannada/media/post_attachments/wp-content/uploads/2024/09/mobile-use-1.jpg)
ಆಧುನಿಕ ಜಗತ್ತಿನಲ್ಲಿ ಎಲ್ಲರಿಗೂ ಮೊಬೈಲ್ ಬೇಕೇ ಬೇಕು. ಕಾರಣ ನಮ್ಮ ಬದುಕಿನಲ್ಲಿ ಫೋನ್ ವಿಶೇಷ ಪಾತ್ರವಹಿಸುತ್ತದೆ. ಇಡೀ ದಿನ ಫೋನ್‌ನಲ್ಲಿ ಬ್ಯುಸಿಯಾಗಿರುತ್ತೇವೆ. ಒಂದೇ ಒಂದು ನಿಮಿಷ ಫೋನ್ ಕೈಯಲ್ಲಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಫೋನ್ ಇಲ್ಲದೇ ಬದುಕುವುದೇ ಕಷ್ಟ. ಆದರೆ, ಈ ಅತಿಯಾದ ಫೋನ್ ಬಳಕೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
2 ಗಂಟೆಗಿಂತ ಹೆಚ್ಚು ಫೋನ್ ಬಳಕ್ಕೆ ಡೇಂಜರ್
ಯಾರೇ ಆಗಲಿ ದಿನಕ್ಕೆ 2 ಗಂಟೆಗಳಿಗಿಂತ ಹೆಚ್ಚು ಕಾಲ ಫೋನ್ ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಫೋನ್ಗಳ ಬಳಕೆಯಿಂದ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿದ್ರೆಯನ್ನು ಹಾಳುಮಾಡಬಹುದು ಎನ್ನುತ್ತಾರೆ. ಜೊತೆಗೆ ಅತಿಯಾದ ಫೋನ್ ಬಳಕೆ ದೈಹಿಕ ಚಟುವಟಿಕೆಗಳಿಂದ ದೂರವಿಡುತ್ತದೆ. ಇದು ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಪರಿಣಾಮ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ ಅನ್ನೋದು ತಜ್ಞರ ವಾದ.
ವಯಸ್ಕರಿಗೆ ಎಷ್ಟು ಗಂಟೆ ಬಳಸಬಹುದು?
ಇನ್ನು, ವಯಸ್ಕರು ದಿನಕ್ಕೆ 3 ರಿಂದ 4 ಗಂಟೆಗಳ ಕಾಲ ಫೋನ್ ಬಳಸುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಅಗತ್ಯ ಮತ್ತು ಅನುಗುಣವಾಗಿ ಫೋನ್ ಬಳಕೆ ಮಾಡಬೇಕು. ನಿಮ್ಮ ಕೆಲಸವು ಫೋನ್ ಅಥವಾ ಕಂಪ್ಯೂಟರ್‌ನ ಮೇಲೆ ಅವಲಂಬಿತವಾಗಿದ್ದರೆ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಬೇಕು. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು. ಅತಿಯಾದ ಫೋನ್ ಬಳಕೆ ಕಣ್ಣಿನ ಆಯಾಸ, ತಲೆನೋವು ಮತ್ತು ಒತ್ತಡಕ್ಕೆ ಕಾರಣವಾಗಬಹುದು.
ವಯಸ್ಸಾದವರ ಕಥೆಯೇನು?
ಇಷ್ಟೇ ಅಲ್ಲ ವಯಸ್ಸಾದವರು ಸೀಮಿತ ಅವಧಿಗೆ ಫೋನ್‌ಗಳನ್ನು ಬಳಸಬೇಕು. ವಿಶೇಷವಾಗಿ ಅವರಿಗೆ ಕಣ್ಣು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಫೋನ್ ಬಳಸೋದನ್ನೇ ಕಡಿಮೆ ಮಾಡಬೇಕು. ದಿನಕ್ಕೆ 1 ರಿಂದ 2 ಗಂಟೆಗಳ ಕಾಲ ಫೋನ್ ಬಳಸಿದರೆ ಪರವಾಗಿಲ್ಲವಂತೆ.
ಅತಿಯಾದ ಫೋನ್ ಬಳಕೆ ಮಾಡಿದಲ್ಲಿ ಕಣ್ಣಿನ ಆಯಾಸ ಮತ್ತು ನೋವು, ನಿದ್ರೆಯ ಕೊರತೆ, ಮಾನಸಿಕ ಒತ್ತಡ, ಸಾಮಾಜಿಕ ಜೀವನದ ಕೊರತೆ, ದೈಹಿಕ ಚಟುವಟಿಕೆಯ ಕೊರತೆ ಎದುರಾಗುತ್ತದೆ.
ಇದನ್ನೂ ಓದಿ:RCB 2025: ಡೆಲ್ಲಿ ವಿರುದ್ಧ ಬಲಿಷ್ಠ ಆರ್ಸಿಬಿ ತಂಡ ಕಣಕ್ಕೆ; ಸ್ಟಾರ್ ಪ್ಲೇಯರ್ ಎಂಟ್ರಿಯಿಂದ ಆನೆಬಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ