/newsfirstlive-kannada/media/post_attachments/wp-content/uploads/2023/10/MOBILE_PUBG.jpg)
ಆಧುನಿಕ ಯುಗದಲ್ಲಿ ಜನರ ಜೀವನ ಶೈಲಿ ತುಂಬಾ ಬದಲಾಗಿದೆ. ಎಲ್ಲವೂ ಬೆರಳ ತುದಿಯಲ್ಲಿಯೇ ಸಿಗುತ್ತಿದೆ. ಆದರೀಗ ಅದೇ ಬೆರಳುಗಳಿಗೆ ಟ್ರಬಲ್ ನೀಡುವ ಸಮಸ್ಯೆ ಕಾಡಲಾರಂಭಿಸಿದೆ. ನೀವು ನಿರಂತರವಾಗಿ ಸಿಸ್ಟಂ ಟೈಪ್ ಮಾಡುತ್ತಲೇ ಇದ್ದು, ಮೊಬೈಲ್ ಕೂಡ 24 ಗಂಟೆ ಸ್ಕ್ರಾಲ್ ಮಾಡುವ ಅಭ್ಯಾಸ ಇದ್ರೆ ಸಮಸ್ಯೆ ಗ್ಯಾರಂಟಿ.
ಮೊಬೈಲ್ ಗೇಮಿಂಗ್ ಚಟ ಹೆಬ್ಬೆರಳಿಗೆ ಕಂಟಕ
ಊಟ, ತಿಂಡಿ ಬಿಡ್ತಾರೆ. ಓದು, ಕೆಲಸನೂ ಬಿಡ್ತಾರೆ. ಆದ್ರೆ ಪಬ್ಜಿ ಗೇಮ್ ಆಡೋದನ್ನ ಮಾತ್ರ ಬಿಡೋದಿಲ್ಲ. ಇದು ಪಬ್ ಜಿ ಗೇಮ್ ಅಡಿಕ್ಟ್ಗಳ ಪರಿಸ್ಥಿತಿ. ನಿಮಗೂ ಕೂಡ ಪಬ್ ಜಿ ಗೇಮ್ನ ಕ್ರೇಜ್ ಸಿಕ್ಕಾಪಟ್ಟೆ ಇದ್ರೆ, ನಿಮ್ಮ ಹೆಬ್ಬರೆಳಿಗೆ ಆಪತ್ತು ಫಿಕ್ಸ್.
ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ಮೊಬೈಲ್ಗೆ ತೀರ ಅಡಿಕ್ಟ್ ಆಗಿ ಪಬ್ ಜೀ ಆಟ ಆಡೋರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ. 2 ರಷ್ಟು ಜನರು ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಹಿಂದಿನ ಡಾಟಾಗೆ ಹೋಲಿಸಿದರೆ ಸಿಲಿಕಾನ್ ಸಿಟಿಯಲ್ಲಿ ಈ ಸಂಖ್ಯೆ ಬಹುತೇಕ ಹೆಚ್ಚಳವಾಗಿದೆ.
ಕಾರ್ಪಲ್ ಟನಲ್ ಸಿಂಡ್ರೋಮ್
- ಪಬ್ ಜಿ ಚಟ ಹೆಚ್ಚಾದ್ಮೇಲೆ ಯುವ ಜನರನ್ನ ಕಾಡ್ತಿದೆ ಸಮಸ್ಯೆ
- ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನೋ ಸಮಸ್ಯೆ ಕಾಡುತ್ತಿದೆ
- ಮೊಬೈಲ್, ಕಂಪ್ಯೂಟರ್ಗಳ ಬಳಕೆ ಹೆಚ್ಚಾಗಿದ್ದರಿಂದ ಈ ಸಮಸ್ಯೆ
- ಹೆಬ್ಬೆರಳಿನಲ್ಲಿ ಕಾಣಿಸಿಕೊಳ್ಳಲ್ಲಿದೆ ಕಾರ್ಪಲ್ ಟನಲ್ ಸಿಂಡ್ರೋಮ್
- ವಿಪರೀತ ನೋವಿನಿಂದಾಗಿ ಬಾಗಿ ಬಿಡತ್ತೆ ನಿಮ್ಮ ಕೈಯ ಹೆಬ್ಬೆರಳು
- ತೋರು ಬೆರಳು ಹಾಗೂ ಮಧ್ಯದ ಬೆರಳುಗಳಿಗೂ ಇದರ ಎಫೆಕ್ಟ್
- ಸಮಸ್ಯೆ ಅನುಭವಿಸುವವರಿಗೂ ಅರಿವಿಗೆ ಬರದಂತೆ ಬೆರಳಲ್ಲಿ ಊತ
- ಈ ಹಿಂದೆ ಇದು ಡಯಾಬಿಟಿಸ್ನಿಂದ ಬಳಲುವವರಲ್ಲಿ ಕಾಣಿಸುತ್ತಿತ್ತು
- ಆದ್ರೀಗ ನಿತ್ಯವೂ ಚಿಕಿತ್ಸೆಗಾಗಿ 10-15 ಮಂದಿ ವೈದ್ಯರ ಬಳಿ ಬರ್ತಿದ್ದಾರೆ
[caption id="attachment_7731" align="alignnone" width="800"] PUBG ಆಡುತ್ತಿರುವುದು[/caption]
ಕಂಪ್ಯೂಟರ್ ಮೊಬೈಲ್ ಬಳಕೆ, ಕಣ್ಣಿಗೆ ಮಾತ್ರವಲ್ಲದೆ ಬೆರಳುಗಳ ಮೇಲು ಬರೆ ಹಾಕಲು ಶುರುಮಾಡಿದ್ದು. ಸಮಸ್ಯೆಗಳಿಂದಾ ತಪ್ಪಿಸಿಕೊಳ್ಳಲು ಆದಷ್ಟೂ ಕಂಪ್ಯೂಟರ್ ಹಾಗೂ ಮೊಬೈಲ್ಗಳಿಂದ ದೂರ ಇರೋದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ